ನೀವು ಹೋರಾಟಗಾರರು, ಕೊರೋನಾ ವಿರುದ್ಧ ಗೆದ್ದು ಬರುತ್ತೀರಾ: ಬ್ರಿಟನ್ ಪ್ರಧಾನಿಗೆ ಧೈರ್ಯ ತುಂಬಿದ ಮೋದಿ

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕೊರೋನಾ ಸೋಂಕಿಗೆ ತುತ್ತಾಗಿದ್ದು ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೀವು ಹೋರಾಟಗಾರರು, ಕೊರೋನಾ ವಿರುದ್ಧ ಗೆದ್ದು ಬರುತ್ತೀರಾ ಎಂದು ಧೈರ್ಯ ತುಂಬಿದ್ದಾರೆ. 
ಮೋದಿ-ಬೋರಿಸ್ ಜಾನ್ಸನ್
ಮೋದಿ-ಬೋರಿಸ್ ಜಾನ್ಸನ್

ನವದೆಹಲಿ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕೊರೋನಾ ಸೋಂಕಿಗೆ ತುತ್ತಾಗಿದ್ದು ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೀವು ಹೋರಾಟಗಾರರು, ಕೊರೋನಾ ವಿರುದ್ಧ ಗೆದ್ದು ಬರುತ್ತೀರಾ ಎಂದು ಧೈರ್ಯ ತುಂಬಿದ್ದಾರೆ. 

ನೀವು ಬೇಗ ಚೇತರಿಸಿಕೊಳ್ಳಲಿ, ಬ್ರಿಟನ್ ಆರೋಗ್ಯಕರವಾಗಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ. 

ಈ ಬಗ್ಗೆ ಸ್ವತಃ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಟ್ವೀಟ್ ಮಾಡಿಕೊಂಡಿದ್ದು, ಕಳೆದ 24 ಗಂಟೆಗಳಿಂದ ನಾನು ಕೊರೋನಾ ರೋಗಲಕ್ಷಣಗಳನ್ನು ಎದುರಿಸುತ್ತಿದ್ದೆ. ಈಗ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 

ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ನಾನು ಸ್ವಯಂ ನಿಯಂತ್ರಣ ವಿಧಿಸಿಕೊಳ್ಳುತ್ತಿದ್ದೇನೆ. ಆದರೆ ಸರ್ಕಾರದ ಕೆಲಸಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ. ಮಾ.25 ರಂದು ಬ್ರಿಟನ್ ನ ರಾಜವಂಶಸ್ಥ ಪ್ರಿನ್ಸ್ ಚಾರ್ಲ್ಸ್ ಗೂ ಕೊರೋನಾ ಸೋಂಕು ದೃಢಪಟ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com