ಕೊರೋನಾ ವಿರುದ್ಧದ ಹೋರಾಟಕ್ಕೆ ಪ್ರಧಾನಿ ಮೋದಿ ಯುವರಾಜ್-ಕೈಫ್ ಆಟ ನೆನಪಿಸಿದ್ದೇಕೆ?

ಕೊರೋನಾ ಮಹಾಮಾರಿ ವಿರುದ್ಧ ದೇಶ ಒಗ್ಗಟ್ಟಿನಿಂದ ಹೋರಾಡುವ ತುರ್ತು ಅಗತ್ಯವಿದ್ದು, ವೈರಾಣು ಹರಡುವಿಕೆ ತಡೆಗಟ್ಟಲು ಈಗಾಗಲೇ ಜನತಾ ಕರ್ಫ್ಯೂಗೆ ಕರೆ ನೀಡಿರುವ ಪ್ರಧಾನಿ ಮೋದಿ, ಪ್ರಜೆಗಳಿಗೆ ಹೋರಾಟದ ಅತ್ಯುತ್ತಮ ಉದಾಹರಣೆ ನೀಡಿದ್ದಾರೆ. 

ಪ್ರಧಾನಿ ಕರೆ ನೀಡಿದ್ದ ಜನತಾ ಕರ್ಫೂಗೂಗೆ ಬೆಂಬಲ ಸೂಚಿಸಿ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದರು.  ಮೊಹಮ್ಮದ್ ಕೈಫ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಕೊರೋನಾ ವಿರುದ್ಧ ಗಲ್ಲುವುದಕ್ಕೆ ಪ್ರೇರಣೆ ನೀಡಲು, 2002 ರ ನಾಟ್ ವೆಸ್ಟ್ ಸೀರಿಸ್ ನಲ್ಲಿ ಭಾರತದ ಗೆಲುವಿಗೆ ಕಾರಣರಾದ ಯುವರಾಜ್ ಸಿಂಗ್-ಕೈಫ್ ಅತ್ಯುತ್ತಮ ಜೊತೆಯಾಟವನ್ನು ಉದಾಹರಣೆಯನ್ನಾಗಿ ನೀಡಿದ್ದಾರೆ. 

"ದೇಶದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಯುವರಾಜ್ ಸಿಂಗ್ ಮತ್ತು ಮೊಹಮ್ಮದ್ ಕೈಫ್ ರೀತಿಯ ಜೊತೆಯಾಟ ಬೇಕು" ಎಂದು ಮೋದಿ ಟ್ವೀಟ್ ನಲ್ಲಿ ಹೇಳಿದ್ದಾರೆ.  

ನಾವೇಲ್ಲ ಸೇರಿ ಪ್ರಧಾನಿ ಮೋದಿ ಅವರ ಸೂಚನೆಯನ್ನು ಪಾಲಿಸೋಣ. ನಾವು ಕೊರೊನಾ ವೈರಸ್ ವಿರುದ್ಧ ಹೋರಾಡೋಣ. ಜಾಗೃತಿ ಮೂಡಿಸಲು ಮತ್ತು ನಮ್ಮ ದೇಶವನ್ನು ಬೆಂಬಲಿಸಲು ಪ್ರತಿಯೊಬ್ಬ ಭಾರತೀಯನೂ ನನ್ನೊಂದಿಗೆ ಸೇರಿಕೊಳ್ಳಬೇಕೆಂದು ವಿನಂತಿಸುತ್ತೇನೆ ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದರು.

ಪ್ರಧಾನಿ ಮೋದಿ, ನಮ್ಮ ದೇಶ ಕೊರೊನಾ ವೈರಸ್ ವಿರುದ್ಧ ಹೋರಾಡಲು ಒಳ್ಳೆಯ ಸಂದೇಶ ಕೊಟ್ಟಿದ್ದಾರೆ. ಮುಂಬರುವ ಸವಾಲುಗಳಿಗೆ ನಮ್ಮನ್ನು ಸಿದ್ಧಪಡಿಸಲು ಜನತಾ ಕಫ್ರ್ಯೂಗೆ ಕರೆ ನೀಡಿದ್ದಾರೆ. ನಮ್ಮ ದೇಶದ ಜನರ ಕ್ಷೇಮದ ಜವಾಬ್ದಾರಿಯನ್ನು ನಾವು ತಗೆದುಕೊಳ್ಳುವ ಸಮಯವಿದು ಎಂದು ಕೈಫ್ ಬರೆದಿದ್ದಾರೆ.

2002 ರ ಜುಲೈ ನಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ಗಂಗೂಲಿ ನೇತೃತ್ವದ ತಂಡ ಗೆಲ್ಲುವಲ್ಲಿ ಕೈಫ್-ಯುವರಾಜ್ ಸಿಂಗ್ ಅವರ 121 ರನ್ ಗಳ ಭರ್ಜರಿ ಜೊತೆಯಾಟ ಮಹತ್ವದ ಪಾತ್ರ ವಹಿಸಿತ್ತು.
 
ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com