ಕೊವಿಡ್-19: ಉತ್ತರ ಪ್ರದೇಶದಲ್ಲಿ ಕರ್ನಾಟಕ, ಅಸ್ಸಾಂ ಮೂಲದ 24 ತಬ್ಲಿಘಿಗಳ ವಿರುದ್ಧ ಕೇಸ್

ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನ ಪಟ್ಟಣದ ಮಸೀದಿಯಲ್ಲಿ ತಂಗಿದ್ದ ಕರ್ನಾಟಕ ಹಾಗೂ ಅಸ್ಸಾಂ ಮೂಲದ ತಬ್ಲಿಘಿ ಜಮಾತ್ ಸದಸ್ಯರ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಬ್ಲಿಘಿ ಜಮಾತ್ ಸದಸ್ಯರು
ತಬ್ಲಿಘಿ ಜಮಾತ್ ಸದಸ್ಯರು

ಮುಜಾಫರ್ ನಗರ: ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನ ಪಟ್ಟಣದ ಮಸೀದಿಯಲ್ಲಿ ತಂಗಿದ್ದ ಕರ್ನಾಟಕ ಹಾಗೂ ಅಸ್ಸಾಂ ಮೂಲದ ತಬ್ಲಿಘಿ ಜಮಾತ್ ಸದಸ್ಯರ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗ ಕಾಯ್ದೆ ಅಡಿ 24 ತಬ್ಲಿಘಿ ಸದಸ್ಯರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಎಸ್ಎಚ್ ಒ ಯಶಪಾಲ್ ಧಮಾ ಅವರು ಹೇಳಿದ್ದಾರೆ.

ಆರೋಪಿಗಳು ಕಳೆದ ಏಪ್ರಿಲ್ 23ರಿಂದ ಕೈರಾನ ಪಟ್ಟಣದ ಪತ್ವಾರಿ ಮಸೀದಿಯಲ್ಲಿ ತಂಗಿದ್ದರು. ಆದರೆ ಅವರು ತಮ್ಮ ಪ್ರಯಾಣ ಮಾಹಿತಿಯನ್ನು ಗೌಪ್ಯವಾಗಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ರೀತಿ ತಬ್ಲಿಘಿ ಸಭೆಗೆ ಹೋಗಿಬಂದ ಬಗ್ಗೆ ಮಾಹಿತಿ ನೀಡದೆ ಶೆರ್ನಾನಗರದಲ್ಲಿನ ಮಸೀದಿಯಲ್ಲಿ ತಂಗಿದ್ದ 10 ಮಂದಿಯ ವಿರುದ್ಧ ಕೇಸ್ ದಾಖಲಿಸಲಾಗಿದ್ದು, ಈ ಪೈಕಿ ಓರ್ವ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com