ಕೇರಳದಲ್ಲಿ ಸ್ಯಾನಿಟೈಸರ್ ಸೇವಿಸಿ ವ್ಯಕ್ತಿಯ ಸಾವು! 

ಸ್ಯಾನಿಟೈಸರ್ ಸೇವಿಸಿ ವಿಚಾರಣಾಧೀನ ಖೈದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ. 
ಕೇರಳದಲ್ಲಿ ಸ್ಯಾನಿಟೈಸರ್ ಸೇವಿಸಿ ವ್ಯಕ್ತಿಯ ಸಾವು!
ಕೇರಳದಲ್ಲಿ ಸ್ಯಾನಿಟೈಸರ್ ಸೇವಿಸಿ ವ್ಯಕ್ತಿಯ ಸಾವು!

ಪಾಲಕ್ಕಾಡ್: ಸ್ಯಾನಿಟೈಸರ್ ಸೇವಿಸಿ ವಿಚಾರಣಾಧೀನ ಖೈದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ. 

ಕಳ್ಳತನದ ಪ್ರಕರಣವೊಂದರಲ್ಲಿ ರಾಮನ್ ಕುಟ್ಟಿ ಎಂಬಾತನನ್ನು ಬಂಧಿಸಲಾಗಿತ್ತು. ಜೈಲಿನ ಖೈದಿಗಳು ಮಾಸ್ಕ್ ಗಳನ್ನು ತಯಾರಿಸುತ್ತಿದ್ದರು. ಈ ವೇಳೆಯಲ್ಲಿ ಈತ ಆತ್ಮಹತ್ಯೆಗೆ ಯತ್ನಿಸಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. 

ಸ್ಯಾನಿಟೈಸರ್ ಸೇವನೆಯಿಂದ ಈ ಖೈದಿ ಮೃತಪಟ್ಟಿದ್ದಾನೆ ಎಂಬ ಶಂಕೆ ಇದೆ. ಈ ಕುರಿತು ವಿಚಾರಣೆ ಪ್ರಾರಂಭಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com