ದೆಹಲಿ ವೈದ್ಯನಲ್ಲಿ ಪತ್ತೆಯಾದ ಕೊರೋನಾ ವೈರಸ್: ಚಿಕಿತ್ಸೆ ಪಡೆದಿದ್ದ ಜನರ ಮೇಲೆ ತೀವ್ರ ನಿಗಾ

ಈಶಾನ್ಯ ದೆಹಲಿಯ ಮೊಹಲ್ಲಾ ಕ್ಲಿನಿಕ್ ವೈದ್ಯರೊಬ್ಬರಲ್ಲಿ ಕೊರೋನಾ ವೈರಸ್ ದೃಢಪಟ್ಟಿದ್ದು, ಇದೀಗ ವೈದ್ಯರು ಚಿಕಿತ್ಸೆ ನೀಡಿದ್ದ ಜನರ ಮೇಲೆ ತೀವ್ರ ನಿಗಾವಹಿಸಲಾಗಿದೆ ಎಂದು ವರದಿಗಳಿಂದ ತಿಳಿದಬಂದಿದೆ,
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಈಶಾನ್ಯ ದೆಹಲಿಯ ಮೊಹಲ್ಲಾ ಕ್ಲಿನಿಕ್ ವೈದ್ಯರೊಬ್ಬರಲ್ಲಿ ಕೊರೋನಾ ವೈರಸ್ ದೃಢಪಟ್ಟಿದ್ದು, ಇದೀಗ ವೈದ್ಯರು ಚಿಕಿತ್ಸೆ ನೀಡಿದ್ದ ಜನರ ಮೇಲೆ ತೀವ್ರ ನಿಗಾವಹಿಸಲಾಗಿದೆ ಎಂದು ವರದಿಗಳಿಂದ ತಿಳಿದಬಂದಿದೆ,

ಕೇವಲ ವೈದ್ಯನಷ್ಟೇ ಅಲ್ಲದೆ. ಅವರ ಪತ್ನಿ ಹಾಗೂ ಮಗಳಲ್ಲೂ ವೈರಸ್ ದೃಢಪಟ್ಟಿದ್ದು, ಇದೀಗ ಆತಂಕ ಹೆಚ್ಚಾಗಿದೆ. 

ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಾರ್ಚ್ 12 ರಿಂದ 18ರವರೆಗೆ ಮೌಜ್ ಪುರದಲ್ಲಿರುವ ಕ್ಲಿನಿಕ್ ಭೇಟಿ ನೀಡಿದವರು ಎಲ್ಲರೂ ಕ್ವಾರಂಟೈನ್ ನಲ್ಲಿ ಇರುವಂತೆ ಅಧಿಕಾರಿಗಳು ಸೂಚಿಸಿದ್ದೇನೆಂದು ವರದಿಗಳು ತಿಳಿಸಿವೆ. 

ಒಂದು ವೇಳೆ ವೈದ್ಯರ ತಪಾಸಣೆ ವೇಳೆ ವೈರಸ್ ಸೋಂಕು ತಗುಲಿದ್ದು, ಅಂತಹವರಿಗೆ ವೈರಸ್ ಲಕ್ಷಣ ಕಂಡುಬಂದಿದ್ದೇ ಆದಲ್ಲಿ ಕೂಡಲೇ ಪ್ರತ್ಯೇಕವಾಗಿರಬೇಕೆಂದು ಸೂಚನೆ ನೀಡಿದೆ. 

ಸೋಂಕು ತಗುಲಿದ ವೈದ್ಯರು ವಿದೇಶಕ್ಕೆ ತೆರಳಿದ್ದರೇ, ವೈದ್ಯರಿಂದ ಚಿಕಿತ್ಸೆ ಪಡೆದಿದ್ದ ರೋಗಿಗಳಿಗೂ ಸೋಂಕು ತಗುಲಿರುವ ಕುರಿತು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. 

ಮೊಹಲ್ಲಾ ಕ್ಲಿನಿಕ್ ಗಳು ಸಮುದಾಯ ಆರೋಗ್ಯ ಕೇಂದ್ರಗಳಾಗಿವೆ. ದೆಹಲಿ ಸರ್ಕಾರ ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆ ನೀಡಲು ಮೊಹಲ್ಲಾ ಕ್ಲಿನಿಕ್ ಆರಂಭಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com