ಕೊರೋನಾ ವೈರಸ್: ಹೋಂ ಕ್ವಾರಂಟೈನ್'ನಲ್ಲಿದ್ದ ಕೇರಳ ಸಬ್ ಕಲೆಕ್ಟರ್ ಮನೆಯಿಂದ ಪಲಾಯನ

ಹೋಂ ಕ್ವಾರಂಟೈನ್'ನಲ್ಲಿದ್ದ ಕೇರಳ ಸಬ್ ಕಲೆಕ್ಟರ್ ಒಬ್ಬರು ಮನೆಯಿಂದ ಓಡಿಹೋಗಿರುವ ಘಟನೆಯೊಂದು ಕೇರಳದ ಕೊಲ್ಲಂನಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊಲ್ಲಂ: ಹೋಂ ಕ್ವಾರಂಟೈನ್'ನಲ್ಲಿದ್ದ ಕೇರಳ ಸಬ್ ಕಲೆಕ್ಟರ್ ಒಬ್ಬರು ಮನೆಯಿಂದ ಓಡಿಹೋಗಿರುವ ಘಟನೆಯೊಂದು ಕೇರಳದ ಕೊಲ್ಲಂನಲ್ಲಿ ನಡೆದಿದೆ. 

ಮಾರ್ಚ್ 18 ರಂದು ಸಿಂಗಾಪುರಕ್ಕೆ ತೆರಳಿದ್ದ ಕಲೆಕ್ಟರ್ ಅನೂಪ್ ಮಿಶ್ರಾ ಅವ ರು, ಲಖನೌಗೆ ಭೇಟಿ ನೀಡಿದ್ದರು. ಬಳಿಕ ಕೇರಳಗೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯನ್ನು 14 ದಿನಗಳ ಕಾಲ ಗೃಹ ಬಂಧನದಲ್ಲಿರಿಸಲಾಗಿತ್ತು ಎಂದು ಅಧಿಕಾಱಿಗಳು ಮಾಹಿತಿ ನೀಡಿದ್ದಾರೆ. 

ಹೋಂ ಕ್ವಾರಂಟೈನ್ ನಲ್ಲಿರುವ ಅಧಿಕಾರಿಯನ್ನು ಪ್ರತೀನಿತ್ಯ ಅಧಿಕಾರಿಗಳು ತಪಾಸಣೆಗೊಳಪಡಿಸುತ್ತಿದ್ದು, ಇದರಂತೆ ಗುರುವಾರ ಅಧಿಕಾರಿಗಳು ತಪಾಸಣೆಗೆಂದು ಮನೆಗೆ ತೆರಳಿದ್ದ ಸಂದರ್ಭದಲ್ಲಿ ಅಧಿಕಾರಿ ಮನೆಯಲ್ಲಿಲ್ಲದಿರುವುದು ಕಂಡು ಬಂದಿದೆ. 

ದೂರವಾಣಿ ಕರೆ ಮಾಡಿದಾಗ ಬೆಂಗಳೂರಿನಲ್ಲಿ ತನ್ನ ಸಹೋದರನೊಂದಿಗೆ ಇರುವುದಾಗಿ ತಿಳಿಸಿದ್ದಾರೆ. ಅಧಿಕಾರಿಯ ಸಹೋದರ ವೈದ್ಯರಾಗಿದ್ದು, ಗೃಹ ಬಂಧನದಲ್ಲಿರುವಂತೆ ಸೂಚಿಸಿದ ದಿನವೇ ರಾಜ್ಯ ತೊರೆದಿರುವುದಾಗಿ ತಿಳಿಸಿದ್ದಾರೆ. ಆತನ ಹೇಳಿಕೆಯನ್ನು ನಾವು ಸಂಪೂರ್ಣವಾಗಿ ನಂಬಿಲ್ಲ. ಪೊಲೀಸರು ಅವರ ಮೊಬೈಲ್ ಸಂಖ್ಯೆಯನ್ನು ಟ್ರೇಸ್ ಮಾಡಿದ್ದು, ಈ ವೇಳೆ ಅವರ ಮೊಬೈಲ್ ಲೋಕೇಷನ್ ಲಖನೌ ತೋರಿಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಧಿಕಾರಿ ಬೇವಾಬ್ದಾರಿತನದ ವರ್ತನೆ ವಿರುದ್ಧ ಈಗಾಗಲೇ ಸರ್ಕಾರಕ್ಕೆ ಮಾಹಿತಿ ನೀಡಲಾಗಿದ್ದು, ಈ ಕುರಿತು ತನಿಖೆ ನಡೆಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com