ತಬ್ಲಿಘಿ ಜಮಾತ್ ನ ಬ್ಯಾಂಕ್ ಖಾತೆ ಮುಟ್ಟುಗೋಲು, ವಹಿವಾಟಿಗೆ ನಿರ್ಬಂಧ! 

ತಬ್ಲಿಘಿ ಜಮಾತ್ ಗೆ ಸಂಬಂಧಿಸಿದ್ದ ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು, ವಹಿವಾಟಿಗೆ ನಿರ್ಬಂಧ ವಿಧಿಸಲಾಗಿದೆ. 
ತಬ್ಲಿಘಿ ಜಮಾತ್ (ಸಂಗ್ರಹ ಚಿತ್ರ)
ತಬ್ಲಿಘಿ ಜಮಾತ್ (ಸಂಗ್ರಹ ಚಿತ್ರ)

ನವದೆಹಲಿ: ತಬ್ಲಿಘಿ ಜಮಾತ್ ಗೆ ಸಂಬಂಧಿಸಿದ್ದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ವಹಿವಾಟಿಗೆ ನಿರ್ಬಂಧ ವಿಧಿಸಲಾಗಿದೆ. 

ತನಿಖಾ ಸಂಸ್ಥೆಗಳ ಸೂಚನೆ ಮೇರೆಗೆ ಬ್ಯಾಂಕ್ ಗಳು ಈ ಕ್ರಮವನ್ನು ಜಾರಿಗೊಳಿಸಿದ್ದು ತಮ್ಲಿಘಿ ಜಮಾತ್ ಗೆ ಸಂಬಂಧಪಟ್ಟ ಖಾತೆದಾರರು ಯಾರೂ ಸಹ ಖಾತೆಯಿಂದ ವಹಿವಾಟು ನಡೆಸುವಂತಿಲ್ಲ. ಈ ಕ್ರಮವನ್ನು ತಬ್ಲಿಘಿ ಜಮಾತ್ ನ ಮೌಲಾನ ಸಾದ್ ನ ವಿರುದ್ಧ ಸಾಕ್ಷ್ಯ ಸಂಗ್ರಹ ಹಾಗೂ ಆತನನ್ನು ಬಂಧಿಸುವುದಕ್ಕಾಗಿ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಕೊರೋನಾ ತಡೆಗೆ ಲಾಕ್ ಡೌನ್ ಘೋಷಣೆಯಾದ ಬಳಿಕವೂ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ದೆಹಲಿಯಲ್ಲಿ ತಬ್ಲಿಘಿ ಜಮಾತ್ ನ ಧಾರ್ಮಿಕ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಭಾಗಿಯಾದವರು ದೇಶದ ವಿವಿಧ ಭಾಗಗಳಿಗೆ ತೆರಳಿದ್ದರು. ಈ ಬೆಳವಣಿಗೆ ಬಳಿಕ ಕೊರೋನಾ ಸೋಂಕು ಹೆಚ್ಚಿತ್ತು. ನಂತರದ ದಿನಗಳಲ್ಲಿ ಮೌಲಾನಾ ಸಾದ್ 40 ದಿನಗಳ ಕಾಲ ತಲೆಮರೆಸಿಕೊಂಡಿದ್ದು ಆತನನ್ನು ಪೊಲೀಸರು ಹುಡುಕುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com