ಕೊರೋನಾ ವೈರಸ್ ಸೋಂಕಿತ ರೋಗಿಯೊಂದಿಗೆ ಸಂಪರ್ಕ, 6 ವೈದ್ಯರು, 4 ದಾದಿಯರು ಕ್ವಾರಂಟೈನ್ ಗೆ!

ಕೊರೋನಾ ವೈರಸ್ ಸೋಂಕಿತ ರೋಗಿಯೊಂದಿಗೆ ಸಂಪರ್ಕ ಹೊಂದಿದ ಪರಿಣಾಮ ದೆಹಲಿ ಆಸ್ಪತ್ರೆಯ 6 ವೈದ್ಯರು, 4 ದಾದಿಯರನ್ನು ಕ್ವಾರಂಟೈನ್ ಗೆ ಹಾಕಿರುವ ಘಟನೆ ಭಾನುವಾರ ನಡೆದಿದೆ.
ಆರ್ ಎಂಎಲ್ ಆಸ್ಪತ್ರೆ-ಸಂಗ್ರಹ ಚಿತ್ರ
ಆರ್ ಎಂಎಲ್ ಆಸ್ಪತ್ರೆ-ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ವೈರಸ್ ಸೋಂಕಿತ ರೋಗಿಯೊಂದಿಗೆ ಸಂಪರ್ಕ ಹೊಂದಿದ ಪರಿಣಾಮ ದೆಹಲಿ ಆಸ್ಪತ್ರೆಯ 6 ವೈದ್ಯರು, 4 ದಾದಿಯರನ್ನು ಕ್ವಾರಂಟೈನ್ ಗೆ ಹಾಕಿರುವ ಘಟನೆ ಭಾನುವಾರ ನಡೆದಿದೆ.

ದೆಹಲಿಯ ಡಾ.ರಾಮ್ ಮನೋಹರ್ ಲೋಹಿಯಾ (ಆರ್ ಎಂಎಲ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕು ಪೀಡಿತ ರೋಗಿಯನ್ನು ಸಂಪರ್ಕಿಸಿದ ಕಾರಣ ಆಸ್ಪತ್ರೆಗೆ ಸೇರಿದ 6 ವೈದ್ಯರು, 4 ದಾದಿಯರನ್ನು 14 ದಿನಗಳ ಕ್ವಾರಂಟೈನ್ ಗೆ ಹಾಕಲಾಗಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.

ಮೂಲಗಳ ಪ್ರಕಾರ ಆಸ್ಪತ್ರೆಗೆ ದಾಖಲಾಗಿದ್ದ ಕೊರೋನಾ ವೈರಸ್ ಸೋಂಕಿತ ರೋಗಿಯೊಬ್ಬರೊಂದಿಗೆ ಆರ್ ಎಂಎಲ್ ಆಸ್ಪತ್ರೆಯ 6 ವೈದ್ಯರು, 4 ದಾದಿಯರು ಯಾವುದೇ ಮುಂಜಾಗ್ರಾತ ಪರಿಕರಗಳಿಲ್ಲದೇ ಅರಿವಿಲ್ಲದೇ ಸಂಪರ್ಕಕ್ಕೆ ಬಂದಿದ್ದಾರೆ. ಹೀಗಾಗಿ ಇವರಿಗೂ ವೈರಸ್ ಸೋಂಕು  ತಾಗಿರುವ ಸಾಧ್ಯತೆ ಮೇರೆಗೆ ಎಲ್ಲ 6 ವೈದ್ಯರು ಮತ್ತು 4 ದಾದಿಯರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಇಂತಹ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ಆಸ್ಪತ್ರೆ ಆಡಳಿತ ಮಂಡಳಿ ಭರವಸೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com