ಕೊರೋನಾ: ವೆಂಟಿಲೇಟರ್, ಮಾಸ್ಕ್ ಗಳ ರಫ್ತು ನಿಷೇಧಕ್ಕೆ ವಿಳಂಬ-ಮೋದಿ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ

 ಕೊರೋನಾವೈರಸ್  ಏಕಾಏಕಿ  ಹಾವಳಿ ನಡುವೆ  ಜೀವ ಉಳಿಸುವ ಸಾಧನಗಳಾದ ವೆಂಟಿಲೇಟರ್ ಮತ್ತು ಸರ್ಜಿಕಲ್ ಮಾಸ್ಕ್ ರಫ್ತು ಮಾಡುವುದನ್ನು ನಿಷೇಧಿಸುವ ಸರ್ಕಾರದ ನಿರ್ಧಾರದಲ್ಲಿನ "ವಿಳಂಬ" ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕೊರೋನಾವೈರಸ್  ಏಕಾಏಕಿ  ಹಾವಳಿ ನಡುವೆ  ಜೀವ ಉಳಿಸುವ ಸಾಧನಗಳಾದ ವೆಂಟಿಲೇಟರ್ ಮತ್ತು ಸರ್ಜಿಕಲ್ ಮಾಸ್ಕ್ ರಫ್ತು ಮಾಡುವುದನ್ನು ನಿಷೇಧಿಸುವ ಸರ್ಕಾರದ ನಿರ್ಧಾರದಲ್ಲಿನ "ವಿಳಂಬ" ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.

ಕೊರೋನಾವೈರಸ್ ಹಾವಳಿ ಹಿನ್ನೆಲೆಯಲ್ಲಿ ಮಾಸ್ಕ್ ತಯಾರಿಸಲು ಬಳಸಬಹುದಾದ ವಸ್ತುಗಳು, ವೆಂಟಿಲೇಟರ್‌ಗಳು, ಶಸ್ತ್ರಚಿಕಿತ್ಸಾ ಮಾಸ್ಕ್ ಗಳು  ಮತ್ತು ಜವಳಿ ಕಚ್ಚಾ ವಸ್ತುಗಳನ್ನು ರಫ್ತು ಮಾಡುವುದನ್ನು ಸರ್ಕಾರ ಮಾರ್ಚ್ 19 ರಂದು ನಿಷೇಧಿಸಿತ್ತು.

"ಗೌರವಾನ್ವಿತ ಪ್ರಧಾನಿ, ಡಬ್ಲ್ಯುಎಚ್‌ಒ ಸಲಹೆ ಹೊರತಾಗಿಯೂ ಭಾರತ ಸರ್ಕಾರವು ವೆಂಟಿಲೇಟರ್, ಸರ್ಜಿಕಲ್ ಮಾಸ್ಕ್,  ಈ ಎಲ್ಲ ವಸ್ತುಗಳನ್ನು ರಫ್ತು ಮಾಡಲು ಮಾರ್ಚ್ 19 ರವರೆಗೆ ಏಕೆ ಅವಕಾಶ ಮಾಡಿಕೊಟ್ಟಿತು, ಸಾಕಷ್ಟು ಸ್ಟಾಕ್  ನಮ್ಮಲ್ಲಿರಿಸಿಕೊಳ್ಳುವ ಬದಲಿಗೆ ಈ ರೀತಿ ಮಾಡಲು ಯಾವ ಶಕ್ತಿಗಳು ಪ್ರೇರಣ ಕೊಟ್ತವು? ಇದು ಕ್ರಿಮಿನಲ್ ಪಿತೂರಿಯಲ್ಲವೆ?" ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com