ಕೊರೋನಾ ವೈರಸ್: ಪುಣೆಯಲ್ಲಿ ಗುಣಮುಖರಾದ 3 ಸೋಂಕಿತರು

ಮಾರಣಾಂತಿಕ ಕೊರೋನಾವೈರಸ್ ಸೋಂಕಿಗೊಳಗಾದ ಪುಣೆಯ ಮೂವರು ವ್ಯಕ್ತಿಗಳು ಇದೀಗ ಸೋಂಕಿನಿಂದ ಗುಣಮುಖರಾಗಿದ್ದು, ಶೀಘ್ರದಲ್ಲಿಯೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆಂದು ವರದಿಗಳು ತಿಳಿಸಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪುಣೆ: ಮಾರಣಾಂತಿಕ ಕೊರೋನಾವೈರಸ್ ಸೋಂಕಿಗೊಳಗಾದ ಪುಣೆಯ ಮೂವರು ವ್ಯಕ್ತಿಗಳು ಇದೀಗ ಸೋಂಕಿನಿಂದ ಗುಣಮುಖರಾಗಿದ್ದು, ಶೀಘ್ರದಲ್ಲಿಯೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆಂದು ವರದಿಗಳು ತಿಳಿಸಿವೆ. 

ಈ ಕುರಿತು ಪಿಪ್ರಿ-ಚಿಂಚ್ವಾಡ್ ಮುನ್ಸಿಪಲ್ ಕಮಿಷನರ್ ಶ್ರವಣ್ ಹಾರ್ದಿಕಾರ್ ಅವರು ಮಾಹಿತಿ ನೀಡಿದ್ದುರ, ಈ ಹಿಂದೆ ಸೋಂಕಿಗೊಳಗಾಗಿದ್ದ ಐವರು ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಇದೀಗ ಮತ್ತೆ ಮೂವರು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ. ನಗರದಲ್ಲಿ ಒಟ್ಟು 32 ಮಂದಿ ಸೋಂಕಿಗೊಳಗಾಗಿದ್ದು, ಈ ವರೆಗೂ 8 ಮಂದಿ ಗುಣಮುಖರಾಗಿದ್ದಾರೆಂದು ಹೇಳಿದ್ದಾರೆ. 

ಈ ನಡುವೆ ದೇಶದಲ್ಲಿ ಕೊರೋನಾ ವೈರಸ್ ಗೊಳಗಾಗುತ್ತಿರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 727ಕ್ಕೆ ಏರಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com