ಫ್ಯಾಕ್ಟರಿ ಪುನರಾರಂಭವಾದಾಗ ಅನಿಲ ಆಕಸ್ಮಿಕ ಸೋರಿಕೆಯಾಗಿ ದುರಂತ ಸಂಭವಿಸಿದೆ: ಎನ್ ಡಿಆರ್ ಎಫ್

ಲಾಕ್ ಡೌನ್ ಕಾರಣದಿಂದ ಮುಚ್ಚಿದ್ದ ವಿಶಾಖಪಟ್ಟಣಂನ ಪ್ಲಾಸ್ಟಿಕ್ ಫ್ಯಾಕ್ಟರಿ ಮತ್ತೆ ಕಾರ್ಯಾರಂಭ ಮಾಡಿದ ಸಮಯದಲ್ಲಿ ಅನಿಲ ಸೋರಿಕೆಯ ಘೋರ ದುರಂತ ಗುರುವಾರ ನಸುಕಿನ ಜಾವ ಸಂಭವಿಸಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮುಖ್ಯಸ್ಥರು (ಎನ್ ಡಿಆರ್ ಎಫ್) ತಿಳಿಸಿದ್ದಾರೆ.
ಆಸ್ಪತ್ರೆ ವೈದ್ಯರೊಂದಿಗೆ ಎನ್ ಡಿಆರ್ ಎಫ್ ಅಧಿಕಾರಿಗಳು ಚರ್ಚೆ
ಆಸ್ಪತ್ರೆ ವೈದ್ಯರೊಂದಿಗೆ ಎನ್ ಡಿಆರ್ ಎಫ್ ಅಧಿಕಾರಿಗಳು ಚರ್ಚೆ

ವಿಶಾಖಪಟ್ಟಣಂ: ಲಾಕ್ ಡೌನ್ ಕಾರಣದಿಂದ ಮುಚ್ಚಿದ್ದ ವಿಶಾಖಪಟ್ಟಣಂನ ಎಲ್ ಜಿ ಪಾಲಿಮರ್ ಪ್ಲಾಸ್ಟಿಕ್ ತಯಾರಿಕೆ ಫ್ಯಾಕ್ಟರಿ ಮತ್ತೆ ಕಾರ್ಯಾರಂಭ ಮಾಡಿದ ಸಮಯದಲ್ಲಿ ಅನಿಲ ಸೋರಿಕೆಯ ಘೋರ ದುರಂತ ಗುರುವಾರ ನಸುಕಿನ ಜಾವ ಸಂಭವಿಸಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮುಖ್ಯಸ್ಥರು (ಎನ್ ಡಿಆರ್ ಎಫ್) ತಿಳಿಸಿದ್ದಾರೆ.
 

ಸ್ಟೈರೆನೆ ಅನಿಲ ಸೋರಿಕೆಯಾದ ನಂತರ ಅದನ್ನು ಸೇವಿಸಿ ತೀವ್ರ ಅಸ್ವಸ್ಥಗೊಂಡು 80ರಿಂದ 100 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ನಸುಕಿನ ಜಾವ 2.30 ರಿಂದ 3 ಗಂಟೆ ವೇಳೆಗೆ ಈ ದುರ್ಘಟನೆ ಸಂಭವಿಸಿದೆ ಎಂದು ಎನ್ ಡಿಆರ್ ಎಫ್ ಮಹಾ ನಿರ್ದೇಶಕ ಎಸ್ ಎನ್ ಪ್ರಧಾನ್ ತಿಳಿಸಿದ್ದಾರೆ.
 

ಸದ್ಯ ಫ್ಯಾಕ್ಟರಿ ಬಳಿ ವಿಶೇಷ ಅನಿಲ ಸೋರಿಕೆ ತಪಾಸಣಾ ಕೇಂದ್ರವಿದ್ದು ಯಾರಿಗೆಲ್ಲಾ ಉಸಿರಾಟಕ್ಕೆ ತೊಂದರೆ ಮತ್ತು ಇತರ ಸಮಸ್ಯೆಗಳಾಗುತ್ತಿದೆ ಎಂದು ತಪಾಸಣೆ ಮಾಡುತ್ತಿದ್ದಾರೆ. ನರ ಮಂಡಲ ವ್ಯವಸ್ಥೆ, ಗಂಟಲು, ಚರ್ಮ,ಕಣ್ಣುಗಳು ಮತ್ತು ಶರೀರದ ಬೇರೆ ಭಾಗಗಳ ಮೇಲೆ ಸ್ಟೈರೆನ್ ಅನಿಲ ಪರಿಣಾಮ ಬೀರುತ್ತದೆ ಎಂದರು.
 

ಪ್ಲಾಸ್ಟಿಕ್ ಕಾರ್ಖಾನೆಯಾಗಿರುವ ಇದು ಮರು ಕಾರ್ಯಾರಂಭ ಮಾಡಿದಾಗ ಆಕಸ್ಮಿಕವಾಗಿ ಅನಿಲ ಸೋರಿಕೆಯಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಅವರು ಹೇಳಿದರು.

ಈ ಮಧ್ಯೆ, ಸ್ಥಳೀಯ ಪಾಲಿಕೆ ಮತ್ತು ಪೊಲೀಸರು ಸಾವಿರದಿಂದ ಸಾವಿರದ ಐನ್ನೂರು ಮಂದಿಯನ್ನು ಸುರಕ್ಷತೆ ದೃಷ್ಟಿಯಿಂದ ಸ್ಥಳಾಂತರ ಮಾಡಲಾಗಿದ್ದು, ಇವರಲ್ಲಿ 800ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರ್ಘಟನೆಯಿಂದ ಸುತ್ತಮುತ್ತಲ ನಾಲ್ಕೈದು ಗ್ರಾಮಗಳ 500ಕ್ಕೂ ಹೆಚ್ಚು ಕುಟುಂಬಗಳಿಗೆ ಪರಿಣಾಮ ಬೀರಿದೆ. ಪಕ್ಕದ ಎರಡು ಗ್ರಾಮಗಳಿಗೆ ತೀವ್ರ ಹಾನಿಯಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com