ಬೋಯಿಸ್ ಲಾಕರ್ ರೂಮ್: ಇನ್ಸ್ಟಾಗ್ರಾಮ್ ನಲ್ಲಿ ಅತ್ಯಾಚಾರವನ್ನು ವೈಭವೀಕರಿಸುವ ಚಾಟ್ ಗ್ರೂಪ್! 

ಇನ್ಸ್ಟಾಗ್ರಾಮ್ ನಲ್ಲಿ ಯುವತಿಯರ ಆಕ್ಷೇಪಾರ್ಹ ಫೋಟೊಗಳನ್ನು ಹಂಚಿ, ಅತ್ಯಾಚಾರವನ್ನು ವೈಭವೀಕರಿಸುವ ಬೋಯಿಸ್ ಲಾಕರ್ ರೂಮ್ ಎಂಬ ಹೆಸರಿನ ಖಾಸಗಿ ಗ್ರೂಪ್ ಬಯಲಿಗೆ ಬಂದಿದೆ. 

ದಕ್ಷಿಣ ದೆಹಲಿಯ ಹದಿಹರೆಯದ ಯುವಕರು ಈ ಅಶ್ಲೀಲ ಗ್ರೂಪ್ ನಲ್ಲಿ ಸೇರ್ಪಡೆಯಾಗಿದ್ದು, ಅಪ್ರಾಪ್ತ ವಯಸ್ಸಿನ ಬಾಲಕಿಯರ ಫೋಟೋಗಳನ್ನು ಹಂಚಿಕೊಂಡು ಅತ್ಯಾಚಾರ ನಡೆಸುವುದರ ಬಗ್ಗೆ ಯೋಜನೆ ರೂಪಿಸುತ್ತಿದ್ದರು. ಪೋರ್ನ್ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ. 

ಈ ಗ್ರೂಪ್ ನಲ್ಲಿರುವ ಯುವಕರ ವಿರುದ್ಧ ಐಟಿ ಕಾಯ್ದೆ 66, 67A ಪ್ರಕಾರ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ಈ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ. ದೆಹಲಿ ಮೂಲದ ಯುವತಿ ಈ ಗ್ರೂಪ್ ಚಾಟ್ ಗಳನ್ನು ಸೋರಿಕೆ ಮಾಡಿದ ಪರಿಣಾಮ ಸಾಮಾಜಿಕ ಜಾಲತಾಣದಲ್ಲಿ ಈ ಅಶ್ಲೀಲ ಗುಂಪಿನ ಬಗ್ಗೆ ಮಾಹಿತಿ ಲಭ್ಯವಾಗಿ ಪೊಲೀಸರು ಕ್ರಮ ಕೈಗೊಳ್ಳಲು ಸಾಧ್ಯವಾಗಿದೆ. 

ಈ ಬಗ್ಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥರಾದ ಸ್ವಾತಿ ಮಾಲಿವಾಲ್ ಪ್ರತಿಕ್ರಿಯೆ ನೀಡಿದ್ದು, ದೆಹಲಿ ಪೊಲೀಸರು ಹಾಗೂ ಇನ್ಸ್ಟಾಗ್ರಾಮ್ ಗೆ ನೊಟೀಸ್ ನೀಡಲಾಗಿದೆ. ಬಳಕೆದಾರರ ಐಡಿ, ಗುಂಪಿನಲ್ಲಿದ್ದ ಪ್ರತಿಯೊಬ್ಬರ ಲೊಕೇಷನ್, ಅಡ್ಮಿನ್ ಗಳ ಮಾಹಿತಿಯನ್ನು ನೀಡುವಂತೆ ಇನ್ಸ್ಟಾಗ್ರಾಮ್ ಗೆ ಸೂಚಿಸಲಾಗಿದೆ.

ಐಪಿಸಿ ಸೆಕ್ಷನ್ 507 ರ ಪ್ರಕಾರ ಮಹಿಳೆಗೆ ಅನಾಮಿಕ ಸಂದೇಶ ಕಳಿಸುವುದು ಅಪರಾಧವಾಗಿದ್ದು 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಅಸಭ್ಯ ಚಿತ್ರಗಳನ್ನು ಹಾಕುವುದು ಐಪಿಸಿ ಸೆಕ್ಷನ್ 509 ರ ಪ್ರಕಾರ 3 ವರ್ಷಗಳ ಕಾಲ ಜೈಲು ಶಿಕ್ಷೆಗೆ ಕಾರಣವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com