ಪ್ರತಿ ಕೊರೊನಾ ವೈರಸ್ ಪರೀಕ್ಷಾ ವೆಚ್ಚ 5,000 ರೂಪಾಯಿ ಮಾತ್ರ...!

ಭಾರತದಲ್ಲಿ ವೇಗವಾಗಿ ಹಬ್ಬುತ್ತಿರುವ ಕೊರೊನಾ ವೈರಸ್ (ಕೋವಿಡ್ -೧೯) ಸೋಂಕು ತಗುಲಿದೆಯೇ... ಇಲ್ಲವೇ? ಎಂಬುದನ್ನು ಖಚಿತ ಪಡಿಸಿಕೊಳ್ಳಲು ನಡೆಸಲಾಗುವ ಪ್ರತಿ ಪರೀಕ್ಷೆಗೆ 4,500 ರಿಂದ 5,000 ರೂ. ವೆಚ್ಚವಾಗಲಿದೆಯಂತೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತದಲ್ಲಿ ವೇಗವಾಗಿ ಹಬ್ಬುತ್ತಿರುವ ಕೊರೊನಾ ವೈರಸ್ (ಕೋವಿಡ್ -೧೯) ಸೋಂಕು ತಗುಲಿದೆಯೇ... ಇಲ್ಲವೇ? ಎಂಬುದನ್ನು ಖಚಿತ ಪಡಿಸಿಕೊಳ್ಳಲು ನಡೆಸಲಾಗುವ ಪ್ರತಿ ಪರೀಕ್ಷೆಗೆ 4,500 ರಿಂದ 5,000 ರೂ. ವೆಚ್ಚವಾಗಲಿದೆಯಂತೆ. 

ದೇಶಾದ್ಯಂತ ಡಯೋಗ್ನೋಸ್ಟಿಕ್ ಲ್ಯಾಬ್ ಗಳ ನೆಟ್ ವರ್ಕ್ ನಿರ್ವಹಿಸುತ್ತಿರುವ ಟ್ರಿವಿಟ್ರಾನ್ ನ್ಯೂಬರ್ಗ್ ಡಯಾಗ್ನೋಸ್ಟಿಕ್ಸ್ ಅಧ್ಯಕ್ಷ ಜಿ ಎಸ್ ಕೆ ವೇಲು ಈ ವಿಷಯ ತಿಳಿಸಿದ್ದಾರೆ. ಈ ಪರೀಕ್ಷೆ ನಡೆಸಲು ಆಗತ್ಯವಾದ ಅತ್ಯಾಧುನಿಕ ಪರಿಜ್ಞಾನವನ್ನು ಭಾರತದ ಪ್ರಯೋಗಾಲಯಗಳು, ಅಮೆರಿಕಾದಿಂದ ಆಮದು ಮಾಡಿಕೊಳ್ಳುತ್ತಿವೆ, ಇವುಗಳನ್ನು ದೇಶದಲ್ಲಿಯೇ ಅಭಿವೃದ್ದಿಪಡಿಸಿಕೊಂಡರೆ 500 ರೂ. ವೆಚ್ಚದಲ್ಲಿ ಪರೀಕ್ಷೆ ನಡೆಸಬಹುದು ಎಂದು ಅವರು ತಿಳಿಸಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಾರ, ಕೊರೊನಾ ವೈರಸ್ ಪ್ರಾಥಮಿಕ ಪರೀಕ್ಷೆಗೆ 1,500 ರೂ. ಅನಂತರ ನಡೆಸಲಾಗುವ ನಿರ್ಧರಣಾ ಪರೀಕ್ಷೆಗೆ ಪರೀಕ್ಷೆಗೆ 3,000 ರೂ. ವೆಚ್ಚವಾಗಲಿದೆಯಂತೆ. ಈವರೆಗೆ ಕೊರೊನಾ ವೈರಸ್ ನಿರ್ಧರಣಾ ಪರೀಕ್ಷೆಯನ್ನು ಸರ್ಕಾರಿ ಆಸ್ಪತ್ರೆಗಳು, ಸರ್ಕಾರಿ ಪ್ರಯೋಗಾಲಯಗಳು ಮಾತ್ರ ನಡೆಸುತ್ತಿವೆ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳೂ ಕೊರೊನಾ ವೈರಸ್ ಪರೀಕ್ಷೆಗಳನ್ನು ಉಚಿತವಾಗಿ ನಡೆಸಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಬುಧವಾರ ಸೂಚನೆ ನೀಡಿದೆ. ಆದರೆ, ಈ ನಿಟ್ಟಿನಲ್ಲಿ ಯಾವುದೇ ಮಾರ್ಗಸೂಚಿ ಜಾರಿಗೊಳಿಸದ ಕಾರಣ ಸಾರ್ವಜನಿಕರಲ್ಲಿ ತೀವ್ರ ಗೊಂದಲ ಸೃಷ್ಟಿಯಾಗಿದೆ.

ರೋಗಿಗಳ ದರೋಡೆ ದಂಧೆ ಮಾಡುವ ಖಾಸಗಿ ಆಸ್ಪತ್ರೆಗಳು ಉಚಿತವಾಗಿ ಕೊರೊನಾ ವೈರಸ್ ಪರೀಕ್ಷೆ ನಡೆಸಲಿವೆಯೇ..? ಅವುಗಳು ನಡೆಸುವ ಪರೀಕ್ಷೆಗಳಲ್ಲಿ ಪ್ರಾಮಾಣಿಕತೆ ಇರುತ್ತದೆಯೇ ? ಎಂಬುದು ಸಾರ್ವಜನಿಕರ ಸಂಶಯವಾಗಿದೆ. 

ಸರ್ಕಾರಿ ಆಸ್ಪತ್ರೆಗಳು ಎಲ್ಲಾ ಶಂಕಿತರಿಗಾಗಿ ಈ ಪರೀಕ್ಷೆಗಳನ್ನು ನಡೆಸದೆ, ಕೊರೊನಾ ಹರಡಿರುವ ದೇಶಗಳಿಂದ ಬಂದವರಿಗೆ, ವೈರಸ್ ದೃಢಪಟ್ಟಿರುವ ವ್ಯಕ್ತಿಗಳ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಮಾತ್ರ ಪರೀಕ್ಷೆ ನಡೆಸುತ್ತಿದೆ. 

ದೇಶದಲ್ಲಿ ನೂರಕ್ಕೂ ಹೆಚ್ಚು ಪ್ರಯೋಗಾಲಯಗಳಿದ್ದು, ಇವುಗಳು ಕೊರೊನಾ ವೈರಸ್ ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿವೆ ಎಂದು ಜಿಎಸ್ ಕೆ ವೇಲು ಹೇಳಿದ್ದಾರೆ. ಪ್ರತಿದಿನ ಸಾವಿರಾರು ಜನರಿಗೆ ವೈರಸ್ ಪರೀಕ್ಷೆ ನಡೆಸಬೇಕು ಎಂಬುದಾದರೆ ಪರಿಸ್ಥಿತಿ ತೀವ್ರ ಕಷ್ಟಕರವಾಗಲಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com