ಲಾಕ್ ಡೌನ್ ನಡುವೆ ತನ್ನವಳ ಜತೆ ವಿವಾಹವಾಗಲು ಬೈಕಿನಲ್ಲಿ ಆಗಮಿಸಿದ ವರ!

ಮದುವೆಗಾಗಿ ವಿಶೇಷ ಬಾಸಿಂಗ, ಪೇಟಾ ಸೇರಿ ಅಲಂಕಾರಿಕ ವಸ್ತ್ರ ಧರಿಸಿದ್ದ ವರನೊಬ್ಬ ಮೋಟಾರುಬೈಕನ್ನೇರಿ ತಾನು ಮದುವೆಯಾಗಲಿರುವ ವಧುವಿನ ಮನೆಗೆ ತೆರಳಿ ಅವಳನ್ನು ವಿವಾಹವಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೊರೋನಾವೈರಸ್ ಕಾರಣ ಭಾರತ ಲಾಕ್ ಡೌನ್ ಆಗಿರುವ ಈ ದಿನಗಳಲ್ಲಿ ಮದುವೆಯಂತಹಾ ಶುಭ ಸಮಾರಂಭಗಳು ನಡೆಯುವುದು ಕಠಿಣವಾಗಿದೆ. 

Published: 27th March 2020 03:05 PM  |   Last Updated: 27th March 2020 03:33 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : IANS

ಬಿಜ್ನೂರ್(ಉತ್ತರ ಪ್ರದೇಶ): ಮದುವೆಗಾಗಿ ವಿಶೇಷ ಬಾಸಿಂಗ, ಪೇಟಾ ಸೇರಿ ಅಲಂಕಾರಿಕ ವಸ್ತ್ರ ಧರಿಸಿದ್ದ ವರನೊಬ್ಬ ಮೋಟಾರುಬೈಕನ್ನೇರಿ ತಾನು ಮದುವೆಯಾಗಲಿರುವ ವಧುವಿನ ಮನೆಗೆ ತೆರಳಿ ಅವಳನ್ನು ವಿವಾಹವಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೊರೋನಾವೈರಸ್ ಕಾರಣ ಭಾರತ ಲಾಕ್ ಡೌನ್ ಆಗಿರುವ ಈ ದಿನಗಳಲ್ಲಿ ಮದುವೆಯಂತಹಾ ಶುಭ ಸಮಾರಂಭಗಳು ನಡೆಯುವುದು ಕಠಿಣವಾಗಿದೆ. 

ತನ್ನ ದ್ವಿಚಕ್ರ ವಾಹನದಲ್ಲಿ ಮದುಮಗ ಹಾಗೂ ಆತನ ಹಿಂದೆ ಆತನ ತಂದೆ, ಹಾಗೂ ಇಬ್ಬರು ಸ್ನೇಹಿತರು ವಧುವಿನ ಮನೆಗೆ ತೆರಳಿದ್ದಾರೆ. ಅಲ್ಲಿ ಮದುವೆ ಕಾರ್ಯಕ್ರಮ ನಡೆದು ಮದುಮಗಳ ಸಮೇತ ಹಿಂತಿರುಗಿದ್ದಾರೆ.

ಕೊರೋನಾ ಭೀತಿಯ ನಡುವೆ ನಡೆದ ಈ ವಿವಾಹವು  ಜತನ್ ಮೊಹಲ್ಲಾ ನಗರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿಎ.

ಕೊಟ್ವಾಲಿ ದೇಹತ್ ಪೊಲೀಸ್ ಠಾಣೆ ವ್ಯಾಪ್ತಿಯ ನಸೀರ್‌ಪುರ ಗ್ರಾಮದ ವರ ವಿಕಾಸ್ ಕುಮಾರ್ (22) ಕಳೆದ 18 ತಿಂಗಳಿನಿಂದ ತನ್ನ ಮದುವೆಗೆ ಸಿದ್ದವಾಗಿ ಕಾಯುತ್ತಿದ್ದ. ವಿಕಾಸ್ ತನ್ನ ವಿವಾಹ ವಿಜ್ರಂಭಣೆಯಿಂದ ನಡೆಯಬೇಕೆಂದು ಬಯಸಿದ್ದ ಮತ್ತು ಅದಕ್ಕೆ ತಕ್ಕ ತಯಾರಿ ಕೂಡ ನಡೆದಿತ್ತು,ಹಾಗಿದ್ದರೂ ಕೊರೋನಾ ಹಾವಳಿ ಕಾರಣ ದೇಶವ್ಯಾಪಿ ಲಾಕ್ ಡೌನ್ ಆಗಿ ಅವರ ಯೋಜನೆಗಳು ತಲೆಕೆಳಗಾಗಿದೆ.  ಆದರೆ ವಿಕಾಸ್ ಗೆ ಮದುವೆಯನ್ನು ಮುಂದೂಡಲು ಇಷ್ಟವಿರಲಿಲ್ಲ.

ಮದುವೆಯಲ್ಲಿ ಬಾಗವಹಿಸಿದ ವಧು-ವರ ಸೇರಿದಂತೆ ಎಲ್ಲರೂ ಮಾಸ್ಕ್ ಹಾಗೂ ಸ್ಯಾನಿಟ್ರೇಜರ್  ಗಳನ್ನು ಬಳಸಿದ್ದಾರೆ."ಭವ್ಯವಾದ ವಿವಾಹ ನಡೆಯಬೇಕೆಂದು ನಾನು ಕನಸು ಕಂಡಿದ್ದೆ. ಆದರೆ ಈ ಸಮಯದಲ್ಲಿ ನಾವು ಮದುವೆಯಾಗಿದ್ದು ನನಗಿನ್ನೂ ಸಂತಸ ತಂದಿದೆ. ಲಾಕ್ ಡೌನ್ ತೆಗೆದುಹಾಕಿದ ನಂತರ, ನಾವು ಸಂಭ್ರಮ ಆಚರಿಸಿಕೊಳ್ಳುತ್ತೇವೆ" ಅವರು ಸ್ಥಳೀಯ ವರದಿಗಾರರಿಗೆ ತಿಳಿಸಿದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp