ಬಿಎಸ್ ಎಫ್ ನ ಐವರು ಸಿಬ್ಬಂದಿಗೆ ಕೊರೋನಾ ಸೋಂಕು: ಹೆಚ್ಚಿದ ಭದ್ರತೆ

ಗಡಿ ಭದ್ರತಾ ಪಡೆಯ ಚಾಲಕನಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ನಂತರ ಇದೀಗ ದಕ್ಷಿಣ ಬಂಗಾಳ ಪಡೆಯ ಐವರು ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ತಗುಲಿದೆ ಎಂದು ಅರೆಸೇನಾಪಡೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಗಡಿ ಭದ್ರತಾ ಪಡೆಯ ಚಾಲಕನಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ನಂತರ ಇದೀಗ ದಕ್ಷಿಣ ಬಂಗಾಳ ಪಡೆಯ ಐವರು ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ತಗುಲಿದೆ ಎಂದು ಅರೆಸೇನಾಪಡೆ ತಿಳಿಸಿದೆ.

ಪತ್ತೆಯಾಗಿರುವ ಐವರು ಕೊರೋನಾ ಸೋಂಕಿತರಲ್ಲಿ ಮೂವರು ಅಂತರ ಸಚಿವಾಲಯ ಕೇಂದ್ರ ಪಡೆಯ ಬೆಂಗಾವಲು ಕರ್ತವ್ಯ ನಿತರ ಸಿಬ್ಬಂದಿಯಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನಿನ್ನೆ ರಾತ್ರಿ ಮತ್ತೆ ಐವರು ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಅವರನ್ನು ಎಂ ಆರ್ ಬಂಗೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ದಕ್ಷಿಣ ಬಂಗಾಳ ಪಡೆಯ ಬಿಎಸ್ಎಫ್ ಅಧಿಕಾರಿ ತಿಳಿಸಿದ್ದಾರೆ.

ಇವರು ಯಾರೆಲ್ಲಾ ಜೊತೆ ಸಂಪರ್ಕಿಸಿದ್ದರು ಎಂಬ ಬಗ್ಗೆ ಪತ್ತೆಕಾರ್ಯ ಆರಂಭವಾಗಿದ್ದು ಕೆಲವರನ್ನು ಕ್ವಾರಂಟೈನ್ ಗೆ ಕಳುಹಿಸಲಾಗಿದೆ. ಗಡಿ ಭದ್ರತಾ ಪಡೆಯಲ್ಲಿ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com