ವೈಜ್ಞಾನಿಕ ಸಾಕ್ಷ್ಯಗಳ ಅಗತ್ಯ ಇದೆ: ಗಂಗಾನದಿ ನೀರಿನ ಕ್ಲಿನಿಕಲ್ ಟೆಸ್ಟ್ ನಡೆಸಲು ಐಸಿಎಂಆರ್ ನಕಾರ

ಗಂಗಾ ನದಿ ನೀರಿನ ಕುರಿತು ಕ್ಲಿನಿಕಲ್ ಟೆಸ್ಟ್ ನಡೆಸಲು ನಿರಾಕರಿಸಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್), ಈ ಬಗ್ಗೆ ಮತ್ತಷ್ಟು ವೈಜ್ಞಾನಿಕ ಸಾಕ್ಷ್ಯಗಳ ಅಗತ್ಯ ಇದೆ ಎಂದು ಹೇಳಿದೆ.
ಗಂಗಾನದಿ
ಗಂಗಾನದಿ

ನವದೆಹಲಿ: ಗಂಗಾ ನದಿ ನೀರಿನ ಕುರಿತು ಕ್ಲಿನಿಕಲ್ ಟೆಸ್ಟ್ ನಡೆಸಲು ನಿರಾಕರಿಸಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್), ಈ ಬಗ್ಗೆ ಮತ್ತಷ್ಟು ವೈಜ್ಞಾನಿಕ ಸಾಕ್ಷ್ಯಗಳ ಅಗತ್ಯ ಇದೆ ಎಂದು ಹೇಳಿದೆ.

ಗಂಗಾ ನದಿ ನೀರು ಕೊರೋನಾ ವೈರಸ್ ಸೋಂಕಿಗೆ ಔಷಧಿಯಾಗಿ ಬಳಕೆ ಮಾಡಬಹುದು. ರುದ್ರಪ್ರಯಾಗ್ ಮತ್ತು ಮಧ್ಯಪ್ರದೇಶ ತೆಹ್ರಿ ಭಾಗದಲ್ಲಿ ಹರಿಯುವ ಗಂಗಾ ನದಿ ನೀರಲ್ಲಿ ಬ್ಯಾಕ್ಟೀರಿಯಾಫೇಜ್ ಎನ್ನುವ ಸೂಕ್ಷ್ಮಾಣು ಪ್ರಬೇಧಗಳಿದ್ದು, ಇದು ಮನುಷ್ಯ ಪ್ರಾಣಿ ಮತ್ತು ನೀರಿನ ಕೊಳವೆಯಲ್ಲಿರುವ ವೈರಸ್ ಗಳನ್ನು ತಿನ್ನುತ್ತದೆ. ಕೊರೋನಾ ವೈರಸ್ ಅನ್ನು ತಿನ್ನುವ ಸಾಧ್ಯತೆಗಳಿವೆ. ಹೀಗಾಗಿ ಈ ಬಗ್ಗೆ ಕ್ಲಿನಿಕಲ್ ಟೆಸ್ಟ್ ನಡೆಸುವಂತೆ ಕೇಂದ್ರ ಜಲ ಶಕ್ತಿ ಸಚಿವಾಲಯ ಐಸಿಎಂಆರ್ ಗೆ ಮನವಿ ಮಾಡಿಕೊಂಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಐಸಿಎಂಆರ್ ನ ಸಂಶೋಧನಾ ಪ್ರಸ್ತಾಪಗಳ ಮೌಲ್ಯಮಾಪನ ಸಮಿತಿ ಮುಖ್ಯಸ್ಥ ಡಾ. ವೈಕೆ ಗುಪ್ತಾ ಅವರು, ಈ ಸಂದರ್ಭದಲ್ಲಿ ಗಂಗಾ ನದಿ ನೀರಿನ ಕ್ಲಿನಿಕಲ್ ಅಧ್ಯಯನ ನಡೆಸಲು ಅಗತ್ಯವಾದ ವೈಜ್ಞಾನಿಕ ಸಾಕ್ಷ್ಯಗಳು ಇಲ್ಲ ಮತ್ತು ಬಲವಾದ ಮಾಹಿತಿಯೂ ಇಲ್ಲ ಎಂದಿದ್ದಾರೆ.

ಗಂಗಾನದಿಯಲ್ಲಿ ಸೂಕ್ಷ್ಮ ವೈರಸ್‍ಗಳ ವಿರುದ್ಧ ಹೋರಾಡುವ ಬ್ಯಾಕ್ಟೀರಿಯಾಫೇಜ್ ಎನ್ನುವ ಸೂಕ್ಷ್ಮಾಣು ಪ್ರಬೇಧಗಳು ಮತ್ತು ವೈರಸ್ ಗಳನ್ನು ತಿನ್ನುವ ಬಗ್ಗೆ ಇನ್ನಷ್ಟು ವೈಜ್ಞಾನಿಕ ಸಾಕ್ಷ್ಯಗಳನ್ನು ನೀಡುವಂತೆ ಕೋರಿದ್ದು, ಸದ್ಯ ಇದನ್ನು ಕ್ಲಿನಿಕಲ್ ಟೆಸ್ಟ್ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com