ಅಪೊಲೊ ಸಮೂಹದ ಆಸ್ಪತ್ರೆಗಳಲ್ಲಿ ಕೊರೋನಾವೈರಸ್ ಪರೀಕ್ಷೆ, ಸ್ಕ್ರೀನಿಂಗ್ ಆರಂಭ

ಅಪೊಲೊ ಸಮೂಹದ  ಆಸ್ಪತ್ರೆಗಳಲ್ಲಿ ಶುಕ್ರವಾರದಿಂದ ಕೊರೋನಾವೈರಸ್ ರೋಗಿಗಳ  ಪರೀಕ್ಷೆ ಹಾಗೂ ಸ್ಕ್ರೀನಿಂಗ್ ಆರಂಭವಾಗಲಿದೆ.
ಅಪೊಲೊ ಆಸ್ಪತ್ರೆ
ಅಪೊಲೊ ಆಸ್ಪತ್ರೆ

ಹೈದ್ರಾಬಾದ್: ಅಪೊಲೊ ಸಮೂಹದ  ಆಸ್ಪತ್ರೆಗಳಲ್ಲಿ ಶುಕ್ರವಾರದಿಂದ ಕೊರೋನಾವೈರಸ್ ರೋಗಿಗಳ  ಪರೀಕ್ಷೆ ಹಾಗೂ ಸ್ಕ್ರೀನಿಂಗ್ ಆರಂಭವಾಗಲಿದೆ. ಆರಂಭಿಕವಾಗಿ ಐದು ನಗರಗಳಲ್ಲಿ ಈ ಸೌಕರ್ಯ ಆರಂಭವಾಗಲಿದೆ ನಂತರ ಇತರೆಡೆಯೂ ಪ್ರಾರಂಭಿಸಲಾಗುವುದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಾರ್ಗಸೂಚಿಯಂತೆ ಪ್ರತಿಯೊಂದು ಪರೀಕ್ಷೆಗೂ 4500ರೂ. ಶುಲ್ಕ ವಿಧಿಸಲಾಗುವುದು ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.

ಅಂತೆಯೇ, ಚೆನ್ನೈ, ಮುಂಬೈ, ಹೈದ್ರಾಬಾದ್, ಕೊಲ್ಕತ್ತಾ, ಬೆಂಗಳೂರು ಮತ್ತು ದೆಹಲಿಯಲ್ಲಿ 300 ಐಸೋಲೇಷನ್ ವಾರ್ಡ್ ಗಳನ್ನು ತೆರೆಯಲಾಗುತ್ತಿದೆ. ಆದರೆ,   ಕೋವಿಡ್-19 ರೋಗಿಗಳಿಗಾಗಿ  ದೇಶಾದ್ಯಂತ 5 ಸಾವಿರ ಕೊಠಡಿಗಳನ್ನು ಹೊಂದುವ  ಉದ್ದೇಶವಿದ್ದು, ಪ್ರತಿ ಮೂರು ದಿನಗಳಿಗೊಮ್ಮೆ 50 ಕೊಠಡಿಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗುವುದು,ಈ ಪ್ರಸ್ತಾವದಿಂದ ತಿಂಗಳಿಗೆ 10 ಸಾವಿರದಿಂದ 15 ಸಾವಿರ ರೋಗಿಗಳಿಗೆ ನೆರವಾಗಲಿದ್ದು, ಸುಮಾರು 50 ಲಕ್ಷ ಜನರಿಗೆ ಸೋಂಕು ಹರಡುವುದನ್ನು ತಡೆಯಲು ನೆರವಾಗಲಿದೆ ಎಂದು  ಅಪೊಲೊ ಆಸ್ಪತ್ರೆ ಸಮೂಹದ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸಂಗೀತಾ ರೆಡ್ಡಿ ತಿಳಿಸಿದ್ದಾರೆ.

18 ರಾಜ್ಯಗಳಲ್ಲಿರುವ 3800 ಔಷಧಾಲಯಗಳಲ್ಲಿನ ಸಂಗ್ರಹವನ್ನು ಹೆಚ್ಚಿಸಲಾಗುವುದು, ಇವುಗಳಿಂದ ಪ್ರಸ್ತುತ ಪ್ರತಿದಿನ 5 ಲಕ್ಷ ಜನರಿಗೆ ಸೇವೆ ಮಾಡುವ ಸಾಮರ್ಥ್ಯವಿದ್ದು, ಅವುಗಳನ್ನು ಅಗತ್ಯಬಿದ್ದರೆ 1 ಮಿಲಿಯನ್ ಗೆ ಹೆಚ್ಚಿಸಲಾಗುವುದು, ಮನೆ ವಿತರಣಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು,  ಬೆಲೆಗಳ ಮೇಲೆ ನಿಗಾ ಇಡಲಾಗುವುದು ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.

ಕೊರೋನಾವೈರಸ್ ಸ್ಕ್ರೀನಿಂಗ್ ಹಾಗೂ ಪ್ರಾಥಮಿಕ ತಪಾಸಣೆಗಾಗಿ ಆಸ್ಪತ್ರೆ ಆರಂಭಿಸಿರುವ ಕೃತಕ ಬುದ್ದಿಮತ್ತೆ ಆಧಾರದ  ಸ್ಕ್ಯಾನ್ ಬಗ್ಗೆ ಆರು ಭಾಷೆಗಳಲ್ಲಿ ಲಭ್ಯವಿರುವ  ಆಪ್ ಮತ್ತು ವೆಬ್ ಸೈಟ್ ನಲ್ಲಿ ಮಾಹಿತಿ ದೊರೆಯಲಿದೆ.  ಈಗಾಗಲೇ ಸುಮಾರು 6 ಮಿಲಿಯನ್ ಜನರು ಆಪ್ ಮತ್ತು ವೆಬ್ ಸೈಟ್ ಮೂಲಕ ಮಾಹಿತಿ ಪಡೆದಿದ್ದು, ಸುಮಾರು  10 ಮಿಲಿಯನ್ ಜನರು ಈ ಸ್ಕ್ಯಾನ್ ಬಗ್ಗೆ ತಿಳಿಯುವ ನಿರೀಕ್ಷೆ ಹೊಂದಿರುವುದಾಗಿ ಅಪೊಲೊ ಕಾರ್ಯಕಾರಿ ಉಪಾಧ್ಯಕ್ಷೆ ಶೋಬಾನಾ ಕಾಮೆನಿ ತಿಳಿಸಿದ್ದಾರೆ. 

ಕೊರೋನಾವೈರಸ್  ಸಾಂಕ್ರಾಮಿಕ  ರೋಗಕ್ಕೆ ಯಾವುದೇ ಗಡಿ, ಧರ್ಮ, ಜಾತಿ, ಮತದ ಎಲ್ಲೆ ಇಲ್ಲ. ಇದರ ವಿರುದ್ಧ ಹೋರಾಡಲು ಎಲ್ಲರೂ ಒಗ್ಗೂಡುವುದು ಅಗತ್ಯವಾಗಿದೆ ಎಂದು  ಅಪೊಲೊ ಆಸ್ಪತ್ರೆ ಸಮೂಹದ ಮುಖ್ಯಸ್ಥ ಡಾ. ಪ್ರತಾಪ್ ಸಿ ರೆಡ್ಡಿ ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com