ಕೊರೋನಾ ತಡೆಗೆ 2 ಕೋಟಿ ರೂ ದೇಣಿಗೆ ನೀಡಿದ ಎಂಜಿ ಮೋಟಾರ್ ಇಂಡಿಯಾ

ಕೊರೊನಾ ಸೋಂಕು ಹರಡದಂತೆ ಸರ್ಕಾರದ ಜೊತೆ ಕೈಜೋಡಿಸಿ ಸಹಾಯ ಮಾಡುವ ಉದ್ದೇಶದಿಂದ ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು 2 ಕೋಟಿ ರೂಪಾಯಿಯನ್ನು ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳಿಗೆ ಒದಗಿಸಿದೆ.
ಎಂಜಿ ಮೋಟಾರ್ ಇಂಡಿಯಾ
ಎಂಜಿ ಮೋಟಾರ್ ಇಂಡಿಯಾ

ನವದೆಹಲಿ: ಕೊರೊನಾ ಸೋಂಕು ಹರಡದಂತೆ ಸರ್ಕಾರದ ಜೊತೆ ಕೈಜೋಡಿಸಿ ಸಹಾಯ ಮಾಡುವ ಉದ್ದೇಶದಿಂದ ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು 2 ಕೋಟಿ ರೂಪಾಯಿಯನ್ನು ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳಿಗೆ ಒದಗಿಸಿದೆ.

ವೈಸರ್ ಹರಡುವಿಕೆ ಪ್ರಯತ್ನಕ್ಕೆ ಭಾರತ ಸರ್ಕಾರಕ್ಕೆ ಭಾರಿ ಸಂಪನ್ಮೂಲಗಳು ಬೇಕಾಗುತ್ತವೆ ಎಂದು ಸಂಸ್ಥೆಯು ಮನಗಂಡಿದೆ. ಸಾಮಾಜಿಕ ಜವಾಬ್ದಾರಿಯುತ ಸಂಘಟನೆಯಾಗಿ ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು ತನ್ನ ಕಾರು ತಯಾರಕ ಸೌಲಭ್ಯಗಳು ಇರುವ ಗುರುಗ್ರಾಮ್  ಮತ್ತು ಹ್ಯಾಲೊಲ್ (ವಡೋದರಾ) ಪ್ರದೇಶದಲ್ಲಿರುವ ಆಸ್ಪತ್ರೆಗೆ ಈ ನೆರವು ನೀಡಿದೆ.

ವೈದ್ಯಕೀಯ ಸಿಬ್ಬಂದಿ ಮತ್ತು ಸಮಾಜದ ಹಿಂದುಳಿದ ವರ್ಗಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಈ ನೆರವು ಅನುಕೂಲಕಾರಿ. 1 ಕೋಟಿ ರೂ ಅನ್ನು ಸಂಸ್ಥೆಯು ಒದಗಿಸಿದೆ ಮತ್ತು ಉಳಿದ ಇನ್ನೊಂದು ಕೋಟಿ ರೂ ಅನ್ನು ಸಂಸ್ಥೆಯ ಉದ್ಯೋಗಿಗಳು ನೀಡಿದ್ದಾರೆ. ಗುರುಗ್ರಾಮ್ ಮತ್ತು  ಹ್ಯಾಲೊಲ್ (ವಡೋದ್ರಾ) ದಲ್ಲಿ ವೈದ್ಯಕೀಯ ನೆರವು ನೀಡುವ ನಿರ್ದಿಷ್ಟ ಸರ್ಕಾರಿ ಆಸ್ಪತ್ರೆ ಮತ್ತು ಆರೋಗ್ಯ ಸಂಸ್ಥೆಗಳ ಅಗತ್ಯಕ್ಕೆ ಅನುಗುಣವಾಗಿ ಹ್ಯಾಂಡ್ ಗ್ಲೋಸ್ ಗಳು, ಮಾಸ್ಕ್, ವೆಂಟಿಲೇಟರ್‌ಗಳು, ಔಷಧಿಗಳು ಮತ್ತು ಹಾಸಿಗೆಗಳು ಈ ನೆರವಿನಲ್ಲಿ ಒಳಗೊಂಡಿದೆ.

ಮಾರಾಟಗಾರರು ಮತ್ತು ಕಾರ್ಯಾಗಾರಗಳಲ್ಲಿ ಸಿಬ್ಬಂದಿಗಳ ಸುರಕ್ಷತೆ ಮತ್ತು ಯೋಗಕ್ಷೇಮದ ಬಗೆಗಿನ ಅದರ ಬದ್ಧತೆಯ ಭಾಗವಾಗಿ ಕಾರು ತಯಾರಕರು ದೇಶಾದ್ಯಂತ ತಮ್ಮ 5000 ಉದ್ಯೋಗಿಗಳಿಗೆ ವರ್ಧಿತ ವಿಮಾ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ವಿತರಕರನ್ನು  ಸನ್ಮಾನಿಸುತ್ತಿದ್ದಾರೆ ಮತ್ತು ಸಲಹೆ ನೀಡುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com