ಕಠಿಣ ಕ್ರಮ: ವಿದೇಶ ಪ್ರವಾಸ ಮುಚ್ಚಿಟ್ಟಿದ್ದ ಕೊರೋನಾ ಸೋಂಕಿತ ಮಹಿಳೆಗೆ 2 ವರ್ಷ ಜೈಲು ಶಿಕ್ಷೆ ಸಾಧ್ಯತೆ!

ದುಬೈನಿಂದ ವಾಪಸ್ಸಾಗಿದ್ದ ಕೊರೋನಾ ವೈರಸ್ ಸೋಂಕಿತ ಮಹಿಳೆಯೊಬ್ಬರು ವಿದೇಶ ಪ್ರವಾಸ ಮುಚ್ಚಿಟ್ಟಿದ್ದರಿಂದ ಅವರ ವಿರುದ್ಧ ಸೆಕ್ಷನ್ 270ರ ಅಡಿಯಲ್ಲಿ ಪ್ರಕರಣ ದಾಖಲಿಸಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಂಗ್ರಾ: ದುಬೈನಿಂದ ವಾಪಸ್ಸಾಗಿದ್ದ ಕೊರೋನಾ ವೈರಸ್ ಸೋಂಕಿತ ಮಹಿಳೆಯೊಬ್ಬರು ವಿದೇಶ ಪ್ರವಾಸ ಮುಚ್ಚಿಟ್ಟಿದ್ದರಿಂದ ಅವರ ವಿರುದ್ಧ ಸೆಕ್ಷನ್ 270ರ ಅಡಿಯಲ್ಲಿ ಪ್ರಕರಣ ದಾಖಲಿಸಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ.

ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ 63 ವರ್ಷದ ಮಹಿಳೆ ವಿದೇಶಿ ಪ್ರವಾಸವನ್ನು ಮುಚ್ಚಿಟ್ಟಿದ್ದರು. ನಂತರ ಆಕೆಯಲ್ಲಿ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದು ಪರೀಕ್ಷಿಸಿದಾಗ ಆಕೆಯಲ್ಲಿ ಕೊರೋನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ವಿರುದ್ಧ(ನಿರ್ಲಕ್ಷ್ಯದ ಆರೋಪದ ಮೇಲೆ) ಪ್ರಕರಣ ದಾಖಲಿಸಲಾಗಿದೆ. 

ಇದರ ಜೊತೆಗೆ ಸಿಂಗಾಪುರದಿಂದ ವಾಪಸ್ಸಾಗಿದ್ದ 32 ವರ್ಷದವರ ವಿರುದ್ದ ಸಹ ಪ್ರಕರಣ ದಾಖಲಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com