ಗುಜರಾತ್ ಪೊಲೀಸರ ಜೊತೆ ವಲಸೆ ಕಾರ್ಮಿಕರ ಘರ್ಷಣೆ: ಕಲ್ಲು ತೂರಾಟ

ಮನೆಗಳಿಗೆ ವಾಪಸ್ ತೆರಳುತ್ತಿದ್ದ ನೂರಾರು ಕಾರ್ಮಿಕರು ಪೊಲೀಸರೊಂದಿಗೆ ಘರ್ಷಣೆಗೆ ಇಳಿದ ಘಟನೆ ಗುಜರಾತ್ ನ ಸೂರತ್ ಜಿಲ್ಲೆಯಲ್ಲಿ ನಡೆದಿದೆ. 

ತಮ್ಮ ಊರು, ಮನೆಗಳಿಗೆ ವಾಪಸ್ ತೆರಳಲು ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದ ಕಾರ್ಮಿಕರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸ್ ಸಿಬ್ಬಂದಿಗಳು ನೂರಾರು ಜನರನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದ್ದು ಅಶ್ರುವಾಯು ಪ್ರಯೋಗಿಸಿದ್ದಾರೆ. 

ಇದೇ ವೇಳೆ ರಾಜ್ ಕೋಟ್ ನಲ್ಲಿ ಕೂಡ ಕಾರ್ಮಿಕರು ಊರಿಗೆ, ಮನೆಗಳಿಗೆ ತೆರಳಲು ಆಗ್ರಹಿಸಿ ಕೇಶ ಮುಂಡನ ಮಾಡಿಸಿಕೊಂಡು ಪ್ರತಿಭಟನೆ ಮಾಡಿದ್ದಾರೆ. 

ಸೂರತ್ ನ ವರೇಲಿ ಗ್ರಾಮದಲ್ಲಿ ಕಾರ್ಮಿಕರು ಪೊಲೀಸರೊಂದಿಗೆ ಘರ್ಷಣೆಗೆ ಇಳಿದಿದ್ದು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ವಾಪಸ್ ತೆರಳುತ್ತಿದ್ದ ಕಾರ್ಮಿಕರನ್ನು ಕೋಸಂಬಾ ಬಳಿ ತಡೆದು ನಿಲ್ಲಿಸಲಾಗಿದೆ. ಊರಿಗೆ ತೆರಳಲು ಬುಕ್ ಮಾಡಿದ್ದ ಬಸ್ ಗೆ ನೀಡಿದ್ದ ಹಣ ವಾಪಸ್ ನೀಡಲಾಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com