ಚಂಡೀಗಢ: ಕಾರನ್ನು ವೇಗವಾಗಿ ಚಲಾಯಿಸಿ ಪೊಲೀಸ್ ನನ್ನು ಎಳೆದೊಯ್ದ ಯುವಕನ ಮೇಲೆ ಬಿತ್ತು ಕೇಸು!

ಚಲಾಯಿಸುತ್ತಿದ್ದ ಕಾರನ್ನು ಸಹಾಯಕ ಸಬ್ ಇನ್ಸ್ ಪೆಕ್ಟರ್ ತಡೆಯಲು ಯತ್ನಿಸಿದಾಗ ತಪ್ಪಿಸಿಕೊಂಡು ಓಡಿಹೋಗಲು ಯತ್ನಿಸಿದ ತಂದೆ-ಮಗನನ್ನು ತಡೆದು ನಿಲ್ಲಿಸಿ ಕೇಸು ದಾಖಲಿಸಿದ ಘಟನೆ ಶನಿವಾರ ಬೆಳಗ್ಗೆ ಜಲಂಧರ್ ಚೆಕ್ ಪೋಸ್ಟ್ ಬಳಿ ನಡೆದಿದೆ.
ಕಾರ್ ಮೇಲೆ ಪೊಲೀಸ್ ಅಧಿಕಾರಿ
ಕಾರ್ ಮೇಲೆ ಪೊಲೀಸ್ ಅಧಿಕಾರಿ

ಚಂಡೀಗಢ:ಚಲಾಯಿಸುತ್ತಿದ್ದ ಕಾರನ್ನು ಸಹಾಯಕ ಸಬ್ ಇನ್ಸ್ ಪೆಕ್ಟರ್ ತಡೆಯಲು ಯತ್ನಿಸಿದಾಗ ತಪ್ಪಿಸಿಕೊಂಡು ಓಡಿಹೋಗಲು ಯತ್ನಿಸಿದ ತಂದೆ-ಮಗನನ್ನು ತಡೆದು ನಿಲ್ಲಿಸಿ ಕೇಸು ದಾಖಲಿಸಿದ ಘಟನೆ ಶನಿವಾರ ಬೆಳಗ್ಗೆ ಜಲಂಧರ್ ಚೆಕ್ ಪೋಸ್ಟ್ ಬಳಿ ನಡೆದಿದೆ.

ಯುವಕ ಅನ್ಮೋಲ್ ಮೆಹ್ಮಿ ಎಟ್ರಿಗಾ ಕಾರನ್ನು ಓಡಿಸುತ್ತಿದ್ದಾಗ ರಸ್ತೆಯಲ್ಲಿ ಪೊಲೀಸರು ಮಿಲ್ಕ್ ಬಾರ್ ಚೌಕ್ ಬಳಿ ತಡೆದರು. ಆಗ ಕಾರನ್ನು ನಿಲ್ಲಿಸದೆ ನಕಾಬಂದಿಯನ್ನು ಮುರಿದು ಮುಂದೆ ಹೋಗಿ ಕರ್ತವ್ಯದಲ್ಲಿದ್ದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಮುಲ್ಕ್ ರಾಜ್ ಅವರ ಮೇಲೆ ಹಾದುಹೋಯಿತು.

ತಕ್ಷಣ ಸಹಾಯಕ ಸಬ್ ಇನ್ಸ್ ಪೆಕ್ಟರ್ ಕಾರಿನ ಮುಂಭಾಗದ ಮೇಲೆ ಹಾರಿದರು. ಸ್ವಲ್ಪ ದೂರದವರೆಗೆ ಕಾರು ಅವರನ್ನು ಎಳೆದುಕೊಂಡು ಹೋಯಿತು. ತಪ್ಪಿಸಿಕೊಂಡು ಓಡಿಹೋಗಲು ಯುವಕ ಯತ್ನಿಸಿ ಅಷ್ಟು ವೇಗವಾಗಿ ಕಾರು ಚಲಾಯಿಸಿದ್ದ. ಆರೋಪಿ ಯುವಕ 20 ವರ್ಷದವನಾಗಿದ್ದು ಸ್ಥಳೀಯ ಕಾಲೇಜಿನ ವಿದ್ಯಾರ್ಥಿ ಎಂದು ಜಲಂದರ್ ಪೊಲೀಸ್ ಆಯುಕ್ತ ಗುರ್ ಪ್ರೀತ್ ಸಿಂಗ್ ಬುಲ್ಲರ್ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 307,353, 186,188 ಮತ್ತು 3ರಡಿ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಮತ್ತು 51 ವಿಪತ್ತು ನಿರ್ವಹಣ ಕಾಯ್ದೆಯಡಿ ವಿದ್ಯಾರ್ಥಿ ಅನ್ಮೊಲ್ ಮತ್ತು ಕಾರಿನ ಮಾಲೀಕ ಆತನ ತಂದೆ ಪರ್ಮಿಂದರ್ ಕುಮಾರ್ ವಿರುದ್ಧ ಕೇಸು ದಾಖಲಿಸಲಾಗಿದೆ. ಇವರು ಜಲಂದರ್ ನ ನಕೋದರ್ ನಿವಾಸಿಗಳಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com