ವರ್ಕ್ ಫ್ರಮ್ ಹೋಮ್ ಗೆ ಪೂರಕವಾಗಿ ಜಿಯೋದಿಂದ ಹೊಸ ಯೋಜನೆ

ಜಿಯೋ ತನ್ನ ಬಳಕೆದಾರರಿಗೆ ತನ್ನ ಹಳೆಯ ರಿರ್ಚಾಜ್ ವೋಚರ್‌ಗಳ ಬದಲಾಯಿಸಿದ್ದು, ಡಬಲ್ ಡೇಟಾ ಮತ್ತು ಹೆಚ್ಚುವರಿ ಬೇರೆ ನೆಟ್‌ವರ್ಕ್‌ಗಳಿಗೆ ಕರೆ ಮಾಡುವ ಟಾಕ್‌ಟೈಮ್ ಒದಗಿಸಲು ಮಂದಾಗಿದೆ.
ಜಿಯೋ
ಜಿಯೋ

ಮುಂಬೈ:  ಅಗತ್ಯ ಸಮಯದಲ್ಲಿ ಮೊಬೈಲ್ ಬಳಕೆದಾರರು ಹೊರ ಜಗತ್ತಿನೊಂದಿಗೆ ನಿರಂತರ ಸಂಪರ್ಕದಲ್ಲಿ ಇರಲಿ ಎನ್ನುವ ಕಾರಣಕ್ಕಾಗಿ ಜಿಯೋ ತನ್ನ ಬಳಕೆದಾರರಿಗೆ ತನ್ನ ಹಳೆಯ ರಿರ್ಚಾಜ್ ವೋಚರ್‌ಗಳ ಬದಲಾಯಿಸಿದ್ದು, ಡಬಲ್ ಡೇಟಾ ಮತ್ತು ಹೆಚ್ಚುವರಿ ಬೇರೆ ನೆಟ್‌ವರ್ಕ್‌ಗಳಿಗೆ ಕರೆ ಮಾಡುವ ಟಾಕ್‌ಟೈಮ್ ಒದಗಿಸಲು ಮಂದಾಗಿದೆ. ಹೀಗಾಗಿ ಜಿಯೋ 4ಜಿ ಡೇಟಾ ವೋಚರ್‌ಗಳಿಂದ ಗ್ರಾಹಕರಿಗೆ ಭರ್ಜರಿ ಲಾಭವಾಗಲಿದೆ

ಜಿಯೋ ಅಪ್‌ಗ್ರೇಡ್‌ ಮಾಡಿರುವ ಪ್ಲಾನ್‌ಗಳ ಮಾಹಿತಿ ಇಲ್ಲಿದೆ: ರೂ.11, ರೂ.21, ರೂ. 51 ಮತ್ತು ರೂ.101 ರೀಚಾರ್ಜ್ ವೋಚರ್‌ ಪ್ಲಾನ್‌ಗಳು ಇನ್ನು ಮುಂದೆ ಗ್ರಾಹಕರಿಗೆ ಹೆಚ್ಚಿನ ಲಾಭ ಮಾಡಿಕೊಡಲಿದೆ. ಈ ಪ್ಲಾನ್‌ಗಳು ಕ್ರಮವಾಗಿ 800 MB, 2GB, 6GB ಮತ್ತು 12 GB ಹೈಸ್ಪೀಡ್ ಡೇಟಾದೊಂದಿಗೆ ದೊರೆಯಲಿದೆ. ಇದಲ್ಲದೇ ಈ ವೋಚರ್‌ಗಳಲ್ಲಿ ಜಿಯೋ ಬಿಟ್ಟು ಬೇರೆ ನೆಟ್‌ವರ್ಕ್‌ಗಳಿಗೆ ಕರೆ ಮಾಡುವ ಟಾಕ್ ಟೈಮ್ ಸಹ ನೀಡಲಿದೆ.

ಕ್ರಮವಾಗಿ 75, 200, 500 ಮತ್ತು 1000 ನಿಮಿಷಗಳ ಟಾಕ್ ಟೈಮ್‌ ಅನ್ನು ಬಳಕೆದಾರರು ಆನಂದಿಸಬಹುದಾಗಿದೆ. ಈ ಪ್ಲಾನ್‌ಗಳ ಭಾರತದಾದ್ಯಂತ ದೊರೆಯಲಿದೆ.

ಎಲ್ಲಾ ಉದ್ಯಮಗಳು ತಮ್ಮ ಉದ್ಯೋಗಿಗಳನ್ನು ಮನೆಯಿಂದ ಕೆಲಸ ಮಾಡಲು (ವರ್ಕ್‌ ಫ್ರಮ್ ಹೋಮ್) ಪ್ರೋತ್ಸಾಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಯೋ ತನ್ನ ಬಳಕೆದಾರರಿಗೆ ಸಹಾಯ ಮಾಡಲು ಮುಂದಾಗಿದೆ. 

ಸಂವಹನಗಳ ಅಗತ್ಯತೆ ಮತ್ತು ಕುಟುಂಬಗಳು ಮನರಂಜನೆಗಾಗಿ ಹೆಚ್ಚಿನ ಸಮಯವನ್ನು ಮೀಸಲು ಇಡುವ ಕಾರಣಕ್ಕಾಗಿ ತಡೆರಹಿತ ಮತ್ತು ಹೆಚ್ಚಿನ ಡೇಟಾ ಬಳಕೆ ಅಗತ್ಯತೆ ಹೆಚ್ಚುತ್ತಿದೆ. ಹಾಗಾಗಿ ಈ ಮೇಲಿನ ವೋಚರ್‌ಗಳ ಲಾಭವನ್ನು ಹೆಚ್ಚು ಮಾಡಿದೆ. 

ಈ ಮೂಲಕ ಜಿಯೋ ಬಳಕೆದಾರರಿಗೆ ಸಹಾಯವನ್ನು ವಿಸ್ತರಿಸುತ್ತಿದೆ ಮತ್ತು ಭಾರತೀಯರಿಗೆ ಸಂಪರ್ಕ ಅಗತ್ಯಗಳನ್ನು ಪೂರೈಸಲು ನಿರಂತರವಾದ, ಹೇರಳವಾದ ಮತ್ತು ಕೈಗೆಟುಕುವ ಬೆಲೆಯಲ್ಲಿ ಡೇಟಾವನ್ನು ಪಡೆದುಕೊಳ್ಳಳು ಅವಕಾಶವನ್ನು ಮಾಡಿಕೊಟ್ಟಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com