ಉಸಿರಾಟ ತೊಂದರೆ ಅನುಭವಿಸುತ್ತಿರುವವರಿಗೆ ಕೊರೋನಾ ಪರೀಕ್ಷೆ ನಡೆಸಿ: ಐಸಿಎಂಆರ್

ಕೊರೋನಾ ವೈರಸ್ ನಿರ್ಧರಣಾ ಪರೀಕ್ಷೆಯ ಮಾರ್ಗಸೂಚಿಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಶನಿವಾರ ಪರಿಷ್ಕರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೊರೋನಾ ವೈರಸ್ ನಿರ್ಧರಣಾ ಪರೀಕ್ಷೆಯ ಮಾರ್ಗಸೂಚಿಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಶನಿವಾರ ಪರಿಷ್ಕರಿಸಿದೆ.

ಹೊಸ ಮಾರ್ಗಸೂಚಿಗಳ ಪ್ರಕಾರ ತೀವ್ರ ಶ್ವಾಸ ಸಂಬಂಧಿ ಸಮಸ್ಯೆ, ಉಸಿರಾಟದ ತೊಂದರೆ, ಜ್ವರ, ಕೆಮ್ಮುನಿಂದಾಗಿ ಆಸ್ಪತ್ರೆಗೆ ದಾಖಲಾದ ಎಲ್ಲಾ ರೋಗಿಗಳಿಗೆ ಕೊರೋನಾವೈರಸ್(ಕೋವಿಡ್ -೧೯) ರೋಗ ನಿರ್ಧರಣ ಪರೀಕ್ಷೆ ನೆಡಸಬೇಕು. ಈ ಸೋಂಕು ಮತ್ತಷ್ಟು ವಿಸ್ತರಿಸದಂತೆ ಸಮಗ್ರ ನಿಯಂತ್ರಣವನ್ನು ಗಮನದಲ್ಲಿಟ್ಟುಕೊಂಡು ಈ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. 

ಕೋವಿಡ್ -೧೯ ಸೋಂಕಿತ ವ್ಯಕ್ತಿ ತನ್ನ ಲಕ್ಷಣಗಳನ್ನು ಮರೆಮಾಚಿ, ಇತರನ್ನು ಭೇಟಿಯಾಗಿದ್ದರೆ, ಅಂತಹ ವ್ಯಕ್ತಿಗಳನ್ನು ಭೇಟಿಯಾದ ದಿನದಿಂದ ೫ ದಿನ, ೧೪ ದಿನ ನಡುವೆ ಒಮ್ಮೆ ಪರೀಕ್ಷೆಗೊಳಪಡಿಸಬೇಕು ಎಂದು ನೂತನ ಮಾರ್ಗಸೂಚಿ ತಿಳಿಸಿದೆ. 

ಕೋವಿಡ್ -೧೯ ಪರೀಕ್ಷೆಗಳ ಸಂಯೋಜಿತ ವಿಧಾನಕ್ಕೆ ಅನುಗುಣವಾಗಿ ಎಲ್ಲರಿಗೂ ವಿಶ್ವಾಸಾರ್ಹ ರೋಗ ನಿರ್ಧರಣೆ ಲಭ್ಯವಾಗುವ ಉದ್ದೇಶವನ್ನು ಈ ತಿದ್ದುಪಡಿ ಹೊಂದಿದೆ.

ಈವರೆಗೆ ದೇಶದಲ್ಲಿ ವರದಿಯಾಗಿರುವ ಕೋವಿಡ್ -೧೯ ಪ್ರಕರಣಗಳು ವಿದೇಶ ಪ್ರಯಾಣಿಕರು ಮತ್ತು ಅವರಿಂದ ಸ್ಥಳೀಯರಿಗೆ ಸೋಂಕು ತಗುಲಿರುವ ಪ್ರಕರಣಗಳಾಗಿವೆ ಎಂದು ಐಸಿಎಂಆರ್ ಹೇಳಿದೆ. ಸಮುದಾಯದ ನಡುವೆ ಸೋಂಕು ಪ್ರಸರಣಗೊಂಡಿರುವ ಪ್ರಕರಣ ಇನ್ನೂ ದಾಖಲಾಗಿಲ್ಲ. ಒಂದು ವೇಳೆ ಅಂತಹ ಪ್ರಕರಣ ಕಂಡುಬಂದರೆ, ಅದಕ್ಕೆ ತಕ್ಕಂತೆ ಪರೀಕ್ಷಾ ಕಾರ್ಯತಂತ್ರ ಅಭಿವೃದ್ಧಿಪಡಿಸಲಾಗುತ್ತದೆ. ಈ ಸಂಬಂಧ ಸಲಹೆಗಳನ್ನು ನಿರಂತರವಾಗಿ ಪರಿಶೀಲಿಸುತ್ತಿದೆ ಎಂದು ಹೇಳಿದೆ.

ನೀತಿ ಆಯೋಗದ ಸದಸ್ಯ ವೈ.ಕೆ. ಪಾಲ್ ಅವರ ಅಧ್ಯಕ್ಷತೆಯ ರಾಷ್ಟ್ರೀಯ ಕಾರ್ಯಪಡೆ ಈ ಕಾರ್ಯತಂತ್ರವನ್ನು ಪರಿಶೀಲಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com