ಕೋವಿಡ್-19 ಡ್ಯೂಟಿ ಮುಗಿಸಿ 20 ದಿನಗಳ ನಂತರ ಮನೆಗೆ ವಾಪಸ್ಸಾದ ವೈದ್ಯೆಗೆ ಅಭೂತಪೂರ್ವ ಸ್ವಾಗತ: ಮೋದಿ ಮೆಚ್ಚುಗೆ

ಕೋವಿಡ್-19 ಡ್ಯೂಟಿ ಮುಗಿಸಿ 20 ದಿನಗಳ ನಂತರ ಮನೆಗೆ ವಾಪಸ್ಸಾದ ವೈದ್ಯೆಗೆ ಕುಟುಂಬಸ್ಥರು ಹಾಗೂ ನೆರೆಹೊರೆಯವರಿಂದ ಅಭೂತಪೂರ್ವ ಸ್ವಾಗತ  ನೀಡಲಾಗಿದೆ. ಮನಕಲುಕುವ ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ವೈದ್ಯೆಗೆ ಸ್ವಾಗತ, ಪ್ರಧಾನಿ ಮೋದಿ ಚಿತ್ರ
ವೈದ್ಯೆಗೆ ಸ್ವಾಗತ, ಪ್ರಧಾನಿ ಮೋದಿ ಚಿತ್ರ

ನವದೆಹಲಿ: ಕೋವಿಡ್-19 ಡ್ಯೂಟಿ ಮುಗಿಸಿ 20 ದಿನಗಳ ನಂತರ ಮನೆಗೆ ವಾಪಸ್ಸಾದ ವೈದ್ಯೆಗೆ ಕುಟುಂಬಸ್ಥರು ಹಾಗೂ ನೆರೆಹೊರೆಯವರಿಂದ ಅಭೂತಪೂರ್ವ ಸ್ವಾಗತ  ನೀಡಲಾಗಿದೆ. ಮನಕಲುಕುವ ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಕೋವಿಡ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯೆ 20 ದಿನಗಳ ಕಾಲ ಕೆಲಸ ಮಾಡಿ ಮನೆಗೆ ವಾಪಾಸ್ಸಾದ ಬಳಿಕ ಆಕೆಯ ಕುಟುಂಬಸ್ಥರು ಮತ್ತು ನೆರೆಹೊರೆಯವರು ಸ್ವಾಗತಿಸಿರುವ ವಿಡಿಯೋವನ್ನು ಚಂಡೀಗಢ ಬಿಜೆಪಿ ಕಾರ್ಯದರ್ಶಿ ದೀಪಕ್ ಮಲ್ಹೋತ್ರಾ ಟ್ವೀಟ್ ಮಾಡಿದ್ದರು.

ಆ ವಿಡಿಯೋವನ್ನು ಶೇರ್ ಮಾಡಿರುವ ಮೋದಿ, ಇದು ಭಾರತದ ಸ್ಪೂರ್ತಿ, ಕೋವಿಡ್-19 ವಿರುದ್ಧ ಧೈರ್ಯದಿಂದ ಹೋರಾಡುತ್ತೇವೆ. ಈ ನಿಟ್ಟಿನಲ್ಲಿ ಮಂಚೂಣಿಯಲ್ಲಿ ಕೆಲಸ ಮಾಡುವವರ ಬಗ್ಗೆ ನಾವು ಯಾವಾಗಲೂ ಹೆಮ್ಮೆ ಪಡುತ್ತೇವೆ ಎಂದು ಮೋದಿ ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com