ಭಾರತದಲ್ಲಿ 26 ಹೊಸ ಕೇಸುಗಳು ಪತ್ತೆ: ಒಟ್ಟು 195 ಮಂದಿ ಕೊರೋನಾ ಪೀಡಿತರು

ಉತ್ತರ ಪ್ರದೇಶದ ಲಕ್ನೊದಲ್ಲಿ 4 ಹೊಸ ಕೊರೋನಾ ವೈರಸ್ ಕೇಸುಗಳು ಪತ್ತೆಯಾಗಿವೆ. ಆ ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ 9ಕ್ಕೇರಿದೆ. ಈ ಮೂಲಕ ಭಾರತದಲ್ಲಿ 26 ಹೊಸ ಕೊರೋನಾ ವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ.
ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಕೊರೋನಾ ಭಯಕ್ಕೆ ಮಾಸ್ಕ್ ಧರಿಸಿರುವ ಜನರು
ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಕೊರೋನಾ ಭಯಕ್ಕೆ ಮಾಸ್ಕ್ ಧರಿಸಿರುವ ಜನರು

ನವದೆಹಲಿ: ಉತ್ತರ ಪ್ರದೇಶದ ಲಕ್ನೊದಲ್ಲಿ 4 ಹೊಸ ಕೊರೋನಾ ವೈರಸ್ ಕೇಸುಗಳು ಪತ್ತೆಯಾಗಿವೆ. ಆ ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ 9ಕ್ಕೇರಿದೆ. ಈ ಮೂಲಕ ಭಾರತದಲ್ಲಿ 26 ಹೊಸ ಕೊರೋನಾ ವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ.


ಜಾಗತಿಕ ಮಟ್ಟದಲ್ಲಿ ಕೊರೋನಾ ಮೃತರ ಸಂಖ್ಯೆ 10 ಸಾವಿರದ ಗಡಿ ದಾಟಿದೆ.ಭಾರತ ಪಂಜಾಬ್ ನಲ್ಲಿ 70 ವರ್ಷದ ವೃದ್ಧ ಕೊರೋನಾ ಸೋಂಕಿಗೆ ಮೃತಪಡುವ ಮೂಲಕ ಸಾವಿನ ಸಂಖ್ಯೆ 4ಕ್ಕೇರಿದೆ. ನಿನ್ನೆ ಕೇಂದ್ರ ಸರ್ಕಾರ ಇದೇ 22ರಿಂದ ಒಂದು ವಾರ ಮಟ್ಟಿಗೆ ಎಲ್ಲಾ ಅಂತಾರಾಷ್ಟ್ರೀಯ ಸಂಚಾರವನ್ನು ರದ್ದುಗೊಳಿಸಿದೆ. 


65 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 10 ವರ್ಷಕ್ಕಿಂತ ಕೆಳಗಿನ ಮಕ್ಕಳು ಮನೆಯಿಂದ ಹೊರಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಇರಾನ್ ನಲ್ಲಿ ಕೊರೋನಾ ಸೋಂಕು ತಗುಲಿಸಿಕೊಂಡಿದ್ದ ಭಾರತೀಯ ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. 


ಇಂದಿನ ವರದಿಯಂತೆ ಇದುವರೆಗೆ ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 195ಕ್ಕೇರಿದ್ದು 26 ಹೊಸ ಕೇಸುಗಳು ವಿವಿಧ ರಾಜ್ಯಗಳಲ್ಲಿ ವರದಿಯಾಗಿದೆ. ತೆಲಂಗಾಣದಲ್ಲಿ ಮೂರು, ಆಂಧ್ರ ಪ್ರದೇಶದಲ್ಲಿ 1 ಹೊಸ ಕೇಸುಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com