ಶಾಹೀನ್ ಬಾಗ್ ಪ್ರತಿಭಟನಾ ಸ್ಥಳದ ಬಳಿ ಪೆಟ್ರೋಲ್ ಬಾಂಬ್ ಎಸೆತ

ನೂತನ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ಮೂರು ತಿಂಗಳುಗಳಿಂದ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವ  ಶಾಹೀನ್ ಬಾಗ್  ಸ್ಥಳದ ಬಳಿ ಇಂದು ಅಪರಿಚಿತ ವಯಕ್ತಿಗಳು ಪೆಟ್ರೋಲ್ ಬಾಂಬ್ ವೊಂದನ್ನು ಎಸೆದಿದ್ದಾರೆ
ಪೆಟ್ರೋಲ್ ಬಾಂಬ್ ನಿಷ್ಕ್ರೀಯಗೊಳಿಸುತ್ತಿರುವ ಪೊಲೀಸರು
ಪೆಟ್ರೋಲ್ ಬಾಂಬ್ ನಿಷ್ಕ್ರೀಯಗೊಳಿಸುತ್ತಿರುವ ಪೊಲೀಸರು

ನವದೆಹಲಿ: ನೂತನ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ಮೂರು ತಿಂಗಳುಗಳಿಂದ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವ  ಶಾಹೀನ್ ಬಾಗ್  ಸ್ಥಳದ ಬಳಿ ಇಂದು ಅಪರಿಚಿತರು ಪೆಟ್ರೋಲ್ ಬಾಂಬ್ ವೊಂದನ್ನು ಎಸೆದಿದ್ದಾರೆ

ಆದಾಗ್ಯೂ, ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗ್ಗೆ 9-30ರ ಸುಮಾರಿನಲ್ಲಿ ಈ ಘಟನೆ ನಡೆದಿದೆ.ಪ್ರತಿಭಟನಾ ಸ್ಥಳದ ಬಳಿ ಪೆಟ್ರೋಲ್ ತುಂಬಿದ ಐದಾರು ಬಾಟಲಿಗಳನ್ನು ಪೊಲೀಸರ ತಂಡ ಪತ್ತೆ ಹಚ್ಚಿದೆ.

ಕೊರೋನಾ ವೈರಸ್ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿರುವಂತೆ ಇಂದು ಬೆಳಗ್ಗೆಯಿಂದ ರಾತ್ರಿಯವರೆಗೂ ಸಾರ್ವಜನಿಕರು ಮನೆಯಿಂದ ಹೊರಬಾರದಂತೆ ಜನತಾ ಕರ್ಫ್ಯೂಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಆದರೂ  ಎನ್ ಆರ್ ಸಿ ಹಾಗೂ ಸಿಎಎ ವಿರೋಧಿಸಿ  ಮಹಿಳೆಯರು ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ಮುಂದುವರೆಸಿದ್ದರು. 

ಕೊರೋನಾವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನೆ ತೆರವಿಗೆ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ನಾಳೆ ಈ ವಿಚಾರವನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com