ಸದ್ಗುರು ಪೇಂಟಿಂಗ್ 4.14 ಕೋಟಿ ರೂ ಗೆ ಹರಾಜು, ಕೋವಿಡ್ ಪರಿಹಾರ ನಿಧಿಗೆ ಇಶಾ ಫೌಂಡೇಶನ್ ಕೊಡುಗೆ 

ಹೆಸರಾಂತ ಯೋಗಿ ಮತ್ತು ಆದ್ಯಾತ್ಮ ಚಿಂತಕರಾದ ಸದ್ಗುರು (ಜಗ್ಗಿ ವಾಸುದೇವ್) ರಚಿಸಿದ  ಅಮೂರ್ತ ಚಿತ್ರಕಲೆ (ಪೇಂಟಿಂಗ್)ಹರಾಜಾಗಿದ್ದು  4.14 ಕೋಟಿ ರೂ. ಗೆ ಮಾರಾಟವಾಗಿದೆ. "To Live Totally!’ ಎಂಬ ಶೀರ್ಷಿಕೆಯ ಈ ಪೇಂಟಿಂಗ್ 5 x 5 ಅಡಿ ಕ್ಯಾನ್ವಾಸ್‌ ನಲ್ಲಿದ್ದು ಇದರಿಂದ ಗಳಿಸಿದ ಹಣವನ್ನು  ಕೋವಿಡ್ ಸಾಂಕ್ರಾಮಿಕ ಪರಿಹಾರ ಕಾರ್ಯಗಳಿಗೆ ನೀಡುವುದಾಗಿ ತಮಿಳುನಾಡಿನಲ್ಲಿರ
ಸದ್ಗುರು
ಸದ್ಗುರು

ಕೊಯಮತ್ತೂರ್: ಹೆಸರಾಂತ ಯೋಗಿ ಮತ್ತು ಆದ್ಯಾತ್ಮ ಚಿಂತಕರಾದ ಸದ್ಗುರು (ಜಗ್ಗಿ ವಾಸುದೇವ್) ರಚಿಸಿದ  ಅಮೂರ್ತ ಚಿತ್ರಕಲೆ (ಪೇಂಟಿಂಗ್)ಹರಾಜಾಗಿದ್ದು  4.14 ಕೋಟಿ ರೂ. ಗೆ ಮಾರಾಟವಾಗಿದೆ. "To Live Totally!’ ಎಂಬ ಶೀರ್ಷಿಕೆಯ ಈ ಪೇಂಟಿಂಗ್ 5 x 5 ಅಡಿ ಕ್ಯಾನ್ವಾಸ್‌ ನಲ್ಲಿದ್ದು ಇದರಿಂದ ಗಳಿಸಿದ ಹಣವನ್ನು  ಕೋವಿಡ್ ಸಾಂಕ್ರಾಮಿಕ ಪರಿಹಾರ ಕಾರ್ಯಗಳಿಗೆ ನೀಡುವುದಾಗಿ ತಮಿಳುನಾಡಿನಲ್ಲಿರುವ ಇಶಾ  ಫೌಂಡೇಶನ್‌ ಹೇಳಿಕೆ ತಿಳಿಸಿದೆ.

ಸದ್ಗುರು ಇತ್ತೀಚೆಗೆ ಸತ್ಸಂಗದಲ್ಲಿ "ವೈರಸ್ ವಿರುದ್ಧದ ಹೋರಾಟಕ್ಕೆ ಗರಿಷ್ಠ ಮೊತ್ತವನ್ನು ದಾನ ಮಾಡುವವರು ನನ್ನ ಈ ಪೇಂಟಿಂಗ್ ಪಡೆಯಲಿದ್ದಾರೆ" ಎಂದು ಘೋಷಿಸಿದ್ದರು ಅಲ್ಲದೆ ಇದೇ ಪೇಂಟಿಂಗ್ ನ ಕೆಲ ಪ್ರತಿಗಳು ಸಹ ಲಭ್ಯವಿದ್ದು 2 ಲಕ್ಷಕ್ಕೂ ಹೆಚ್ಚು ನಿವಾಸಿಗಳನ್ನು ಹೊಂದಿರುವ ತೋಂಡಮುತೂರ್  ಬ್ಲಾಕ್‌ನ ಹಳ್ಳಿಗಳಿಗೆ ಸಾಂಕ್ರಾಮಿಕ ರೋಗಗಳು ಪ್ರವೇಶಿಸದಂತೆ ತಡೆಯುವ  ನಿಟ್ಟಿನಲ್ಲಿ ಇಶಾ ಫೌಂಡೇಶನ್‌ '#BeattheVirus ಎಂಬ ಅಭಿಯಾನ ಪ್ರಾರಂಭಿಸಿದೆ.

ಇಶಾ ಫೌಂಡೇಶನ್ ಪತ್ರಿಕಾ ಪ್ರಕಟಣೆಯಲ್ಲಿ, ಪ್ರತಿದಿನ ಸುಮಾರು 700 ಇಶಾ ಸ್ವಯಂಸೇವಕರ ಕಾರ್ಯಪಡೆಯು ವಿಕೇಂದ್ರೀಕೃತ ಅಡಿಗೆಮನೆಗಳಲ್ಲಿ ತಯಾರಿಸಿದಊಟವನ್ನು ಜತೆಗೆ ಶಕ್ತಿವರ್ಧಕ ಪಾನೀಯವನ್ನು ಗ್ರಾಮಗಳಿಗೆ ತಲುಪಿಸುತ್ತದೆ ಎಂದು ಹೇಳಿದೆ.

ಇದಲ್ಲದೆ ರಾಮೀಣ ಪ್ರದೇಶಗಳಲ್ಲಿರುವ ಜನರಿಗೆ ಜಾಗ್ರತಿ ಮೂಡಿಸುವ ಸಲುವಾಗಿ ಸದ್ಗುರು ಇಲ್ಲಿ ಪ್ರತಿದಿನ ಸುಮಾರು 700 ಸ್ವಯಂ ಸೇವಕರಿಂದ ಕೊರೊನಾ ಕುರಿತು ಜಾಗೃತಿ, ವೈದ್ಯಕೀಯ ಸೌಲಭ್ಯ, ಸುರಕ್ಷತೆಗಾಗಿ ಮಾಸ್ಕ್, ಗ್ಲೌಸ್ ವಿತರಣೆ  ವ್ಯವಸ್ಥೆಯನ್ನೂ ಮಾಡಿದ್ದಾರೆ. "ಸರ್ಕಾರ ಮತ್ತು ಆಡಳಿತಗಳು ಸಮಾಜದ ಅತ್ಯಂತ ಬಡವರನ್ನು ತಲುಪಲು ಹೆಚ್ಚಿನದನ್ನು ಮಾಡುತ್ತಿದ್ದರೂ, ಇನ್ನೂ ಅನೇಕರು ಕಷ್ಟದಲ್ಲಿ ಸಿಲುಕಿದ್ದಾರೆ. ಯಾರೂ ಹಸಿವಿನಿಂದ ಬಳಲುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ, ”ಎಂದು ಸದ್ಗುರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com