ಕೊವಿಡ್-19: ದೇಶಿ ವಿಮಾನಗಳ ಹಾರಾಟದ ಮೇಲಿನ ನಿಷೇಧ ಏ. 14ರವರೆಗೆ ವಿಸ್ತರಣೆ

ಕೊರೋನಾ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ದೇಶಾದ್ಯಂತ ಏಪ್ರಿಲ್ 14ರ ವರೆಗೆ ಲಾಕ್ ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ದೇಶಿ ವಿಮಾನಗಳ ಹಾರಾಟದ ಮೇಲೆ ನಿಷೇಧವನ್ನು ಏಪ್ರಿಲ್ 14ರ ವರೆಗೆ ವಿಸ್ತರಿಸಲಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೊರೋನಾ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ದೇಶಾದ್ಯಂತ ಏಪ್ರಿಲ್ 14ರ ವರೆಗೆ ಲಾಕ್ ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ದೇಶಿ ವಿಮಾನಗಳ ಹಾರಾಟದ ಮೇಲೆ ನಿಷೇಧವನ್ನು ಏಪ್ರಿಲ್ 14ರ ವರೆಗೆ ವಿಸ್ತರಿಸಲಾಗಿದೆ. 

ಮಾರ್ಚ್‌ 31ರ ವರೆಗೆ ಜಾರಿಯಲ್ಲಿದ್ದ ದೇಶಿ ವಿಮಾನಗಳ ಹಾರಾಟ ನಿಷೇಧವನ್ನು ಏಪ್ರಿಲ್‌ 14ವರೆಗೆ ವಿಸ್ತರಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ಶುಕ್ರವಾರ ಆದೇಶ ಹೊರಡಿಸಿದೆ. 

ಈಗಾಗಲೇ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಏಪ್ರಿಲ್‌ 15ರವರೆಗೆ ಸ್ಥಗಿತಗೊಳಿಸಲಾಗಿದೆ. ಇದೀಗ ಇದೇ ಸಾಲಿಗೆ ದೇಶಿ ವಿಮಾನಗಳ ಹಾರಾಟವೂ ಸೇರ್ಪಡೆಗೊಳಿಸಲಾಗಿದೆ.

ಇನ್ನು ರೈಲ್ವೆ ಇಲಾಖೆ ಸಹ ಎಲ್ಲಾ ಪ್ರಯಾಣಿಕ ರೈಲುಗಳನ್ನು ಏಪ್ರಿಲ್‌ 14ರವರೆಗೆ ರದ್ದುಗೊಳಿಸಿದೆ. ಕೇವಲ ಸರಕು ಸಾಗಣೆ ರೈಲುಗಳು ಮಾತ್ರ ರಾಜ್ಯ ರಾಜ್ಯಗಳ ನಡುವೆ ಓಡಾಟ ನಡೆಸುತ್ತಿವೆ. ಹೆಚ್ಚು ಕಡಿಮೆ ಎಲ್ಲಾ ರಾಜ್ಯಗಳು ಅಂತಾರಾಜ್ಯ ವಾಹನಗಳ ಓಡಾಟವನ್ನು ಸ್ಥಗಿತಗೊಳಿಸಿದ್ದು, ಕೇವಲ ಅಗತ್ಯ ಸರಕುಗಳನ್ನು ಹೊತ್ತ ವಾಹನಗಳ ಓಡಾಟಕ್ಕೆ ಮಾತ್ರ ಅನುಮತಿ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com