ಉತ್ತರಪ್ರದೇಶ: ಲಾಕ್'ಡೌನ್ ತಿರಸ್ಕರಿಸಿದ ಸ್ವಯಂ ಘೋಷಿತ ದೇವಮಹಿಳೆ, ಪೊಲೀಸರಿಗೇ ಬೆದರಿಕೆ

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಘೋಷಣೆ ಮಾಡಲಾಗಿರುವ ಲಾಕ್ ಡೌನ್ ತಿರಸ್ಕರಿಸಿರುವ ಉತ್ತರಪ್ರದೇಶದ ಸ್ವಯಂ ಘೋಷಿತ ದೇವ ಮಹಿಳೆಯೊಬ್ಬರು, ಪೊಲೀಸರಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಉತ್ತರಪ್ರದೇಶ: ಲಾಕ್'ಡೌನ್ ತಿರಸ್ಕರಿಸಿದ ಸ್ವಯಂ ಘೋಷಿತ ದೇವಮಹಿಳೆ, ಪೊಲೀಸರಿಗೇ ಬೆದರಿಕೆ
ಉತ್ತರಪ್ರದೇಶ: ಲಾಕ್'ಡೌನ್ ತಿರಸ್ಕರಿಸಿದ ಸ್ವಯಂ ಘೋಷಿತ ದೇವಮಹಿಳೆ, ಪೊಲೀಸರಿಗೇ ಬೆದರಿಕೆ

ಡಿಯೋರಿಯಾ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಘೋಷಣೆ ಮಾಡಲಾಗಿರುವ ಲಾಕ್ ಡೌನ್ ತಿರಸ್ಕರಿಸಿರುವ ಉತ್ತರಪ್ರದೇಶದ ಸ್ವಯಂ ಘೋಷಿತ ದೇವ ಮಹಿಳೆಯೊಬ್ಬರು, ಪೊಲೀಸರಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ತಮ್ಮನ್ನು ಮಾ ಆದಿ ಶಕ್ತಿ ಎಂದು ಹೇಳಿಕೊಂಡಿರುವ ಸ್ವಯಂ ಘೋಷಿತ ದೇವ ಮಹಿಳೆ, ತಮ್ಮ ಆಶ್ರಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಎಂದಿನಂತೆ ಆಯೋಜಿಸಿದ್ದರು. ಈ ವೇಳೆ ಸ್ಥಳಕ್ಕೆ ತೆರಳಿದ್ದ ಪೊಲೀಸರು, ಕಾರ್ಯಕ್ರಮಗಳನ್ನು ರದ್ದುಪಡಿಸುವಂತೆ ಸೂಚಿಸಿದರು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳೆ, ತನ್ನ ಕೈಯಲ್ಲಿ ಹಿಡಿದಿದ್ದ ದಂಡವನ್ನು ತೋರಿಸಿ, ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ. 

ಘಟನ ವೇಳೆ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದು, ಜನರನ್ನು ಸ್ಥಳದಿಂದ ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆಂದು ತಿಳಿದುಬಂದಿದೆ. 

ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಸರ್ಕಾರದ ವಕ್ತಾರ, ಲಾಕ್ ಡೌನ್ ತಿರಸ್ಕರಿಸಿ, ಇತರರ ಜೀವವನ್ನು ಅಪಾಯಕ್ಕೆ ಸಿಲುಕಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಮಹಿಳೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com