ಕೋವಿಡ್-19: ತ.ನಾಡಲ್ಲಿ ಹೊಸದಾಗಿ 8 ಮಂದಿಯಲ್ಲಿ ವೈರಸ್ ಪತ್ತೆ, ದೇಶದಲ್ಲಿ ಸೋಂಕಿತರ ಸಂಖ್ಯೆ 626ಕ್ಕೆ ಏರಿಕೆ

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ತಮಿಳುನಾಡಿನಲ್ಲಿ ಹೊಸದಾಗಿ ಮತ್ತೆ 8 ಮಂದಿಯಲ್ಲಿ ವೈರಸ್ ದೃಢಪಟ್ಟಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 626ಕ್ಕೆ ಏರಿಕೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

Published: 26th March 2020 09:53 AM  |   Last Updated: 26th March 2020 09:53 AM   |  A+A-


COVID-19: India tally reaches 626, eight new cases in Tamil Nadu

ಕೋವಿಡ್-19: ತ.ನಾಡಲ್ಲಿ ಹೊಸದಾಗಿ 8 ಮಂದಿಯಲ್ಲಿ ವೈರಸ್ ಪತ್ತೆ, ದೇಶದಲ್ಲಿ ಸೋಂಕಿತರ ಸಂಖ್ಯೆ 626ಕ್ಕೆ ಏರಿಕೆ

Posted By : Manjula VN
Source : The New Indian Express

ಚೆನ್ನೈ: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ತಮಿಳುನಾಡಿನಲ್ಲಿ ಹೊಸದಾಗಿ ಮತ್ತೆ 8 ಮಂದಿಯಲ್ಲಿ ವೈರಸ್ ದೃಢಪಟ್ಟಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 626ಕ್ಕೆ ಏರಿಕೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಈ ಕುರಿತು ಮಾಹಿತಿ ನೀಡಿರು ಕೆಲೆಕ್ಟರ್ ಟಿಜಿ ವಿನಯ್ ಅವರು, ಧಾರ್ಮಿಕ ಪ್ರವಾಸ ಕೈಗೊಂಡಿದ್ದ ಥಯ್ಲ್ಯಾಂಡ್ ಮಹಿಳೆಯೊಬ್ಬರು ಮದುರೈಗೆ ಮಾರ್ಚ್ 12 ರಂದು ಬಂದಿದ್ದು, ಇವರಲ್ಲಿ ವೈರಸ್ ಪತ್ತೆಯಾಗಿದೆ ಎಂದು ಹೇಳಿದ್ದಾರೆ. 

ಮಧುರೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ 54 ವರ್ಷದ ವ್ಯಕ್ತಿಯಲ್ಲಿ ವೈರಸ್ ಪತ್ತೆಯಾಗಿತ್ತು. ಇದೇ ಸ್ಥಳಕ್ಕೆ ಎರಡು ವಾರದಲ್ಲಿ 8 ಮಂದಿ ಭೇಟಿ ನೀಡಿದ್ದರು ಎಂದು ತಿಳಿಸಿದ್ದಾರೆ.

ಈ ನಡುವೆ ಶ್ರೀನಗರದಲ್ಲಿ ವೈರಸ್ ನಿಂದಾಗಿ 65 ವರ್ಷದ ವ್ಯಕ್ತಿಯೊಬ್ಬರು ವೈರಸ್'ಗೆ ಬಲಿಯಾಗಿದ್ದಾರೆ. ಈ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದಿ ಮತ್ತೆ ನಾಲ್ವರು ವ್ಯಕ್ತಿಗಳಲ್ಲಿಯೂ ವೈರಸ್ ದೃಢಪಟ್ಟಿದೆ ಎಂದು ತಿಳಿದುಬಂದಿದೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp