ಎಲ್ಲಾ ಬಗೆಯ ವೀಸಾ ಅಮಾನತು, ಒಸಿಐ ಕಾರ್ಡ್ದಾರರ ಪ್ರಯಾಣಕ್ಕೂ ನಿರ್ಬಂಧ

ರಾಜತಾಂತ್ರಿಕರು, ಅಧಿಕಾರಿಗಳು, ವಿಶ್ವಸಂಸ್ಥೆ ಅಥವಾ ಇತರ ಅಂತರಾಷ್ಟ್ರೀಯ ಪ್ರತಿನಿಧಿಗಳನ್ನು ಹೊರತುಪಡಿಸಿ ವಿದೇಶಿಗರಿಗೆ ನೀಡಿರುವ ಎಲ್ಲಾ ಬಗೆಯ ವೀಸಾಗಳ ಅಮಾನತು ಅವಧಿಯನ್ನು ಕೇಂದ್ರ ಗೃಹ ಸಚಿವಾಲಯ ವಿಸ್ತರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಾಜತಾಂತ್ರಿಕರು, ಅಧಿಕಾರಿಗಳು, ವಿಶ್ವಸಂಸ್ಥೆ ಅಥವಾ ಇತರ ಅಂತರಾಷ್ಟ್ರೀಯ ಪ್ರತಿನಿಧಿಗಳನ್ನು ಹೊರತುಪಡಿಸಿ ವಿದೇಶಿಗರಿಗೆ ನೀಡಿರುವ ಎಲ್ಲಾ ಬಗೆಯ ವೀಸಾಗಳ ಅಮಾನತು ಅವಧಿಯನ್ನು ಕೇಂದ್ರ ಗೃಹ ಸಚಿವಾಲಯ ವಿಸ್ತರಿಸಿದೆ.

ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ವಿಮಾನ ಪ್ರಯಾಣಕ್ಕೆ ಭಾರತ ಸರ್ಕಾರ ವಿಧಿಸಿರುವ ನಿರ್ಬಂಧ ತೆರವುಗೊಳಿಸುವವರೆಗೆ ವೀಸಾಗಳನ್ನು ಅಮಾನತುಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇನ್ನು ಲಾಕ್ ಡೌನ್ ನಿಂದಾಗಿ ಭಾರತದಲ್ಲಿ ಸಿಲುಕಿರುವ ವಿದೇಶಿಯರ ವೀಸಾ ಅವಧಿಯನ್ನು ಶುಲ್ಕ ರಹಿತವಾಗಿ ವಿಸ್ತರಣೆ ಮಾಡುವುದಾಗಿ ಗೃಹ ಸಚಿವಾಲಯ ತಿಳಿಸಿದೆ. ಆದರೆ ಅಂತರಾಷ್ಟ್ರಿಯ ವಿಮಾನ ಪ್ರಯಾಣ ಆರಂಭಗೊಂಡ ನಂತರದ 30 ದಿನಗಳವರೆಗೆ ಮಾತ್ರ ವೀಸಾ ವಿಸ್ತರಣೆ ಅನ್ವಯವಾಗಲಿದೆ.

ಸಾಗರೋತ್ತರ ಭಾರತೀಯ ನಾಗರಿಕ ಕಾರ್ಡ್(ಒಸಿಐ) ಹೊಂದಿರುವವರಿಗೆ ನೀಡುವ ಜೀವಿತಾವಧಿ ವೀಸಾವನ್ನೂ ಅಂತರಾಷ್ಟ್ರೀಯ ಪ್ರಯಾಣ ಆರಂಭವಾಗುವವರೆಗೆ ಅಮಾನತಿನಲ್ಲಿಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com