ಮಹಾಮಾರಿ ಕೊರೋನಾಗೆ ತೆಲಂಗಾಣದ 6 ಮಂದಿ ಬಲಿ: ನಿಜಾಮುದ್ದೀನ್ ಸುತ್ತಮುತ್ತ ಪೊಲೀಸರ ತೀವ್ರ ನಿಗಾ, ಐಸೋಲೇಷನ್'ನಲ್ಲಿ 200 ಮಂದಿ

ದೆಹಲಿಯ ನಿಜಾಮುದ್ದೀನ್ ಪ್ರದೇಶದ ಅಲೇಮಿ ಮರ್ಕಜ್ ಬಂಗ್ಲೇವಾಲಿ ಮಸೀದಿಯಲ್ಲಿ ಮಾ.13-15ರವರೆ ಗೆ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ 10,000 ಮಂದಿ ಭಾಗಿಯಾಗಿದ್ದು, ಇದೀಗ ಅಲ್ಲಿಗೆ ಹೋಗಿ ಬಂದಿದ್ದ ತೆಲಂಗಾಣ ಮೂಲಕ 6 ಮಂದಿ ಮಹಾಮಾರಿ ಕೊರೋನಾ ವೈರಸ್ ನಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ನಿಜಾಮುದ್ದೀನ್ ಸುತ್ತಮತ್ತ ಪೊಲೀಸರು ತೀವ್ರ ನಿಗಾವಹಿಸಿದ್ದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೆಹಲಿಯ ನಿಜಾಮುದ್ದೀನ್ ಪ್ರದೇಶದ ಅಲೇಮಿ ಮರ್ಕಜ್ ಬಂಗ್ಲೇವಾಲಿ ಮಸೀದಿಯಲ್ಲಿ ಮಾ.13-15ರವರೆ ಗೆ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ 10,000 ಮಂದಿ ಭಾಗಿಯಾಗಿದ್ದು, ಇದೀಗ ಅಲ್ಲಿಗೆ ಹೋಗಿ ಬಂದಿದ್ದ ತೆಲಂಗಾಣ ಮೂಲಕ 6 ಮಂದಿ ಮಹಾಮಾರಿ ಕೊರೋನಾ ವೈರಸ್ ನಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ನಿಜಾಮುದ್ದೀನ್ ಸುತ್ತಮತ್ತ ಪೊಲೀಸರು ತೀವ್ರ ನಿಗಾವಹಿಸಿದ್ದು, ಈಗಾಗಲೇ 200 ಮಂದಿಯನ್ನು ಐಸೋಲೇಷನ್ ನಲ್ಲಿರಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಟ್ಯಾಬ್ಲೈಟ್ ಜಮಾತ್ ಪ್ರದೇಶವನ್ನು ಮರ್ಕಜ್ ಎಂದೂ ಕೂಡ ಕರೆಯಲಾಗುತ್ತಿದ್ದು, ಇಲ್ಲಿ ಮಕ್ಕಳಿಗೆ ಇಸ್ಲಾಂ ಪಾಠ ಹೇಳಿಕೊಡುವ ಕಾರ್ಯಗಳು ನಡೆಯುತ್ತವೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತೆಲಂಗಾಣದ 6 ಮಂದಿ ವೈರಸ್ ನಿಂದ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ದಕ್ಷಿಣ ದೆಹಲಿಯಲ್ಲಿರುವ ನಿಜಾಮುದ್ದೀನ್ ಪ್ರದೇಶದ ಸುತ್ತಮುತ್ತ ಪೊಲೀಸರು ತೀವ್ರನಿಗಾವಹಿಸಿದ್ದಾರೆ. ಅಲ್ಲದೆ, ಈ ಪ್ರದೇಶದಲ್ಲಿದ್ದ 200 ಮಂದಿಯನ್ನು ಐಸೋಲೇಷನ್ ನಲ್ಲಿರಿಸಲಾಗಿದ್ದು, ಎಲ್ಲರನ್ನೂ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದೀಗ ಎಲ್ಲರನ್ನೂ ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ. 

ಪೊಲೀಸರು  ಮಾಹಿತಿ ನೀಡಿರುವ ಪ್ರಕಾರ ಇದೀಗ ಮಸೀದಿಯ ಸುತ್ತಮುತ್ತ ನೆಲೆಸಿದ್ದ 1,000ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ ನಲ್ಲಿರಿಸಲಾಗಿದ್ದು, ಎಲ್ಲರ  ಮೇಲೂ ನಿಗಾವಹಿಸಲಾಗಿದೆ ಎಂದು ಎನ್ನಲಾಗುತ್ತಿದೆ. 

ಪ್ರಸ್ತುತ ಪತ್ತೆಯಾಗಿರುವ 25 ವೈರಸ್ ಪ್ರಕರಣಗಳಲ್ಲಿನ 18 ಮಂದಿ ನಿಜಾಮುದ್ದೀನ್ ಮಸೀದಿಗೆ ಸೇರಿದವರಾಗಿದ್ದು, ಇವರು ಈಗಾಗಲೇ ಈ ಹಿಂದೆ ಕೂಡ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. 18 ಮಂದಿಯಲ್ಲಿ ಯಾರೊಬ್ಬರೂ ದೆಹಲಿ ಮೂಲದವರಾಗಿಲ್ಲ. ಇದರಲ್ಲಿ ಇಬ್ಬರು ವಿದೇಶಿ ಪ್ರಜೆಗಳಾಗಿದ್ದು, 16 ಮಂದಿ ಕೋಲ್ಕತಾ, ಕಾಶ್ಮೀರ, ಅಸ್ಸಾಂ, ತಮಿಳುನಾಡು ಹಾಗೂ ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಇನ್ನುಳಿದ 7 ಮಂದಿ ದೆಹಲಿ ಮೂಲದವರಾಗಿದ್ದಾರೆ. ಪ್ರಸ್ತುತ ವೈರಸ್'ಗೆ ಬಲಿಯಾಗಿರುವ 6 ಮಂದಿಯ ಪೈಕಿ ನಾಲ್ವರು ಸೋಂಕಿತರೊಂದಿಗೆ ನೇರ ಹಾಗೂ ಪರೋಕ್ಷ ಸಂಪರ್ಕಗಳನ್ನು ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಮತ್ತಿಬ್ಬರು ವಿದೇಶದಿಂದ ಪ್ರಯಾಣ ಮಾಡಿದ ಹಿಸ್ಟರಿ ಹೊಂದಿದ್ದವರಾಗಿದ್ದಾರೆ. ಈ ಬಗ್ಗೆ ಮತ್ತಷ್ಟು ತನಿಖೆ ನಡೆಸುವ ಅಗತ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈಗಾಗಲೇ 18 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಎಲ್ಲರಲ್ಲೂ ವೈರಸ್ ದೃಢಪಟ್ಟಿದೆ. ಇವರಲ್ಲಿ 9 ಮಂದಿ ಅಂಡಾಮಾನ್ ಹಾಗೂ ನಿಕೋಬಾರ್ ನಿಂದ ಬಂದಿದ್ದಾರೆಂದು ವರದಿಗಳು ತಿಳಿಸಿವೆ. 

ಈ ನಡುವೆ ವೈರಸ್ ನಿಂದ ಮಹಾರಾಷ್ಟ್ರ, ಗುಜರಾತ್, ಪಶ್ಚಿಮ ಬಂಗಾಳ ಮತ್ತು ಪಂಜಾಬ್ ನಲ್ಲಿ ಕೊರೋನಾಕ್ಕೆ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಇನ್ನು ಇತ್ತೀಚೆಗೆ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಸಾವನ್ನಪ್ಪಿದ್ದ ಇಬ್ಬರು ಕೊರೋನಾದಿಂದಾಗಿಯೇ ಸಾವನ್ನಪ್ಪಿರುವುದು ಸೋಮವಾರ ಖಚಿತವಾಗಿದೆ. 

ಇದರಂತೆ ನಿನ್ನೆ ಒಂದೇ ದಿನ ದೇಶದಲ್ಲಿ 227ಕ್ಕೂ ಹೆಚ್ಚು ಹೊಸ ಸೋಂಕಿತರ ಪ್ರಕರಣ ಬೆಳಕಿಗೆ ಬಂದಿದೆ. ಈ ಪೈಕಿ ಹೆಚ್ಚೆಂದರೆ ಮಹಾರಾಷ್ಟ್ರ 50, ಕೇರಳ 32, ದೆಹಲಿ 25, ಉತ್ತರಪ್ರದೇಶ 24, ತೆಲಂಗಾಣ 11, ಜಮ್ಮು ಮತ್ತು ಕಾಶ್ಮೀರ 11, ಕರ್ನಾಟಕದಲ್ಲಿ 7 ಪ್ರಕರಣದೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1251ಕ್ಕೆ ಏರಿಕೆಯಾಗಿದೆ. ಈ ವರೆಗೆ ಮಹಾರಾಷ್ಟ್ರದಲ್ಲಿ 253, ಕೇರಳದಲ್ಲಿ 213, ಕರ್ನಾಟಕದಲ್ಲಿ 88 ಪ್ರಕರಣಗಳು ದಾಖಲಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com