ಕೋವಿಡ್-19: ಕೇರಳದಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 49 ಕ್ಕೆ ಏರಿಕೆ: 53,013 ಜನರು ನಿಗಾದಲ್ಲಿ- ಮುಖ್ಯಮಂತ್ರಿ

ಭಾರತದಲ್ಲಿ ಮಾರಕ ಕೊರೊನವೈರಸ್ ನ ಮೊದಲ ಪ್ರಕರಣ ಪತ್ತೆಯಾದ ಕೇರಳದಲ್ಲಿ ಶನಿವಾರ ಇನ್ನೂ 12 ಮಂದಿ ಸೋಂಕಿಗೆ ತುತ್ತಾಗಿರುವುದು ಕಂಡುಬಂದಿದ್ದು, ಸದ್ಯ, ಕೇರಳದಲ್ಲಿ ಒಟ್ಟು ಪೀಡಿತ ಪ್ರಕರಣಗಳ ಸಂಖ್ಯೆ 49 ಕ್ಕೆ ಏರಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಸಂಜೆ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತಿರುವನಂತಪುರಂ: ಭಾರತದಲ್ಲಿ ಮಾರಕ ಕೊರೊನವೈರಸ್ ನ ಮೊದಲ ಪ್ರಕರಣ ಪತ್ತೆಯಾದ ಕೇರಳದಲ್ಲಿ ಶನಿವಾರ ಇನ್ನೂ 12 ಮಂದಿ ಸೋಂಕಿಗೆ ತುತ್ತಾಗಿರುವುದು ಕಂಡುಬಂದಿದ್ದು, ಸದ್ಯ, ಕೇರಳದಲ್ಲಿ ಒಟ್ಟು ಪೀಡಿತ ಪ್ರಕರಣಗಳ ಸಂಖ್ಯೆ 49 ಕ್ಕೆ ಏರಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಸಂಜೆ ತಿಳಿಸಿದ್ದಾರೆ.

ಶನಿವಾರ ಸಂಜೆ ವೇಳೆಗೆ ರಾಜ್ಯದಲ್ಲಿ ಕೊವಿದ್‍ -19 ಸೋಂಕು ಶಂಕಿತರೆನಿಸಿರುವ 53,013 ಜನರನ್ನು ತಮ್ಮ ಮನೆಗಳಲ್ಲೇ ಸಂಪರ್ಕ ತಡೆಯಲ್ಲಿ ಇರಿಸಲಾಗಿದೆ.ಇವರಿಗಾಗಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 228 ಪ್ರತ್ಯೇಕ ವಾರ್ಡ್‍ಗಳನ್ನು ತೆರೆಯಲಾಗಿದೆ. ಶನಿವಾರ ಶಂಕಿತ 70 ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ದುಬೈನಿಂದ ಆಗಮಿಸಿದ ಕಾಸರಗೋಡು ಜಿಲ್ಲೆಯ ಆರು ಜನರು ಕೊರೊನೊವೈರಸ್‍ ಗೆ ತುತ್ತಾಗಿರುವುದಾಗಿ ಪರೀಕ್ಷೆಗಳಿಂದ ವರದಿಯಾಗಿದೆ. ಎರ್ನಾಕುಲಂ ಮತ್ತು ಕಣ್ಣೂರು ಜಿಲ್ಲೆಗಳಿಂದ ತಲಾ ಮೂವರನ್ನು ಪರೀಕ್ಷಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com