ಕೊರೋನಾ ಕಂಟಕ: ಕರ್ಚೀಫ್ ಇಲ್ಲದೆ ಸೀನಿದವನಿಗೆ ಸಾರ್ವಜನಿಕರಿಂದ ಧರ್ಮದೇಟು!

ವಿಶ್ವಾದ್ಯಂತ ಕೊರೋನಾ ವೈರಸ್​ ಭೀತಿ ಹೆಚ್ಚುತ್ತಲೇ ಇದೆ. ಯಾರಾದರೂ ನೆಗಡಿ ಬಂದು ಸೀನಿದರೆ ಅವರನ್ನು ಅಪರಾಧಿ ಎನ್ನುವ ರೀತಿ ನೋಡಲಾಗುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲ್ಲಾಪುರ: ವಿಶ್ವಾದ್ಯಂತ ಕೊರೋನಾ ವೈರಸ್​ ಭೀತಿ ಹೆಚ್ಚುತ್ತಲೇ ಇದೆ. ಯಾರಾದರೂ ನೆಗಡಿ ಬಂದು ಸೀನಿದರೆ ಅವರನ್ನು ಅಪರಾಧಿ ಎನ್ನುವ ರೀತಿ ನೋಡಲಾಗುತ್ತಿದೆ. 

ಮಹಾರಾಷ್ಟ್ರದಲ್ಲಿ ರಸ್ತೆಯ ಮೇಲೆ  ಕರ್ಚೀಫ್ ಇಲ್ಲದೇ ಸೀನಿದ ವ್ಯಕ್ತಿಯನ್ನು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಈ ಘಟನೆ ನಡೆದಿದೆ. ಬೈಕ್​ ಚಲಾಯಿಸಿಕೊಂಡು ಹೋಗುತ್ತಿದ್ದ ಯುವಕನೋರ್ವ ಸೀನಿದ್ದಾನೆ. ಈ ವೇಳೆ ಆತ ಮುಖಕ್ಕೆ ಅಡ್ಡಲಾಗಿ ಏನನ್ನೂ ಇಟ್ಟುಕೊಂಡಿರಲಿಲ್ಲ. ಇದನ್ನು ನೋಡಿದ ಕೆಲವರು ಬೈಕ್​ ನಿಲ್ಲಿಸುವಂತೆ ಸೂಚಿಸಿದ್ದಾರೆ.

‘ಸೀನುವಾಗ ಮುಖಕ್ಕೆ ಅಡ್ಡಲಾಗಿ ಏನಾದರೂ ಇಟ್ಟುಕೊಳ್ಳಬೇಕು ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲವೇ? ನಿಮ್ಮಂಥವರಿಂದಲೇ ಕೊರೋನಾ ವೈರಸ್ ಹೆಚ್ಚು ಹರಡುತ್ತಿದೆ,’ ಎಂದು ಬೈಕ್​ ತಡೆದವರು ಸೀನಿದವನಿಗೆ ಬುದ್ಧಿವಾದ ಹೇಳಿದ್ದಾರೆ. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ನಂತರ ಸೀನಿದ ವ್ಯಕ್ತಿಯನ್ನು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಕೆಲ ಕಾಲ ಟ್ರಾಫಿಕ್​ ಜ್ಯಾಮ್​ ಕೂಡ ಉಂಟಾಗಿತ್ತು. ನಂತರ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com