ಕೊರೋನಾ ವೈರಸ್: ಕೋವಿಡ್ 19 ಸೋಂಕು ಹೆಚ್ಚಳ ಹಿನ್ನಲೆ, ಕಾಶ್ಮೀರದ 20 ಗ್ರಾಮಗಳು ರೆಡ್ ಜೋನ್ ಆಗಿ ಘೋಷಣೆ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಾಶ್ಮೀರದ ಸುಮಾರು 20 ಗ್ರಾಮಗಳನ್ನು ರೆಡ್ ಜೋನ್ ಆಗಿ ಘೋಷಣೆ ಮಾಡಲಾಗಿದೆ.
ಕಾಶ್ಮೀರದಲ್ಲಿ ರೆಡ್ ಜೋನ್
ಕಾಶ್ಮೀರದಲ್ಲಿ ರೆಡ್ ಜೋನ್

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಾಶ್ಮೀರದ ಸುಮಾರು 20 ಗ್ರಾಮಗಳನ್ನು ರೆಡ್ ಜೋನ್ ಆಗಿ ಘೋಷಣೆ ಮಾಡಲಾಗಿದೆ.

ಬಂಡಿಪೋರಾ ಜಿಲ್ಲೆಯ ಪಂಡಿ ಮೊಹಲಾ ಹಾಜಿನ್, ಚಂದರ್‌ಗೀರ್ ಹಾಜಿನ್, ಪುಲ್ವಾಮಾ ಜಿಲ್ಲೆಯ ಬಟಗುಂಡ್ ಹಾಜಿನ್, ಗುಡೂರ, ಚಂದಗಂ, ಪಿಂಗ್ಲೆನಾ, ಪರಿಗಂ, ಅಭಮಾ, ಸಾಂಗರ್‌ವಾನಿ, ಖೈಗಮ್ ಮತ್ತು ಗ್ಯಾಂಡರ್‌ ಬಾಲ್‌ ಜಿಲ್ಲೆಯ ವಾಸ್ಕುರಾ, ಶೋಪಿಯಾನ್ ಜಿಲ್ಲೆಯ ಸೆಡ್ಯೂ, ಮತ್ತು  ರಾಮನಗ್ರಿ ಸೇರಿದಂತೆ ಒಟ್ಟು 20 ಗ್ರಾಮಗಳನ್ನು ರೆಡ್ ಜೋನ್ ಎಂದು ಘೋಷಣೆ ಮಾಡಿ ಸಂಪೂರ್ಣ ದಿಗ್ಬಂಧನ ಹೇರಲಾಗಿದೆ.

ಇದು ಮಾತ್ರವಲ್ಲದೇ ಶ್ರೀನಗರದ ಮೆಹಜೂರ್ ನಗರ, ನಾಟಿಪೋರಾ, ಲಾಲ್ ಬಜಾರ್, ಈದ್ಗಾ ಮತ್ತು ಶಾಲ್ಟೆಂಗ್ ಮತ್ತು ಬದಗಾಮ್ ಜಿಲ್ಲೆಯ ಚಡೂರಾ ಗ್ರಾಮವನ್ನೂ ಕೂಡ ರೆಡ್ ಜೋನ್ ಎಂದು ಘೋಷಣೆ ಮಾಡಲಾಗಿದೆ. 

ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರೆಗೂ 49 ಮಂದಿ ವೈರಸ್ ಸೋಂಕಿಗೆ ತುತ್ತಾಗಿದ್ದು, ಈ ಪೈಕಿ ಇಂದು ಒಂದೇ ದಿನ 11 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಜಮ್ಮುವಿನಲ್ಲಿ ಮೂರು, ಕಾಶ್ಮೀರದಲ್ಲಿ 8 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com