ಕೊರೋನಾ: ದೇಶದಲ್ಲಿ 24 ಗಂಟೆಗಳಲ್ಲಿ 2573 ಮಂದಿಯಲ್ಲಿ ವೈರಸ್ ಪತ್ತೆ; ಸೋಂಕಿತರ ಸಂಖ್ಯೆ 43,000ಕ್ಕೆ ಏರಿಕೆ

ದೇಶದಲ್ಲಿ ಕೊರೋನಾ ವೈರಸ್ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಕೇವಲ 24 ಗಂಟೆಗಳಲ್ಲಿ 2,573 ಮಂದಿಯಲ್ಲಿ ಹೊಸದಾಗಿ ವೈರಸ್ ದೃಢಪಟ್ಟಿದೆ. ಇದರಂತೆ ಸೋಂಕಿತರ ಸಂಖ್ಯೆ 43,000ಕ್ಕೇ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಕೇವಲ 24 ಗಂಟೆಗಳಲ್ಲಿ 2,573 ಮಂದಿಯಲ್ಲಿ ಹೊಸದಾಗಿ ವೈರಸ್ ದೃಢಪಟ್ಟಿದೆ. ಇದರಂತೆ ಸೋಂಕಿತರ ಸಂಖ್ಯೆ 43,000ಕ್ಕೇ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. 

ಅಲ್ಲದೆ, ಒಂದೇ ದಿನದಲ್ಲಿ ಬರೋಬ್ಬರಿ 83 ಮಂದಿ ಸಾವನ್ನಪ್ಪಿದ್ದು, ದೇಶದಲ್ಲಿ ಮಹಾಮಾರಿಗೆ ಮೃತಪಟ್ಟವರ ಸಂಖ್ಯೆ 1,389ಕ್ಕೆ ಏರಿಕೆಯಾಗಿದೆ. ಈ ನಡುವೆ ಸೋಂಕಿಗೊಳಗಾಗಿದ್ದ 43,000 ಪೈಕಿ 11,762 ಜನರು ಗುಣಮುಖರಾಗಿದ್ದು, ಪ್ರಸ್ತುತ ದೇಶದಲ್ಲಿ 29,685 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. 

ದೇಶದ ವಿವಿಧ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಮಹಾರಾಷ್ಟ್ರ ರಾಜ್ಯ ಒಂದರಲ್ಲಿಯೇ 12,974 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 548 ಮಂದಿ ಬಲಿಯಾಗಿದ್ದಾರೆ. ಇನ್ನು ಗುಜರಾತ್ ರಾಜ್ಯದಲ್ಲಿ 5428 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದರೆ, ಮಧ್ಯಪ್ರದೇಶದಲ್ಲಿ 2942, ಆಂಧ್ರಪ್ರದೇಶ 1650, ದೆಹಲಿ 4549 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com