ಕೋವಿಡ್ -19:ದೇಶಾದ್ಯಂತ 'ಜನತಾ ಕರ್ಫ್ಯೂ' ಆಚರಣೆ, 315ಕ್ಕೆ ತಲುಪಿದ ಕೊರೋನಾ ಸೋಂಕಿತರ ಸಂಖ್ಯೆ 

ಮಹಾಮಾರಿ ಕೊರೋನಾ ವೈರಸ್ ತಡೆಗೆ ಇಂದು ದೇಶಾದ್ಯಂತ ಜನತಾ ಕರ್ಫ್ಯೂ ನಡೆಸಲಾಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಯಂತೆ ಜನರು ಸ್ವ ಇಚ್ಛೆಯಿಂದ ಮನೆಯಲ್ಲಿಯೇ ಉಳಿದುಕೊಳ್ಳಲು ಬಯಸಿದ್ದಾರೆ. ಇಂದು ಬೆಳಗ್ಗೆ 7 ಗಂಟೆಗೆ ಜನತಾ ಕರ್ಫ್ಯೂ ಆರಂಭವಾಗಿದ್ದು ರಾತ್ರಿ 9 ಗಂಟೆಯವರೆಗೆ ಮುಂದುವರಿಯಲಿದೆ.
ಕೋವಿಡ್ -19:ದೇಶಾದ್ಯಂತ 'ಜನತಾ ಕರ್ಫ್ಯೂ' ಆಚರಣೆ, 315ಕ್ಕೆ ತಲುಪಿದ ಕೊರೋನಾ ಸೋಂಕಿತರ ಸಂಖ್ಯೆ 

ನವದೆಹಲಿ/ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ತಡೆಗೆ ಇಂದು ದೇಶಾದ್ಯಂತ ಜನತಾ ಕರ್ಫ್ಯೂ ನಡೆಸಲಾಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಯಂತೆ ಜನರು ಸ್ವ ಇಚ್ಛೆಯಿಂದ ಮನೆಯಲ್ಲಿಯೇ ಉಳಿದುಕೊಳ್ಳಲು ಬಯಸಿದ್ದಾರೆ. ಇಂದು ಬೆಳಗ್ಗೆ 7 ಗಂಟೆಗೆ ಜನತಾ ಕರ್ಫ್ಯೂ ಆರಂಭವಾಗಿದ್ದು ರಾತ್ರಿ 9 ಗಂಟೆಯವರೆಗೆ ಮುಂದುವರಿಯಲಿದೆ.


ಸಾರ್ವಜನಿಕ ಸಂಚಾರ ಸಾರಿಗೆ, ರೈಲ್ವೆ, ಮೆಟ್ರೊ ಸೇರಿದಂತೆ ಖಾಸಗಿ ಬಸ್ಸುಗಳು, ಆಟೋ, ಉಬರ್, ಒಲಾಗಳ ಓಡಾಟ ಸ್ತಬ್ಧವಾಗಿದೆ. ಮಾರುಕಟ್ಟೆ, ದಿನಸಿ, ತರಕಾರಿ, ಹಣ್ಣು ಮಾರುಕಟ್ಟೆಗಳು ಬಂದ್ ಆಗಿವೆ. ಎಲ್ಲರೂ ಪಕ್ಷಭೇದ ಮರೆತು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ರಾಜಕೀಯ ನಾಯಕರು ಜನತೆಗೆ ಕೊರೋನಾ ಅಪಾಯದ ಬಗ್ಗೆ ಮನವರಿಕೆ ಮಾಡಿ ಸಾಧ್ಯವಾದಷ್ಟು ಮನೆಯೊಳಗೆ ಇರುವಂತೆ ಕೋರಿಕೊಂಡಿದ್ದಾರೆ.


ಭಾರತದಾದ್ಯಂತ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 300ರ ಗಡಿ ದಾಟಿದ್ದು ನಿನ್ನೆ ಒಂದೇ ದಿನ 70 ಹೊಸ ಕೇಸುಗಳು ವರದಿಯಾಗಿವೆ. ಹೀಗೆ ಒಬ್ಬರಿಂದ ಇನ್ನೊಬ್ಬರಿಗೆ ಸರಪಳಿಯಂತೆ ಅವ್ಯಾಹತವಾಗಿ ಸೋಂಕು ಹರಡುವುದನ್ನು ತಡೆಗಟ್ಟಲು ಜನರು ಗುಂಪು-ಗುಂಪುಗಳಲ್ಲಿ ಸೇರುವುದನ್ನು ತಡೆಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಪ್ರಮುಖ ಪರಿಹಾರ ಎಂದು ಜನತೆ ಮನಗಂಡಂತಿದೆ.


ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಒಡಿಶಾ, ಬಿಹಾರ ಮೊದಲಾದ ರಾಜ್ಯಗಳಲ್ಲಿ ಭಾಗಶಃ ವಹಿವಾಟು, ವ್ಯಾಪಾರಗಳು ಈ ತಿಂಗಳ ಕೊನೆಯವರೆಗೆ ಬಂದ್ ಆಚರಿಸಲಾಗುತ್ತಿದೆ.


ಇಂದು ರಾತ್ರಿ 10 ಗಂಟೆಯವರೆಗೆ ಯಾವುದೇ ರೈಲು ಸಂಚಾರವಿರುವುದಿಲ್ಲ. ಎಲ್ಲಾ ಉಪನಗರ ರೈಲುಗಳ ಸಂಚಾರವನ್ನು ಸಹ ಈ ತಿಂಗಳಾಂತ್ಯದವರೆಗೆ ಕಡಿಮೆಗೊಳಿಸಲಾಗಿದೆ. ವಿಮಾನ ಹಾರಾಟಗಳು ರದ್ದುಗೊಂಡಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com