ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್

ಕೋವಿಡ್ ಭೀತಿ: ಎಸಿ ಬಳಕೆ ನಿಲ್ಲಿಸಿದ ದೆಹಲಿ ಹೈಕೋರ್ಟ್

ಹೈಕೋರ್ಟ್ ಕಟ್ಟಡದಲ್ಲಿನ ಹವಾನಿಯಂತ್ರಣಗಳನ್ನು (ಎಸಿ) ಬಳಸದಿರಲು ದೆಹಲಿ ಹೈಕೋರ್ಟ್ ನಿರ್ಧರಿಸಿದೆ. ಕೊರೋನಾವೈರಸ್  ಹರಡುವಿಕೆಗೆ ಸಂಬಂಧಿಸಿದಂತೆ ಹವಾನಿಯಂತ್ರಣ ಬಳಕೆ ಸಮಸ್ಯೆಯಾಗಲಿದೆ ಎನ್ನಲು ಯಾವುದೇ ಶಾಸ್ತ್ರೀಯ ಆಧಾರವಿಲ್ಲ ಎಂದೂ ಹೇಳಿದೆ

ನವದೆಹಲಿ: ಹೈಕೋರ್ಟ್ ಕಟ್ಟಡದಲ್ಲಿನ ಹವಾನಿಯಂತ್ರಣಗಳನ್ನು (ಎಸಿ) ಬಳಸದಿರಲು ದೆಹಲಿ ಹೈಕೋರ್ಟ್ ನಿರ್ಧರಿಸಿದೆ. ಕೊರೋನಾವೈರಸ್  ಹರಡುವಿಕೆಗೆ ಸಂಬಂಧಿಸಿದಂತೆ ಹವಾನಿಯಂತ್ರಣ ಬಳಕೆ ಸಮಸ್ಯೆಯಾಗಲಿದೆ ಎನ್ನಲು ಯಾವುದೇ ಶಾಸ್ತ್ರೀಯ ಆಧಾರವಿಲ್ಲ ಎಂದೂ ಹೇಳಿದೆ

ಈ ಮಧ್ಯೆ ಕೋರ್ಟ್ ನಲ್ಲಿ  ಸರಿಯಾದ ವಾತಾಯನಕ್ಕಾಗಿ ಇತರ ಕ್ರಮಗಳನ್ನು  ಬಳಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಸಿ.ಹರಿಶಂಕರ್ ಅವರ ನ್ಯಾಯಪೀಠ ಹೇಳಿದೆ. ವಿಶೇಷ ನ್ಯಾಯಾಧೀಶರ ಸಮಿತಿಯು ಸಮಸ್ಯೆಗಳನ್ನು ಪರಿಶೀಲಿಸಿದ್ದು ಗಂಭೀರ ಕಳವ ವ್ಯಕ್ತಪಡಿಸಿದೆ.  ಎಸಿಗಳ ಬಳಕೆಗೆ ಶಾಶ್ವತ ಪರಿಹಾರ ಹಾಗೂ ಅಗತ್ಯವಿರುವ ಇತರೆ ಸಾಧನಗಳ ಪರಿಗಣನೆಗೆ ಆಗ್ರಹಿಸಿದೆ.

ದೆಹಲಿ ಹೈಕೋರ್ಟ್ ಕಟ್ಟಡ ಮತ್ತು ಇತರ ಅಧೀನ ಕೋರ್ಟ್ ಸೇರಿದಂತೆ ಹವಾನಿಯಂತ್ರಿತ ಕಟ್ಟಡಗಳಲ್ಲಿಕೋವಿಡ್ ಹರಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಾರ್ ಕೌನ್ಸಿಲ್ ಆಫ್ ದೆಹಲಿ ಅಧ್ಯಕ್ಷ ವಕೀಲ ಕೆ.ಸಿ.ಮಿತ್ತಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡುವಾಗ ಹೈಕೋರ್ಟ್ ಈ ಆದೇಶಗಳನ್ನು ಅಂಗೀಕರಿಸಿತು.  ಕೇಂದ್ರ ಲೋಕೋಪಯೋಗಿ ಇಲಾಖೆಯು ಅರ್ಜಿಯ ಬಗ್ಗೆ ಸ್ಥಿತಿ ವರದಿಯನ್ನು ಸಲ್ಲಿಸಿದೆ ಮತ್ತು ಕೇಂದ್ರ ಸರ್ಕಾರವು ಈಗಾಗಲೇ ಎಸಿಗಳ ಬಳಕೆಗಾಗಿ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ..

Related Stories

No stories found.

Advertisement

X
Kannada Prabha
www.kannadaprabha.com