ಕೋಲ್ಕತಾದಲ್ಲಿ ಕೊವಿಡ್-19 ಸಂತ್ರಸ್ತರಿಗಾಗಿ ಸ್ಮಶಾನ, ಶವಾಗಾರ ಕಾಯ್ದಿರಿಸಿದ ಪಶ್ಚಿಮ ಬಂಗಾಳ

ಮಹಾಮಾರಿ ಕೊರೋನಾ ವೈರಸ್ ನಿಂದ ಮೃತಪಡುವ ವ್ಯಕ್ತಿಗಳ ಶವ ಸಂಸ್ಕಾರಕ್ಕಾಗಿ ಕೋಲ್ಕತಾ ಮಹಾನಗರ ಪಾಲಿಕೆ(ಕೆಎಂಸಿ) ಎರಡು ಸ್ಮಶಾನ ಮತ್ತು ಒಂದು ಶವಗಾರವನ್ನು ಕಾಯ್ದಿರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲ್ಕತಾ: ಮಹಾಮಾರಿ ಕೊರೋನಾ ವೈರಸ್ ನಿಂದ ಮೃತಪಡುವ ವ್ಯಕ್ತಿಗಳ ಶವ ಸಂಸ್ಕಾರಕ್ಕಾಗಿ ಕೋಲ್ಕತಾ ಮಹಾನಗರ ಪಾಲಿಕೆ(ಕೆಎಂಸಿ) ಎರಡು ಸ್ಮಶಾನ ಮತ್ತು ಒಂದು ಶವಗಾರವನ್ನು ಕಾಯ್ದಿರಿಸಿದೆ.

ಪಶ್ಚಿಮ ಬಂಗಾಳದಲ್ಲಿ ನಿನ್ನೆ ಕೊವಿಡ್ -19ಗೆ ಮೊದಲ ಬಲಿಯಾಗಿದ್ದು, ಇದರ ಬೆನ್ನಲ್ಲೇ ಕೆಎಂಸಿ ಮುಸ್ಲಿಮರಿಗೆ ಒಂದು, ಹಿಂದೂಗಳಿಗೆ ಮತ್ತೊಂದು ಸ್ಮಶಾನ ಹಾಗೂ ಒಂದು ಶವಾಗಾರವನ್ನು ನಿಗದಿಪಡಿಸಿದೆ ಎಂದು ಮೇಯರ್ ಅತಿನ್ ಘೋಷ್ ಅವರು ತಿಳಿಸಿದ್ದಾರೆ.

ಕೊರೋನಾ ವೈರಸ್ ನಿಂದ ಮೃತಪಡುವ ವ್ಯಕ್ತಿಗಳ ಶವ ಸಂಸ್ಕಾರಕ್ಕಾಗಿ ನಾವು ಸ್ಮಶಾನ ಮತ್ತು ಶವಾಗಾರವನ್ನು ಕಾಯ್ದಿರಿಸಿದ್ದೇವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಘೋಷ್ ಅವರು ಪಿಟಿಐಗೆ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕೊರೋನಾ ವೈರಸ್ ನಿಂದ ಸೋಮವಾರ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com