ಎಂಎಸ್ಎಂಇ ಸೆಕ್ಚರ್ ಕುಸಿತದ ಅಂಚಿನಲ್ಲಿದೆ: ನಿತಿನ್ ಗಡ್ಕರಿ

ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮ(ಎಂಎಸ್ಎಂಇ) ಕ್ಷೇತ್ರ ಕುಸಿತದ ಅಂಚಿನಲ್ಲಿದ್ದು, ಬೃಹತ್ ಕೈಗಾರಿಗಳು ಸಣ್ಣ ಕಂಪನಿಗಳ ಬಾಕಿಯನ್ನು ಒಂದು ತಿಂಗಳಲ್ಲಿಯೇ ಬಿಡುಗಡೆ ಮಾಡಬೇಕು ಎಂದು  ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಒತ್ತಾಯಿಸಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ
ಕೇಂದ್ರ ಸಚಿವ ನಿತಿನ್ ಗಡ್ಕರಿ

ನವದೆಹಲಿ: ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮ(ಎಂಎಸ್ಎಂಇ) ಕ್ಷೇತ್ರ ಕುಸಿತದ ಅಂಚಿನಲ್ಲಿದ್ದು, ಬೃಹತ್ ಕೈಗಾರಿಗಳು ಸಣ್ಣ ಕಂಪನಿಗಳ ಬಾಕಿಯನ್ನು ಒಂದು ತಿಂಗಳಲ್ಲಿಯೇ ಬಿಡುಗಡೆ ಮಾಡಬೇಕು ಎಂದು  ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಒತ್ತಾಯಿಸಿದ್ದಾರೆ.

ಎಂಎಸ್ಎಂಇ ಕ್ಷೇತ್ರ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಉಳಿವಿಗಾಗಿ ಹೋರಾಡುತ್ತಿವೆ ಎಂದು ಸಚಿವರು ಹೇಳಿದ್ದಾರೆ.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಬೃಹತ್ ಕೈಗಾರಿಕೆಗಳು ಎಂಎಸ್ಎಂಇ ಘಟಕಗಳ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಗಡ್ಕರಿ ಒತ್ತಾಯಿಸಿದ್ದಾರೆ.

ನಿಮಗೆ ಏನೇ ಸಮಸ್ಯೆಗಳಿದ್ದರೂ ವಿಶ್ವಾಸ ಕಳೆದುಕೊಳ್ಳಬೇಡಿ. ಕ್ಷೇತ್ರದ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿ ಎಂದು ಕೇಂದ್ರ ಸಚಿವರು ಎಂಎಸ್ಎಂಇಗಳಿಗೆ ಕರೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com