ಕೋವಿಡ್-19 ರೋಗಿಗಳನ್ನು ಕಳಂಕಿತರಂತೆ ಕಾಣಬೇಡಿ: ಕೊರೋನಾವೈರಸ್ ಗೆದ್ದುಬಂದ ಮಹಿಳೆಯ ನೋವು!

ಕೊರೋನಾ ವೈರಸ್ ಸೋಂಕು ಜಗತ್ತನ್ನು ಮಹಾಮಾರಿಯಂತೆ ಕಾಡುತ್ತಿದೆ. ಇದಕ್ಕೆ ಸದ್ಯ ಭಯಪಡದವರೇ ಇಲ್ಲ ಎಂಬಂತಾಗಿದೆ. ಕೊರೋನಾ ಸೋಂಕಿತ ವ್ಯಕ್ತಿ ಯಾರು, ಅವರಿಂದ ಸೋಂಕುರಹಿತ ವ್ಯಕ್ತಿಗಳಿಗೆ ಪಸರಿಸಿದರೆ ಏನಾಗುತ್ತದೆ ಎಂಬ ಆತಂಕದಲ್ಲಿ ಎಲ್ಲರೂ ಇದ್ದಾರೆ.
ಕೋವಿಡ್-19 ರೋಗಿಗಳನ್ನು ಕಳಂಕಿತರಂತೆ ಕಾಣಬೇಡಿ: ಕೊರೋನಾವೈರಸ್ ಗೆದ್ದುಬಂದ ಮಹಿಳೆಯ ನೋವು!

ಕೊರೋನಾ ವೈರಸ್ ಸೋಂಕು ಜಗತ್ತನ್ನು ಮಹಾಮಾರಿಯಂತೆ ಕಾಡುತ್ತಿದೆ. ಇದಕ್ಕೆ ಸದ್ಯ ಭಯಪಡದವರೇ ಇಲ್ಲ ಎಂಬಂತಾಗಿದೆ. ಕೊರೋನಾ ಸೋಂಕಿತ ವ್ಯಕ್ತಿ ಯಾರು, ಅವರಿಂದ ಸೋಂಕುರಹಿತ ವ್ಯಕ್ತಿಗಳಿಗೆ ಪಸರಿಸಿದರೆ ಏನಾಗುತ್ತದೆ ಎಂಬ ಆತಂಕದಲ್ಲಿ ಎಲ್ಲರೂ ಇದ್ದಾರೆ.

ಇಂತವರಿಗೆ ಧೈರ್ಯ ತುಂಬಲೆಂದೇ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಗೆದ್ದು ಬಂದ ಮಹಿಳೆ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. ಅವರ ಮಾತುಗಳನ್ನು ಕೇಳಿದರೆ ಖಂಡಿತಾ ಸ್ವಲ್ಪ ಮಟ್ಟಿಗೆ ಧೈರ್ಯ ಬರಬಹುದು. ಅವರು ಮಾತನಾಡಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅವರು ಏನು ಹೇಳಿದ್ದಾರೆ?: ಮೊದಲಿಗೆ ಜನರಿಗೆ ಆರೋಗ್ಯ ವ್ಯವಸ್ಥೆ ಮೇಲೆ ನಂಬಿಕೆ ಬೇಕು. ಆರೋಗ್ಯ ಮತ್ತು ನಾಗರಿಕ ಸೇವೆ ಅಧಿಕಾರಿಗಳು ಹೇಳುವ ಮಾತುಗಳನ್ನು ಜನರು ಕೇಳಬೇಕು.ಕೊರೋನಾ ವೈರಸ್ ರೋಗಿಯನ್ನು ಅಸ್ಪ್ರಶ್ಯರಂತೆ ಕಾಣಬೇಡಿ. ಕೆಲವು ವಿದ್ಯಾವಂತರೇ ಹೀಗೆ ಮಾಡುತ್ತಿರುವುದನ್ನು ನೋಡಿದ್ದೇನೆ.

10 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಾನು ಗುಣಮುಖಳಾಗಿ ಕಳೆದ ಮಾರ್ಚ್ 24ರಂದು ಬಿಡುಗಡೆಹೊಂದಿದೆನು. ಕೊನೆಯ ಹಂತದ ಚಿಕಿತ್ಸೆಯನ್ನು ನಾನು ಮುಗಿಸಿದ್ದು ಮೊನ್ನೆ 28ರಂದು.ವೈದ್ಯರು ಹೇಳಿದಂತೆ ನನ್ನ ಆರೋಗ್ಯದ ಮೇಲೆ ಏಪ್ರಿಲ್ 3ರವರೆಗೆ ನಿಗಾ ವಹಿಸಬೇಕು. ನಾನು ಗುಣಮುಖಳಾಗಿದ್ದು ವೈದ್ಯರಿಗೆ ಖುಷಿ ತಂದಿದೆ.

ನಾನು ಔರಂಗಾಬಾದ್ ನ ಹೊಟೇಲ್ ಮ್ಯಾನೆಜ್ ಮೆಂಟ್ ನಲ್ಲಿ ಸಿಬ್ಬಂದಿಯಾಗಿದ್ದೇನೆ. ನಾನು ಮತ್ತು ನನ್ನ ಸೊಸೆ ರಷ್ಯಾಕ್ಕೆ ಮಹಿಳಾ ತಂಡದ ಜೊತೆ ಹೋಗಿದ್ದೆವು. ಅಲ್ಲಿ ಚೆನ್ನಾಗಿ ವಿನೋದ ಮಾಡಿಕೊಂಡು ಬಂದಿದ್ದೆವು. ಆಗ ಚೀನಾದಲ್ಲಿ ಕೊರೋನಾ ಕಾಣಿಸಿಕೊಂಡು ತಾಂಡವವಾಡುತ್ತಿತ್ತು. ಜಗತ್ತಿನ ಕೆಲವು ರಾಷ್ಟ್ರಗಳಿಗೂ ಪಸರಿಸಿತ್ತು. ಮಾರ್ಚ್ 3ಕ್ಕೆ ಔರಂಗಾಬಾದ್ ಗೆ ವಾಪಸ್ಸಾದೆವು. ಮರುದಿನ ನಾನು ಕೆಲಸಕ್ಕೆ ಹೋದೆನು. ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದ್ದೆನು.

ಮಾರ್ಚ್ 7ರವರೆಗೂ ಚೆನ್ನಾಗಿದ್ದೆ. ಮರುದಿನ ಮೂಗಿನಲ್ಲಿ ನೀರು ಸುರಿಯುವುದು, ಮೈ ನಡುಕ ಆರಂಭವಾಯಿತು. ಸಿನರೆಸ್ಟ್ ಮಾತ್ರೆ ತೆಗೆದುಕೊಂಡೆ ಕಡಿಮೆಯಾಗಲಿಲ್ಲ, ಕೊನೆಗೆ ವೈದ್ಯರಿಗೆ ತೋರಿಸಿದೆ. ಆಂಟಿಬಯಾಟಿಕ್ಸ್ ಕೊಟ್ಟರು. ಔಷಧ ತೆಗೆದುಕೊಂಡು ಕೆಲಸಕ್ಕೆ ಹೋದೆ. ಮಾರ್ಚ್ 11ರಂದು ಮತ್ತಷ್ಟು ದೇಹದಲ್ಲಿ ಬಳಲಿಕೆ ಕಂಡು ಕೆಲಸದಿಂದ ವಾಪಸ್ಸಾದೆ. ಮುಂಬೈ ಆಸ್ಪತ್ರೆಯಲ್ಲಿ ಕೆಲಸದಲ್ಲಿರುವ ನನ್ನ ಮಗ ಸಂಪೂರ್ಣ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೇಳಿದ. ಮಾರ್ಚ್ 12ರಂದು ಉಸಿರಾಟ ತೊಂದರೆ ಕಾಣಿಸಿಕೊಂಡಿತು. ಮರುದಿನ ನನ್ನ ಹೃದಯ ಪರೀಕ್ಷೆ ಮಾಡಿಸಿಕೊಳ್ಳಲು ಹೋದೆ, ಅಲ್ಲಿ ಹೆಚ್ 1ಎನ್ 1 ಮತ್ತು ಕೋವಿಡ್ 19 ಪರೀಕ್ಷೆ ಮಾಡಿದರು.

ಹೆಚ್ 1 ಎನ್ 1 ಪರೀಕ್ಷೆಯಲ್ಲಿ ನೆಗೆಟಿವ್ ಬಂದು ಕೋವಿಡ್ 19ನಲ್ಲಿ ಪಾಸಿಟಿವ್ ಬಂತು. ಅದೇ ದಿನ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ದಾಖಲಾದೆ. ನನ್ನ ಕಾಲೇಜು, ವಿದ್ಯಾರ್ಥಿಗಳು, ಸಹೋದ್ಯೋಗಿಗಳು, 85 ವರ್ಷದ ತಾಯಿ, ಅತ್ತೆ ಬಗ್ಗೆ ಗಾಬರಿಯಾಯಿತು, ಅವರಿಗೂ ಕೊರೋನಾ ಬಂದಿರಬಹುದೇ ಎಂದು ಸಂಶಯವಾಯಿತು. ನನ್ನ ಕಾಲೇಜಿಗೆ ಕೂಡಲೇ ವಿಷಯ ತಿಳಿಸಿದೆ. ನನ್ನ ಜೊತೆ ಸಂಪರ್ಕದಲ್ಲಿದ್ದ ಎಲ್ಲರಿಗೂ ನಿರ್ಬಂಧನ ವಿಧಿಸಲಾಯಿತು. ಎಲ್ಲರ ಪರೀಕ್ಷೆ ಮಾಡಲಾಗಿದ್ದು, ಎಲ್ಲರಲ್ಲಿಯೂ ನೆಗೆಟಿವ್ ಬಂದಿದೆ.

ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್ ಗಳು, ಸಿಬ್ಬಂದಿ ನನ್ನನ್ನು ಕಾಳಜಿಯಿಂದ ನೋಡಿಕೊಂಡರು. ನನಗೆ ಕೊರೋನಾ ಇದೆ ಎಂದು ಗೊತ್ತಾದ ಬಳಿಕ ಜನರು ನನ್ನನ್ನು ನೋಡುತ್ತಿದ್ದ ರೀತಿ ಬದಲಾಗಿದ್ದು ನನ್ನ ಗಮನಕ್ಕೆ ಬಂತು. ನನ್ನ ಹತ್ತಿರದಲ್ಲಿದ್ದವರು ದೂರ ಸರಿಯಲು ಆರಂಭಿಸಿದರು. ನನ್ನ ಇಬ್ಬರು ಮಕ್ಕಳು ನನ್ನನ್ನು ನೋಡಿಕೊಂಡರು. ನನ್ನೊಳಗಿದ್ದ ನಂಬಿಕೆ ಮತ್ತು ಧೈರ್ಯ ಮತ್ತು ಪರಿಚಯವಿಲ್ಲದವರ ಹಾರೈಕೆ ಇಂದು ನನ್ನನ್ನು ಗುಣಮುಖನನ್ನಾಗಿಸಿದೆ.

ಇಂದು ನಾನು ಮನೆಗೆ ವಾಪಸ್ಸಾಗಿದ್ದೇನೆ. ನನ್ನ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಅವರು ಕೂಡ ಚಿಕಿತ್ಸೆ ಕೊಟ್ಟುಬಿಟ್ಟು ಸುಮ್ಮನಾಗಿಲ್ಲ. ಈ ಕೊರೋನಾ ಮಹಾಮಾರಿ ವಿರುದ್ಧ ನಾವು ಒಟ್ಟಾಗಿ ನಿರಂತರವಾಗಿ ಹೋರಾಡಬೇಕಿದೆ. ಇದು ಒಬ್ಬರಿಂದಲೇ ಆಗುವುದಲ್ಲ. ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com