ಕೊವಿಡ್-19: ಕೇರಳದಲ್ಲಿ ಮತ್ತೆ 2 ಪ್ರಕರಣ ಪತ್ತೆ, ಗ್ರೀನ್ ಜೋನ್ ಸ್ಥಾನ ಕಳೆದುಕೊಂಡ ವಯನಾಡು

ಕೇರಳದಲ್ಲಿ ಶನಿವಾರ ಮತ್ತೆ ಇಬ್ಬರಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಈ ಪೈಕಿ ಒಂದು ಪ್ರಕರಣ ವಯನಾಡಿನಲ್ಲಿ ಪತ್ತೆಯಾಗಿದ್ದು, ಗ್ರೀನ್ ಜೋನ್ ಸ್ಥಾನ ಕಳೆದುಕೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುವನಂತಪುರಂ: ಕೇರಳದಲ್ಲಿ ಶನಿವಾರ ಮತ್ತೆ ಇಬ್ಬರಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಈ ಪೈಕಿ ಒಂದು ಪ್ರಕರಣ ವಯನಾಡಿನಲ್ಲಿ ಪತ್ತೆಯಾಗಿದ್ದು, ಗ್ರೀನ್ ಜೋನ್ ಸ್ಥಾನ ಕಳೆದುಕೊಂಡಿದೆ.

ವಯನಾಡಿನಲ್ಲಿ ಕಳೆದ ಒಂದು ತಿಂಗಳಿಂದ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗಿರಲಿಲ್ಲ. ಹೀಗಾಗಿ ಈ ಜಿಲ್ಲೆಯನ್ನು ಗ್ರೀನ್ ಜೋನ್ ಪಟ್ಟಿಗೆ ಸೇರಿಸಲಾಗಿತ್ತು. ಆದರೆ ಇಂದು ಒಂದು ಪ್ರಕರಣ ಪತ್ತೆಯಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹೇಳಿದ್ದಾರೆ.

ಮತ್ತೊಂದು ಪ್ರಕರಣ ಕಣ್ಣೂರ್ ನಲ್ಲಿ ಪತ್ತೆಯಾಗಿದ್ದು, ಈ ಜಿಲ್ಲೆ ರಾಜ್ಯದಲ್ಲಿಯೇ ಅತೀ ಹೆಚ್ಚು ಕೊವಿಡ್-19 ಪ್ರಕರಣಗಳನ್ನು ಹೊಂದಿದೆ.

ರಾಜ್ಯದಲ್ಲಿ ಇಂದು ಹೊಸದಾಗಿ ಎರಡು ಪ್ರಕರಣಗಳು ಪಾಸಿಟಿವ್ ಬಂದಿದ್ದು, ಒಂದು ಪ್ರಕರಣ ವಯನಾಡಿನಲ್ಲಿ ಪತ್ತೆಯಾಗಿದೆ. ಹೀಗಾಗಿ ವಯನಾಡು ಜಿಲ್ಲೆಯನ್ನು ಗ್ರೀನ್ ಜೋನ್ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ವಿಜಯನ್ ತಿಳಿಸಿದ್ದಾರೆ.

ಕೇರಳದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 499ಕ್ಕೆ ಏರಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com