ಏಪ್ರಿಲ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ, ಸಶಸ್ತ್ರ ಪಡೆಗಳ ನಿಯೋಜನೆ ವದಂತಿ ಸಂಪೂರ್ಣ ಸುಳ್ಳು: ಭಾರತೀಯ ಸೇನೆ

ದೇಶದಲ್ಲಿ ಏಪ್ರಿಲ್ ತಿಂಗಳ ಮಧ್ಯೆ ತುರ್ತು ಪರಿಸ್ಥಿತಿ ಘೋಷಿಸಿ, ಸಶಸ್ತ್ರ ಪಡೆಗಳ ನಿಯೋಜನೆ ಮಾಡಲಾಗುವುದು ಎಂಬ ಸಾಮಾಜಿಕ ಮಾಧ್ಯಮಗಳಲ್ಲಿನ ಸಂದೇಶಗಳು ಸಂಪೂರ್ಣ ಸುಳ್ಳು ಎಂದಿರುವ ಭಾರತೀಯ ಸೇನೆ...

Published: 30th March 2020 04:31 PM  |   Last Updated: 30th March 2020 04:31 PM   |  A+A-


CAA Clashes: CM Kejriwal wants army in Delhi, toll rises to 20

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ನವದೆಹಲಿ: ದೇಶದಲ್ಲಿ ಏಪ್ರಿಲ್ ತಿಂಗಳ ಮಧ್ಯೆ ತುರ್ತು ಪರಿಸ್ಥಿತಿ ಘೋಷಿಸಿ, ಸಶಸ್ತ್ರ ಪಡೆಗಳ ನಿಯೋಜನೆ ಮಾಡಲಾಗುವುದು ಎಂಬ ಸಾಮಾಜಿಕ ಮಾಧ್ಯಮಗಳಲ್ಲಿನ ಸಂದೇಶಗಳು ಸಂಪೂರ್ಣ ಸುಳ್ಳು ಎಂದಿರುವ ಭಾರತೀಯ ಸೇನೆ, ಕೊರೋನಾ ವೈರಸ್‍ ನಿಭಾಯಿಸಲು ಯೋಧರು ಮತ್ತು ರಾಷ್ಟ್ರೀಯ ಕೆಡೆಟ್ ಕೋರ್‍(ಎನ್‍ಸಿಸಿ) ಅನ್ನು ನಾಗರಿಕ ಆಡಳಿತಕ್ಕೆ ಸಹಾಯ ಮಾಡಲು ನಿಯೋಜಿಸಲಾಗುವುದು. ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಹರಿದಾಡುತ್ತಿರುವ ಸಂದೇಶಗಳು ಸಂಪೂರ್ಣ ಸುಳ್ಳು ಎಂದು ಸೇನೆ ಟ್ವೀಟ್ ಮೂಲಕ ತಿಳಿಸಿದೆ.

ಈ ಮಧ್ಯೆ, ರಾಷ್ಟ್ರವ್ಯಾಪಿ ಕರೆ ನೀಡಲಾಗಿರುವ 21 ದಿನಗಳ ಲಾಕ್‌ಡೌನ್ ಅವಧಿಯನ್ನು ಏಪ್ರಿಲ್ 14 ನಂತರ ವಿಸ್ತರಿಸಲಾಗುವುದು ಎಂಬ ಮಾಧ್ಯಮ ವರದಿಗಳನ್ನು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟವಾಗಿ ತಳ್ಳಿಹಾಕಿದೆ.

ಕೆಲವು ಮಾಧ್ಯಮಗಳ ವರದಿಗಳಲ್ಲಿನ ಊಹಾಪೋಹಗಳನ್ನು ತಿರಸ್ಕರಿಸಿರುವ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ, ಇವೆಲ್ಲ ನಿರಾಧಾರ ಎಂದು ಹೇಳಿದ್ದಾರೆ.

ಸಂಪುಟ ಕಾರ್ಯದರ್ಶಿಯನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಸುದ್ದಿ ಮಾಹಿತಿ ಬ್ಯೂರೋ(ಪಿಐಬಿ) ಸಹ ಈ ವರದಿಗಳನ್ನು ತಿರಸ್ಕರಿಸಿ ಟ್ವೀಟ್ ಮಾಡಿದೆ.

21 ದಿನಗಳ ಲಾಕ್‍ಡೌನ್‍ ಅವಧಿ ಮುಗಿದ ನಂತರ ಮತ್ತೆ ಅವಧಿಯನ್ನು ವಿಸ್ತರಿಸಲಾಗುವುದು ಎಂಬ ವದಂತಿಗಳು ಹಬ್ಬಿದ್ದು, ಕೆಲ ಮಾಧ್ಯಮಗಳಲ್ಲೂ ವರದಿಯಾಗಿದೆ. ಆದರೆ, ಈ ವರದಿಗಳು ಆಧಾರರಹಿತವಾಗಿವೆ ಎಂದು ಹೇಳಿರುವ ಸಂಪುಟ ಕಾರ್ಯದರ್ಶಿಯವರು, ವರದಿಗಳನ್ನು ತಿರಸ್ಕರಿಸಿದ್ದಾರೆ ಎಂದು ಎಂದು ಪಿಐಬಿ ಸೋಮವಾರ ಬೆಳಿಗ್ಗೆ ತಿಳಿಸಿದೆ.

ವ್ಯಾಪಕವಾಗಿ ಹರಡುತ್ತಿರುವ ಕರೋನಾ ವೈರಸ್ ಸಾಂಕ್ರಾಮಿಕ ರೋಗ ತಡೆಗಟ್ಟುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 25 ರಿಂದ ಏಪ್ರಿಲ್ 14 ರವರೆಗೆ ಇಡೀ ದೇಶವನ್ನು ಸಂಪೂರ್ಣ ಲಾಕ್ ಡೌನ್(ಸಂಪೂರ್ಣ ಸ್ತಬ್ಧ)ಗೆ ಘೋಷಿಸಿದ್ದಾರೆ. ಲಾಕ್‌ಡೌನ್‌ ಭಾಗವಾಗಿ ಅನಿವಾರ್ಯವಲ್ಲದ ಎಲ್ಲ ಸೇವೆಗಳನ್ನು ನಿಷೇಧಿಸಲಾಗಿದೆ.

ಇಲ್ಲಿಯವರೆಗೆ, ಭಾರತೀಯ ಸೇನೆಯು ಮೂವರು ಸಿಬ್ಬಂದಿಯಲ್ಲಿ ಕೊರೋನಾ ವೈರಸ್‍ ದೃಢಪಟ್ಟಿದೆ. ಕೋಲ್ಕತ್ತಾದ ಕಮಾಂಡ್ ಆಸ್ಪತ್ರೆಯಲ್ಲಿ ಕರ್ನಲ್ ಹುದ್ದೆಯಲ್ಲಿರುವ ಒಬ್ಬ ವೈದ್ಯರು ಹಾಗೂ ಡೆಹ್ರಾಡೂನ್‌ನ ಸೇನಾ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರೊಬ್ಬರಲ್ಲಿ ಭಾನುವಾರ ಸೋಂಕು ದೃಢಪಟ್ಟಿದೆ.

ಈ ಹಿಂದೆ, ಲೇಹ್‍ನಲ್ಲಿ ಯೋಧನೊಬ್ಬನಿಗೆ ಕರೋನಾ ವೈರಸ್‍ ಸೋಂಕು ದೃಢಪಟ್ಟಿತ್ತು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp