ನಗರವಾಸಿಗಳು ಹಳ್ಳಿಗಳಿಗೆ ತೆರಳಬೇಡಿ ಕೊರೋನಾ ಹರಡಬಹುದು: ಪ್ರಧಾನಿ ಮೋದಿ ಮನವಿ

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 22ಕ್ಕೆ ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಇದೀಗ ನಗರವಾಸಿಗಳು ಹಳ್ಳಿಗಳಿಗೆ ಪ್ರಯಾಣಿಸಬೇಡಿ. ಕೊರೋನಾ ಅಲ್ಲಿಗೂ ವ್ಯಾಪಿಸಬಹುದು ಎಂದು ಮನವಿ ಮಾಡಿದ್ದಾರೆ. 

Published: 22nd March 2020 12:25 AM  |   Last Updated: 22nd March 2020 12:25 AM   |  A+A-


PM Modi

ನರೇಂದ್ರ ಮೋದಿ

Posted By : Vishwanath S
Source : PTI

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 22ಕ್ಕೆ ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಇದೀಗ ನಗರವಾಸಿಗಳು ಹಳ್ಳಿಗಳಿಗೆ ಪ್ರಯಾಣಿಸಬೇಡಿ. ಕೊರೋನಾ ಅಲ್ಲಿಗೂ ವ್ಯಾಪಿಸಬಹುದು ಎಂದು ಮನವಿ ಮಾಡಿದ್ದಾರೆ. 

ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು ಮತ್ತು ತಾವು ವಾಸವಾಗಿರುವ ನಗರ ಮತ್ತು ಪಟ್ಟಣದಿಂದ ಎಲ್ಲಿರೂ ಹೊರಗೆ ಹೋಗದಂತೆ ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ. 

ನಗರವಾಸಿಗಳು ಕೆಲ ದಿನಗಳ ಕಾಲ ತಮ್ಮ ತಮ್ಮ ಮನೆಗಳಲ್ಲಿಯೇ ಉಳಿಯಿರಿ, ಇದರಿಂದ ಕೊರೋನಾ ವೈರಸ್ ಹರಡುವಿಕೆ ನಿಯಂತ್ರಣ ಸಾಧ್ಯವಾಗಲಿದೆ. ರೈಲ್ವೆ ನಿಲ್ದಾಣಗಳಲ್ಲಿ ಮತ್ತು ಬಸ್ ನಿಲ್ದಾಣಗಲ್ಲಿ ಗುಂಪುಗೂಡುವ ಮೂಲಕ ನಮ್ಮ ಆರೋಗ್ಯದ ಜೊತೆ ಆಟವಾಡುತ್ತೇವೆ. ದಯವಿಟ್ಟು ನಿಮ್ಮ ಕುಟುಂಬದ ಬಗ್ಗೆ ಯೋಚಿಸಿ ಎಂದು ಟ್ವೀಟ್ ಮಾಡಿದ್ದಾರೆ. 

ಭಾರತದಲ್ಲೂ ಇಂದು ಹೊಸದಾಗಿ 80 ಪ್ರಕರಣಗಳು ಪತ್ತೆಯಾಗಿದ್ದು ಒಟ್ಟಾರೆ 329 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಇದಾಗಲೇ ಐವರು ಮೃತಪಟ್ಟಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp