ಉತ್ತರ ಪ್ರದೇಶ: ಮದೆಯಾಗಲು 100 ಕಿ.ಮೀ. ಸೈಕಲ್ ತುಳಿದ ಯುವಕ, ವಧುವಿನೊಂದಿಗೆ ವಾಪಸ್ ಸವಾರಿ!

ಕೊರೋನಾ ಲಾಕ್ ಡೌನ್ ದೇಶಾದ್ಯಂತ ಹಲವು ಸಂಕಷ್ಟಗಳನ್ನು ಸೃಷ್ಟಿಸಿದ್ದು, ಈ ಸಂಕಷ್ಟದ ನಡುವೆಯೇ ಉತ್ತರ ಪ್ರದೇಶದಲ್ಲಿ 23 ವರ್ಷದ ಯುವಕನೊಬ್ಬ ತಾನು 100 ಕಿ.ಮೀ. ಪ್ರಯಾಣಿಸಬೇಕಾದ ಅನಿವಾರ್ಯತೆ ಇದ್ದರೂ ಮದೆ ದಿನಾಂಕ ಬದಲಿಸದೇ ಒಬ್ಬಂಟಿಯಾಗಿ 100 ಕಿ.ಮೀ. ಸೈಕಲ್ ತುಳಿದು ತಾನು ಮದೆವೆಯಾಗಬೇಕಾಗಿರುವ ಹುಡುಗಿಯ ಮನೆ ತಲುಪಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹಮೀರ್ ಪುರ್: ಕೊರೋನಾ ಲಾಕ್ ಡೌನ್ ದೇಶಾದ್ಯಂತ ಹಲವು ಸಂಕಷ್ಟಗಳನ್ನು ಸೃಷ್ಟಿಸಿದ್ದು, ಈ ಸಂಕಷ್ಟದ ನಡುವೆಯೇ ಉತ್ತರ ಪ್ರದೇಶದಲ್ಲಿ 23 ವರ್ಷದ ಯುವಕನೊಬ್ಬ ತಾನು 100 ಕಿ.ಮೀ. ಪ್ರಯಾಣಿಸಬೇಕಾದ ಅನಿವಾರ್ಯತೆ ಇದ್ದರೂ ಮದೆ ದಿನಾಂಕ ಬದಲಿಸದೇ ಒಬ್ಬಂಟಿಯಾಗಿ 100 ಕಿ.ಮೀ. ಸೈಕಲ್ ತುಳಿದು ತಾನು ಮದೆವೆಯಾಗಬೇಕಾಗಿರುವ ಹುಡುಗಿಯ ಮನೆ ತಲುಪಿದ್ದಾನೆ.

ಉತ್ತರ ಪ್ರದೇಶದ ಹಮೀರ್‌ಪುರ್ ಜಿಲ್ಲೆಯ ಪೌಥಿಯಾ ಗ್ರಾಮದ ಕಲ್ಕು ಪ್ರಜಾಪತಿ ಅವರು, ಏಪ್ರಿಲ್ 25 ರಂದು ತಮ್ಮ ಮದುವೆಗೆ ಜಿಲ್ಲಾ ಆಡಳಿತದ ಅನುಮತಿಗಾಗಿ ಕೊನೆಯ ಕ್ಷಣದವರೆಗೂ ಕಾಯುತ್ತಿದ್ದರು. ಆದರೆ ಜಿಲ್ಲಾಡಳಿತ ಅನುಮತಿ ನೀಡದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರನ್ನು ಬಿಟ್ಟು ತಾನು ಒಬ್ಬನೇ ಸೈಕಲ್ ನಲ್ಲಿ ವಧು ರಿಂಕಿ ಇರುವ ನೆರೆಯ ಮಹೊಬ ಜಿಲ್ಲೆಯ ಪುಣಿಯಾ ಗ್ರಾಮಕ್ಕೆ ತೆರಳಲು ನಿರ್ಧರಿಸಿದ್ದಾನೆ. 

ಏಪ್ರಿಲ್ 25ರಂದು ನಾವು ಮದುವೆಯಾಗಲು ಪೊಲೀಸರು ಅನುಮತಿ ನೀಡಲಿಲ್ಲ. ಆದರೆ ನನಗೆ ಬೇರೆ ಆಯ್ಕೆ ಇರಲಿಲ್ಲ. ಒಬ್ಬನೇ ಸೈಕಲ್ ನಲ್ಲಿ ಪುಣಿಯಾ ಗ್ರಾಮಕ್ಕೆ ಹೋಗಿ ಮದುವೆಯಾದೆ ಎಂದು ವೃತ್ತಿಯಲ್ಲಿ ರೈತನಾಗಿರುವ ಪ್ರಜಾಪತಿ ಹೇಳಿದ್ದಾರೆ.

ನಾಲ್ಕು ಐದು ತಿಂಗಳ ಹಿಂದೆಯೇ ಮದುವೆ ದಿನಾಂಕ ನಿಗದಿಯಾಗಿತ್ತು. ವಧುವಿನ ಕಡೆಯವರು ಫೋನ್ ಮೂಲಕ ವರನನ್ನು ಕಳುಹಿಸಿಕೊಡುವಂತೆ ತಿಳಿಸಿದ್ದರು. ಹೀಗಾಗಿ ಪ್ರಜಾಪತಿ ಸೈಕಲ್ ನಲ್ಲಿ ಹೋಗಿ ಮದುವೆಯಾಗಿ ಬಂದಿದ್ದಾರೆ ಎಂದು ಪ್ರಜಾಪತಿ ತಂದೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com