ಕೊರೋನಾವೈರಸ್ ಹಿನ್ನೆಲೆ: 90 ರೈಲುಗಳ ಓಡಾಟ ರದ್ದು,ಒಟ್ಟಾರೇ ರದ್ದಾದ ರೈಲುಗಳ ಸಂಖ್ಯೆ  245ಕ್ಕೆ ಏರಿಕೆ 

ಮಾರಕ ಕೊರೋನಾ ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ರೈಲ್ವೆ ಇಲಾಖೆ 90 ರೈಲುಗಳನ್ನು ರದ್ದುಪಡಿಸಿದೆ. ಈ ರೈಲುಗಳು ಇಂದಿನಿಂದ ಮಾರ್ಚ್ 31ರ ನಡುವೆ ಕಾರ್ಯನಿರ್ವಹಿಸಲ್ಲ. ಇದರೊಂದಿಗೆ  ಒಟ್ಟಾರೆ ರದ್ದುಗೊಂಡ ರೈಲುಗಳ ಸಂಖ್ಯೆ 245 ಆಗಿದೆ.
ರೈಲು ಬೋಗಿ ಶುಚಿಗೊಳಿಸುತ್ತಿರುವ ಕಾರ್ಮಿಕ
ರೈಲು ಬೋಗಿ ಶುಚಿಗೊಳಿಸುತ್ತಿರುವ ಕಾರ್ಮಿಕ

ನವದೆಹಲಿ:ಮಾರಕ ಕೊರೋನಾ ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ರೈಲ್ವೆ ಇಲಾಖೆ 90 ರೈಲುಗಳನ್ನು ರದ್ದುಪಡಿಸಿದೆ. ಈ ರೈಲುಗಳು ಇಂದಿನಿಂದ ಮಾರ್ಚ್ 31ರ ನಡುವೆ ಕಾರ್ಯನಿರ್ವಹಿಸಲ್ಲ. ಇದರೊಂದಿಗೆ  ಒಟ್ಟಾರೆ ರದ್ದುಗೊಂಡ ರೈಲುಗಳ ಸಂಖ್ಯೆ 245 ಆಗಿದೆ.

ಗುರುವಾರ 84 ರೈಲುಗಳನ್ನು ರದ್ದುಪಡಿಸಲಾಗಿತ್ತು. ಕೋವಿಡ್ -19 ಕಾರಣದಿಂದಾಗಿ ಈಗ ಮತ್ತೆ 155 ರೈಲುಗಳ ಓಡಾಟವನ್ನು ರದ್ದುಪಡಿಸಲಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.

ಈ ರೈಲುಗಳಲ್ಲಿ ಟಿಕೆಟ್ ಪಡೆದಿದ್ದ ಎಲ್ಲಾ ಪ್ರಯಾಣಿಕರಿಗೆ ವೈಯಕ್ತಿಕವಾಗಿ ತಿಳಿಸಲಾಗಿದೆ.ಯಾವುದೇ ಕಾರಣಕ್ಕೂ ರೈಲು ರದ್ದುಗೊಂಡ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ, ಪ್ರಯಾಣಿಕರಿಗೆ ಶೇಕಡಾ 100 ರಷ್ಟು ಮರುಪಾವತಿ ಸಿಗಲಿದೆ ಎಂದು ಹೇಳಿದೆ. 

ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆಯೂ ಇಳಿಕೆಯಾಗಿದ್ದು, ಆದಾಯಕ್ಕೆ ಹೊಡೆತ ಬಿದಿದ್ದೆ. ಕಡಿಮೆ ಆದಾಯ ಬರುತ್ತಿರುವಂತಹ ರೈಲುಗಳನ್ನು ಮಾತ್ರ ರದ್ದುಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಜ್ವರ, ಕೆಮ್ಮು, ಮೂಗು ಸುರಿಯುವ ಅಥವಾ ಉಸಿರಾಟದ ತೊಂದರೆ ಇರುವ ಯಾವುದೇ ಉದ್ಯೋಗಿಯನ್ನು  ರೈಲ್ವೆಯಲ್ಲಿ ಆಹಾರ ನಿರ್ವಹಣೆಯ ವ್ಯವಹಾರದಲ್ಲಿ ನಿಯೋಜಿಸಬಾರದು ಎಂದು ಭಾರತೀಯ ರೈಲ್ವೆ ತನ್ನ ಅಡುಗೆ ಸಿಬ್ಬಂದಿ ವಲಯ ಪ್ರಧಾನ ಕಚೇರಿಗೆ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com