ಕೊರೋನಾ ಮಹಾಮಾರಿಗೆ ಇಬ್ಬರು ಬಿಎಸ್ಎಫ್ ಯೋಧರು ಸಾವು, ಹೊಸದಾಗಿ 41 ಸೋಂಕು ಪತ್ತೆ!

ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ದೇಶದಲ್ಲಿ 50 ಸಾವಿರ ಗಡಿ ದಾಟಿದ್ದು ಮಹಮಾರಿಗೆ ಇಬ್ಬರು ಬಿಎಸ್ಎಫ್ ಯೋಧರು ಬಲಿಯಾಗಿದ್ದಾರೆ. ಇನ್ನು ಹೊಸದಾಗಿ 41 ಸೋಂಕು ಪತ್ತೆಯಾಗಿದ್ದು ಒಟ್ಟಾರೆ 193 ಬಿಎಸ್ಎಫ್ ಯೋಧರು ಸೋಂಕಿಗೆ ತುತ್ತಾಗಿದ್ದಾರೆ.
ಬಿಎಸ್ಎಫ್
ಬಿಎಸ್ಎಫ್

ನವದೆಹಲಿ: ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ದೇಶದಲ್ಲಿ 50 ಸಾವಿರ ಗಡಿ ದಾಟಿದ್ದು ಮಹಮಾರಿಗೆ ಇಬ್ಬರು ಬಿಎಸ್ಎಫ್ ಯೋಧರು ಬಲಿಯಾಗಿದ್ದಾರೆ. ಇನ್ನು ಹೊಸದಾಗಿ 41 ಸೋಂಕು ಪತ್ತೆಯಾಗಿದ್ದು ಒಟ್ಟಾರೆ 193 ಬಿಎಸ್ಎಫ್ ಯೋಧರು ಸೋಂಕಿಗೆ ತುತ್ತಾಗಿದ್ದಾರೆ. 

ಇದೇ ವೇಳೆ ಸಿಆರ್ಪಿಎಫ್ ಯೋಧರೂ ಸಹ ಕೊರೋನಾ ಮಹಾಮಾರಿಗೆ ತುತ್ತಾಗಿದ್ದಾರೆ. ಒಟ್ಟಾರೆ 441 ಸಿಆರ್ಪಿಎಫ್ ಯೋಧರು ಚಿಕಿತ್ಸೆ ಪಡೆಯುತ್ತಿದ್ದಾರೆ. 

ಕೊರೋನಾ ವಿರುದ್ಧದ ಹೋರಾಟದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧರು ಕೊರೋನಾಗೆ ತುತ್ತಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇನ್ನು ಇಬ್ಬರು ಕೊರೋನಾಗೆ ಬಲಿಯಾಗಿದ್ದು ಹೊಸದಾಗಿ 41 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ 193 ಬಿಎಸ್ಎಫ್ ಯೋಧರು ಕೊರೋನಾಗೆ ತುತ್ತಾಗಿದ್ದಾರೆ. 

ದೇಶದಲ್ಲಿ 52,952 ಮಂದಿ ಕೊರೋನಾಗೆ ತುತ್ತಾಗಿದ್ದಾರೆ. ಇನ್ನು ಮಹಾಮಾರಿಗೆ 1,783 ಮಂದಿ ಬಲಿಯಾಗಿದ್ದಾರೆ. 15,266 ಮಂದಿ ಗುಣಮುಖರಾಗಿದ್ದು ಡಿಸ್ಚಾರ್ಜ್ ಆಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com