ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 25 ಸಾವಿರ ರೂ. ದೇಣಿಗೆ ನೀಡಿದ ಪ್ರಧಾನಿ ಮೋದಿ ತಾಯಿ ಹೀರಾಬೆನ್

ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ವಿರುದ್ಧ ಭಾರತದ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರೂ ಕೂಡ ಕೈ ಜೋಡಿಸಿದ್ದು, ಪ್ರಧಾನಿ ನಿಧಿಗೆ ತಮ್ಮ ಉಳಿತಾಯದ 25 ಸಾವಿರ ರೂಗಳನ್ನು  ದೇಣಿಗೆ ನೀಡಿದ್ದಾರೆ.
ಪ್ರಧಾನಿ ಮೋದಿ ತಾಯಿ ಹೀರಾಬೆನ್
ಪ್ರಧಾನಿ ಮೋದಿ ತಾಯಿ ಹೀರಾಬೆನ್

ನವದೆಹಲಿ: ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ವಿರುದ್ಧ ಭಾರತದ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರೂ ಕೂಡ ಕೈ ಜೋಡಿಸಿದ್ದು, ಪ್ರಧಾನಿ ನಿಧಿಗೆ ತಮ್ಮ ಉಳಿತಾಯದ 25 ಸಾವಿರ ರೂಗಳನ್ನು  ದೇಣಿಗೆ ನೀಡಿದ್ದಾರೆ.

ಕೋವಿಡ್-19 ಭೀತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರವು ಶನಿವಾರ ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿಯನ್ನು ರಚಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು, ಕೇರ್ಸ್ ಗೆ ಉದಾರವಾಗಿ ದೇಣಿಗೆ ನೀಡಬೇಕೆಂದು ಜನತೆಗೆ ಮನವಿ  ಮಾಡಿಕೊಂಡಿದ್ದರು. ಪ್ರಧಾನಿ ಮೋದಿ ಮನವಿಗೆ ಸ್ಪಂದಿಸಿರುವ ದೇಶದ ಜನತೆ ಕೋಟಿ ಕೋಟಿ ದೇಣಿಗೆ ನೀಡುತ್ತಿದ್ದಾರೆ. ಉದ್ಯಮಿಗಳು, ಸಿನಿ ತಾರೆಯರು, ಕ್ರಿಕೆಟಿಗರು, ಕ್ರೀಡಾಕಾರರು, ಸಾಹಿತಿಗಳು, ಶಾಸಕರು, ಸಂಸದರು, ಐಎಎಸ್ ಅಧಿಕಾರಿಗಳು, ಐಪಿಎಸ್ ಅಧಿಕಾರಿಗಳು, ಸರ್ಕಾರಿ  ನೌಕರರು ಸೇರಿದಂತೆ ದೇಶದ ವಿವಿಧ ವರ್ಗದ ಗಣ್ಯರು ಸಮರೋಪಾದಿಯಲ್ಲಿ ದೇಣಿಗೆ ನೀಡುತ್ತಿದ್ದಾರೆ. 

ಇಂದು ಬೆಳಗ್ಗೆಯಷ್ಟೇ ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರು ಕೂಡ ಇಂದು ಪಿಎಂ-ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದು, ಮಾತ್ರವಲ್ಲದೇ ಬೌದ್ಧ ಧರ್ಮದ ಅನುಯಾಯಿಗಳಿಂದ ದೇಣಿಗೆ ಸಂಗ್ರಹಿಸಿ ಕೊಡುವ ಭರವಸೆ ನೀಡಿದರು. ಇನ್ನು ಖ್ಯಾತ ಪೇಮೆಂಟ್ ಸಂಸ್ಥೆಗಳಾದ ಪೇಟಿಎಂ,  ಫೋನ್ ಪೇ ಸಂಸ್ಥೆಗಳೂ ಕೂಡ ತಮ್ಮ ವಹಿವಾಟಿನ ಮೂಲಕ ದೇಣಿಗೆ ಸಂಗ್ರಹ ಮಾಡುತ್ತಿವೆ. ಟಾಟಾ ಸನ್ಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅದಾನಿ ಗ್ರೂಪ್‍ನಂತಹ ಕಾರ್ಪೊರೇಟ್‍  ಸಂಸ್ಥೆಗಳು ಕೋಟಿಗಳ ಲೆಕ್ಕದಲ್ಲಿ ದೇಣಿಗೆ ನೀಡಿದ್ದಾರೆ. ಇದೀಗ ಈ ಪಟ್ಟಿಗೆ ಪ್ರಧಾನಿ ಮೋದಿ ಅವರ  ತಾಯಿ ಕೂಡ ಸೇರ್ಪಡೆಯಾಗಿದ್ದಾರೆ.

ಈ ಹಿಂದೆ ಇದೇ ಹೀರಾಬೆನ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ್ದ ಪ್ರವಾಹ ಪರಿಸ್ಥಿತಿ ವೇಳೆ 5 ಸಾವಿರ ದೇಣಿಗೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com