ಸುರೇಶ್ ರೈನಾ ಮನೆಗೆ ಹೊಸ ಅತಿಥಿ, ಗಂಡು ಮಗುವಿಗೆ ಜನ್ನ ನೀಡಿದ ಪ್ರಿಯಾಂಕಾ

ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಸುರೇಶ್ ರೈನಾ ಮತ್ತು ಪ್ರಿಯಾಂಕಾ ಕುಟುಂಬಕ್ಕೆ ಹೊಸ ಅತಿಥಿಯ ಆಗನವಾಗಿದೆ.

Published: 23rd March 2020 05:03 PM  |   Last Updated: 23rd March 2020 05:03 PM   |  A+A-


rain1

ಸುರೇಶ್ ರೈನಾ ದಂಪತಿ

Posted By : Lingaraj Badiger
Source : UNI

ನವದೆಹಲಿ: ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಸುರೇಶ್ ರೈನಾ ಮತ್ತು ಪ್ರಿಯಾಂಕಾ ಕುಟುಂಬಕ್ಕೆ ಹೊಸ ಅತಿಥಿಯ ಆಗನವಾಗಿದೆ.

ಸುರೇಶ್ ರೈನಾ ಅವರ ಪತ್ನಿ ಪ್ರಿಯಾಂಕಾ ಅವರು ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದರೊಂದಿಗೆ ಈ ದಂಪತಿ ಸದ್ಯ ಇಬ್ಬರು ಮಕ್ಕಳನ್ನು ಹೊಂದಿದಂತಾಗಿದೆ.

2016ರ ಮೇನಲ್ಲಿ ರೈನಾ ಮಗಳು ಗ್ರೇಸಿಯಾ ಜನಿಸಿದ್ದಳು. ಭಾರತ ತಂಡದಲ್ಲಿ ಉಜ್ವಲ ಭವಿಷ್ಯ ಕಂಡುಕೊಂಡ ಎಡಗೈ ಬ್ಯಾಟ್ಸ್ ಮನ್ ರೈನಾ, 2011ರ ವಿಶ್ವಕಪ್ ಮತ್ತು 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡದ ಸದಸ್ಯರಾಗಿದ್ದರು.

ರೈನಾ ಪ್ರತಿನಿಧಿಸುವ ಐಪಿಎಲ್ ಫ್ರಾಂಚೈಸಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಚೆನ್ನೈ ತಂಡದ ಸಹ ಆಟಗಾರ ಹರ್ಭಜನ್ ಸಿಂಗ್, ರೈನಾ ದಂಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಭಾರತದ ಪರ 226 ಏಕದಿನ ಪಂದ್ಯಗಳನ್ನಾಡಿರುವ ರೈನಾ, 5615 ರನ್ ಗಳಿಸಿದ್ದಾರೆ. 35.31 ರ ಬ್ಯಾಟಿಂಗ್ ಸರಾಸರಿ ಹೊಂದಿರು ಅವರು 5 ಶತಕ 36 ಅರ್ಧಶತಗಳನ್ನು ದಾಖಲಿಸಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp