ಪಾಕ್ ನರಿಬುದ್ಧಿ: ಪಾಕಿಸ್ತಾನದಲ್ಲಿನ ಕೊರೋನಾ ಸೋಂಕಿತರನ್ನು ಪಿಒಕೆಗೆ ತಂದು ಬಿಡುತ್ತಿರುವ ಪಾಕ್ ಸೈನಿಕರು!

ಗಡಿಯಲ್ಲಿ ಕದನ ವಿರಾಮ ಮೂಲಕ ತೊಂದರೆ ಕೊಡುತ್ತಿದ್ದ ಪಾಕಿಸ್ತಾನ ಸೇನೆ ಇದೀಗ ಪಾಕಿಸ್ತಾನದಲ್ಲಿನ ಕೊರೋನಾ ಸೋಂಕಿತರನ್ನು ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಗಿಲ್ಗಿಟ್, ಬಾಲ್ಟಿಸ್ತಾನಕ್ಕೆ ತಂದು ಬಿಡುತ್ತಿದ್ದಾರೆ. 

Published: 27th March 2020 07:41 PM  |   Last Updated: 27th March 2020 10:08 PM   |  A+A-


Imran Khan

ಇಮ್ರಾನ್ ಖಾನ್

Posted By : Vishwanath S
Source : Online Desk

ನವದೆಹಲಿ: ಗಡಿಯಲ್ಲಿ ಕದನ ವಿರಾಮ ಮೂಲಕ ತೊಂದರೆ ಕೊಡುತ್ತಿದ್ದ ಪಾಕಿಸ್ತಾನ ಸೇನೆ ಇದೀಗ ಪಾಕಿಸ್ತಾನದಲ್ಲಿನ ಕೊರೋನಾ ಸೋಂಕಿತರನ್ನು ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಗಿಲ್ಗಿಟ್, ಬಾಲ್ಟಿಸ್ತಾನಕ್ಕೆ ತಂದು ಬಿಡುತ್ತಿದ್ದಾರೆ. 

ಇದರಿಂದ ಆಘಾತಗೊಂಡಿರುವ ಸ್ಥಳೀಯರು ಸೋಂಕು ಹರಡುವ ಭೀತಿ ಎದುರಿಸುತ್ತಿದ್ದಾರೆ. ಸದ್ಯ ಪಿಒಕೆ ಹಾಗೂ ಗಿಲ್ಗಿಟ್ ಎರಡೂ ಪ್ರಾಂತ್ಯಗಳು ಪಾಕಿಸ್ತಾನ ವಶದಲ್ಲಿವೆ. 

ಪಿಒಕೆ ಹಾಗೂ ಗಿಲ್ಗಿಟ್ ಪ್ರಾಂತ್ಯಗಳು ಭಾರತ-ಪಾಕ್ ಗಡಿಯಲ್ಲಿ ಬರುತ್ತವೆ. ಪಾಕಿಸ್ತಾನದ ಪ್ರಮುಖ ನಗರಗಳು ಹಾಗೂ ಸೇನಾ ನೆಲೆಗಳು ಇರುವ ಕಡೆ ಕೊರೋನಾ ವೈರಸ್ ಸೋಂಕಿತರು ಪತ್ತೆಯಾದರೆ ಅವರನ್ನು ಗಡಿಪಾರು ಮಾಡುವ ರೀತಿಯಲ್ಲಿ ಗಡಿ ಭಾಗಕ್ಕೆ ತಂದು ಬಿಡುತ್ತಿದ್ದಾರೆ. 

ಮುಚ್ಚಿದ ಪಾಕಿಸ್ತಾನದ ಸೇನಾ ವಾಹನಗಳಲ್ಲಿ ಸೋಂಕಿತರನ್ನು ತುಂಬಿಸಿಕೊಂಡು ಬರುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದು ಸಹಾಯಹಸ್ತ ಚಾಚುವಂತೆ ಭಾರತದತ್ತ ಮೊರೆಯಿಡುತ್ತಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp